ವಿಡಿಯೋ
ವೀಕ್ಷಕರೆ, ಬೂದಿ ಮುಚ್ಚಿದ ಕೆಂಡದಂತಿದ್ದ, ಶಾಂತಿಯ ನಿರೀಕ್ಷೆಯಲ್ಲಿದ್ದ ಮಧ್ಯಪ್ರಾಚ್ಯದಲ್ಲಿ ಮತ್ತೆ ಕ್ಷಿಪಣಿಗಳು ಅಪ್ಪಳಿಸುತ್ತಾ? ಬಾಂಬ್ ಗಳು ಸಿಡಿಯುತ್ತಾ? ಟ್ರಂಪ್ ಅವರ ಹೇಳಿಕೆ ನೋಡ್ತಿದ್ರೆ ಈ ಸಾಧ್ಯತೆಗಳು ದಟ್ಟವಾಗಿದೆ.
ಇರಾನ್‌ನ ಇತ್ತೀಚಿನ ಶಾಂತಿ ಪ್ರಸ್ತಾಪವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿರಸ್ಕರಿಸಿದ್ದು, ಅಮೆರಿಕದ ಪ್ರಸ್ತಾವನೆಗೆ ಟೆಹ್ರಾನ್‌ನ ಪ್ರತಿಕ್ರಿಯೆ "ಸಂಪೂರ್ಣವಾಗಿ ಒಪ್ಪಲಾಗದು" ಎಂದು ಹೇಳಿದ್ದಾರೆ.
ಅಮೆರಿಕದ ಕದನ ವಿರಾಮ ಪ್ರಸ್ತಾವಕ್ಕೆ ಪ್ರತಿಕ್ರಿಯಿಸಿದ್ದ ಇರಾನ್‌ತನ್ನ ಹೆಚ್ಚು ಸಂವರ್ಧಿತ ಯುರೇನಿಯಂನ ಕೆಲವು ಭಾಗವನ್ನು ದುರ್ಬಲಗೊಳಿಸುವ ಸಾಧ್ಯತೆಯ ಸುಳಿವು ನೀಡಿತ್ತು, ಉಳಿದವುಗಳನ್ನು ಸ್ವಲ್ಪ ಸಮಯದವರೆಗೆ ಮೂರನೇ ದೇಶಕ್ಕೆ ವರ್ಗಾಯಿಸುವ ಸಾಧ್ಯತೆಯನ್ನು ಮುಂದಿಟ್ಟು. ಆದರೆ ಟ್ರಂಪ್ ಇದನ್ನು ತಿರಸ್ಕರಿಸಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.
Advertisement