Watch | ಬಿಎಂಟಿಸಿ ಬಸ್ ದರ ಶೇ. 33-35ರಷ್ಟು; ಇತರ ಸಾರಿಗೆ ಬಸ್ ದರ ಶೇ. 23ರಷ್ಟು ಹೆಚ್ಚಳ!

ಕರ್ನಾಟಕದ ನಾಲ್ಕು ಸರ್ಕಾರಿ ಸಾರಿಗೆ ನಿಗಮಗಳಲ್ಲಿ ಬಸ್ ದರಗಳನ್ನು ಹೆಚ್ಚಿಸಲಾಗಿದೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ಬುಧವಾರ ತಿಳಿಸಿದ್ದಾರೆ.

ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪರಿಷ್ಕೃತ ದರಗಳು ಬುಧವಾರ ಮಧ್ಯರಾತ್ರಿಯಿಂದ ಜಾರಿಗೆ ಬರಲಿವೆ ಎಂದು ಹೇಳಿದರು.

ಕೆಎಸ್‌ಆರ್‌ಟಿಸಿ (KSRTC) ಬಸ್‌ಗಳಲ್ಲಿ ಗರಿಷ್ಠ 9 ರೂಪಾಯಿಗಳಷ್ಟು ಮತ್ತು ಬಿಎಂಟಿಸಿ (BMTC) ನಗರ ಬಸ್‌ಗಳಲ್ಲಿ ಗರಿಷ್ಠ 10 ರೂಪಾಯಿಗಳಷ್ಟು ದರ ಹೆಚ್ಚಳವಾಗಿದೆ.

ಬೆಂಗಳೂರಿನ ಬಿಎಂಟಿಸಿ ಬಸ್‌ಗಳಲ್ಲಿ ಕನಿಷ್ಠ ದರವು 6 ರೂಪಾಯಿಯಿಂದ 10 ರೂಪಾಯಿಗೆ ಏರಿಕೆಯಾಗಲಿದ್ದು, ಗರಿಷ್ಠ ದರವು 35 ರೂಪಾಯಿಯಿಂದ 45 ರೂಪಾಯಿಗೆ ಹೆಚ್ಚಾಗಲಿದೆ.

ಎಸಿ 'ವಜ್ರ' ಬಸ್‌ಗಳ ಗರಿಷ್ಠ ದರವು 75 ರೂಪಾಯಿಯಿಂದ 90 ರೂಪಾಯಿಗೆ ಏರಿಕೆಯಾಗಲಿದೆ. ವಿಡಿಯೋ ಇಲ್ಲಿದೆ ನೋಡಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X