ವಿಡಿಯೋ
ಬೆಂಗಳೂರಿನ ಶ್ರೀರಾಮಪುರ ಪ್ರದೇಶದಲ್ಲಿ ಕ್ಯಾಬ್ ಚಾಲಕನೊಬ್ಬ ತನ್ನ ಪತ್ನಿಯ ಕುಟುಂಬದ ಏಳು ಮಂದಿಯನ್ನು (ಏಳು ವರ್ಷದ ಬಾಲಕನೂ ಸೇರಿದಂತೆ) ಹತ್ಯೆ ಮಾಡಿರುವ ಘಟನೆ ನಡೆದಿದೆ.
ಭಾಷ್ಯಂ ವೃತ್ತದ ಬಳಿ ಇರುವ ತನ್ನ ಮನೆಯಲ್ಲಿ ಆರೋಪಿ ಶೇಖರ್, ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಎರಡು ದಿನಗಳ ಅವಧಿಯಲ್ಲಿ ಈ ಹತ್ಯೆಗಳನ್ನು ಎಸಗಿದ್ದಾನೆ.
ಬಳಿಕ ಮೃತದೇಹಗಳನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟ ಮತ್ತು ಕರಾವಳಿ ಕರ್ನಾಟಕದ ಚಾರ್ಮಾಡಿ ಘಾಟ್ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಎಸೆದಿದ್ದಾನೆ.
ರಾಜಾಜಿನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಹತ್ಯೆಗಳು ಯಾವಾಗ ನಡೆದವು ಎಂಬ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.