ವಿಡಿಯೋ
ಬೆಂಗಳೂರಿನ ಸಿಎಂ ಗೃಹ ಕಚೇರಿ 'ಕೃಷ್ಣಾ'ದಲ್ಲಿ ಶುಕ್ರವಾರ 'ಗೃಹಲಕ್ಷ್ಮಿ' ಫಲಾನುಭವಿಗಳ ಸಮ್ಮಿಲನ ಹಾಗೂ ವಿಶೇಷ ಸಂವಾದ ಕಾರ್ಯಕ್ರಮ ನಡೆಯಿತು.
ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಮಹಿಳೆಯರೊಂದಿಗೆ ಮುಕ್ತವಾಗಿ ಸಂವಾದ ನಡೆಸಿದರು.
ನಾವು 5 ಗ್ಯಾರಂಟಿಗಳನ್ನು ಪ್ರಕಟಿಸಿದಾಗ ವಿರೋಧ ಪಕ್ಷದವರು ನಮ್ಮನ್ನು ನಂಬಿರಲಿಲ್ಲ.
ಆದರೆ ಇವತ್ತು 1 ಕೋಟಿ 24 ಲಕ್ಷ ಮನೆ ಯಜಮಾನಿಯರಿಗೆ ಯಶಸ್ವಿಯಾಗಿ ಮಾಸಿಕ 2,000 ರೂಪಾಯಿ ಹಣವನ್ನು ತಲುಪಿಸುತ್ತಿದ್ದೇವೆ ಎಂದು ಸಿಎಂ ಸ್ಮರಿಸಿದರು.
ಈವರೆಗೆ ಯೋಜನೆಯಡಿ ಒಟ್ಟು 86,000 ಕೋಟಿ ರೂಪಾಯಿ ಪಾವತಿಯಾಗಿದೆ ಎಂದು ವಿವರಿಸಿದರು. ವಿಡಿಯೋ ಇಲ್ಲಿದೆ ನೋಡಿ.