ವಿಡಿಯೋ
ಪ್ರಧಾನಿ ಮೋದಿ ಅವರು ಗುರುವಾರ ನವದೆಹಲಿಯಲ್ಲಿ ಕೈಗಾರಿಕಾ ಸಂಸ್ಥೆ 'ಫಿಕ್ಕಿ'ಯ (FICCI) ವಾರ್ಷಿಕ ಸಾಮಾನ್ಯ ಸಭೆ ಮತ್ತು ವಾರ್ಷಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.
ದೇಶದ ಮುಂದಿನ ಬೆಳವಣಿಗೆಗೆ ಅಗತ್ಯವಿರುವ ಹೆಚ್ಚಿನ ಸುಧಾರಣೆಗಳ ಕುರಿತು ಯಾವುದೇ ಹಿಂಜರಿಕೆ ಅಥವಾ ಸಂಕೋಚವಿಲ್ಲದೆ ಸಲಹೆಗಳನ್ನು ನೀಡುವಂತೆ ಭಾರತೀಯ ಉದ್ಯಮ ವಲಯವನ್ನು ಕೋರಿದರು.
ಭಾರತವನ್ನು ಸ್ವಾವಲಂಬಿಯನ್ನಾಗಿಸುವತ್ತ ಗಮನಹರಿಸುವಂತೆ ಕಾರ್ಪೊರೇಟ್ ಸಂಸ್ಥೆಗಳಿಗೆ ಪ್ರಧಾನಿಯವರು ಕರೆ ನೀಡಿದರು. ಅಲ್ಲದೆ, ಕೃಷಿ ಮತ್ತು ಅದಕ್ಕೆ ಸಂಬಂಧಿತ ವಲಯಗಳಲ್ಲಿ ಹೆಚ್ಚಿನ ಬಂಡವಾಳ ಹೂಡುವಂತೆಯೂ ಅವರು ಒತ್ತಾಯಿಸಿದರು.
ಕಾರ್ಪೊರೇಟ್ ತೆರಿಗೆಯನ್ನು ಶೇಕಡಾ 30 ರಿಂದ ಶೇಕಡಾ 22 ಕ್ಕೆ ಇಳಿಸಲಾಗಿದೆ. ನೀವು ಉದ್ಯೋಗಿಗಳ ಸಂಖ್ಯೆಯನ್ನು ಹೆಚ್ಚಿಸಿದ್ದೀರಾ ಮತ್ತು ವೇತನವನ್ನು ಏರಿಸಿದ್ದೀರಾ? ಎಂದು ಉದ್ಯಮ ವಲಯವನ್ನು ಪ್ರಶ್ನಿಸಿದರು. ವಿಡಿಯೋ ಇಲ್ಲಿದೆ ನೋಡಿ.