Watch | ಗಾಲ್ಫ್ ಕೇವಲ ಶ್ರೀಮಂತರ ಕ್ರೀಡೆ ಅಲ್ಲ: ಮೈಸೂರಿನ ಗೋಲ್ಡನ್ ಗರ್ಲ್ ಪ್ರಣವಿ ಅರಸ್

ಮೈಸೂರು ಮೂಲದ 22 ವರ್ಷದ ಪ್ರಣವಿ ಅರಸ್ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಗಾಲ್ಫರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಅಂತಿಮ ಸುತ್ತಿನಲ್ಲಿ ಕೇವಲ ಒಂದು ಸ್ಟ್ರೋಕ್ ಮುನ್ನಡೆ ಕಾಯ್ದುಕೊಂಡು ಅವರು ಈ ಸಾಧನೆ ಮಾಡಿದರು.

ಪದಕ ಗೆದ್ದ ಬಳಿಕ ಮೈಸೂರಿಗೆ ಆಗಮಿಸಿದ ಅವರಿಗೆ ಭವ್ಯ ಸ್ವಾಗತ ನೀಡಲಾಯಿತು.

ತೆರೆದ ಜೀಪಿನಲ್ಲಿ ಅವರನ್ನು ನಗರದ ಮುಖ್ಯ ಬೀದಿಯಲ್ಲಿ ಮೆರವಣಿಗೆ ಮಾಡುವ ಮೂಲಕ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.

ಏಷ್ಯನ್ ಗೇಮ್ಸ್​ನಲ್ಲಿ ಚಿನ್ನ ಗೆದ್ದಿರುವುದಕ್ಕೆ ತುಂಬಾನೇ ಸಂತಸವಾಗುತ್ತಿದೆ.

ಮನೆಯವರ ಪ್ರೋತ್ಸಾಹವಿಲ್ಲದೇ ನಾನಿಂದು ಈ ಸ್ಥಾನದಲ್ಲಿ ನಿಲ್ಲಲಾಗುತ್ತಿರಲಿಲ್ಲ ಎಂದು ಪ್ರಣವಿ ಅರಸ್ ಕುಟುಂಬದ ಸಹಕಾರವನ್ನು ಸ್ಮರಿಸಿಕೊಂಡರು. ವಿಡಿಯೋ ಇಲ್ಲಿದೆ ನೋಡಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com