ವಿಡಿಯೋ
ಸಚಿವ ಯತೀಂದ್ರ ಸಿದ್ದರಾಮಯ್ಯ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಮೈಸೂರಿನಲ್ಲಿ ಸುತ್ತೂರು ಮಠಕ್ಕೆ ಭೇಟಿ ನೀಡಿ, ಸುತ್ತೂರು ಶ್ರೀಗಳಿಂದ ಆಶೀರ್ವಾದ ಪಡೆದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಸ್ಟಿಂಗ್ ಮಾಡಿಸಿದ್ದ ಉದ್ದೇಶ ಸಫಲ ಆಗಲ್ಲ, 8 ವರ್ಷ ಸಿಎಂ ಆಗಿದ್ದೇನೆ. ಆ ಅವಧಿಯಲ್ಲಿ ಈ ಯತ್ನ ಆಗಿಲ್ಲ.
ಜನರಿಗೆ ಸತ್ಯ ಗೊತ್ತಾಗಬೇಕು. ಇದು ಸುಳ್ಳು ಆರೋಪ, ಅದಕ್ಕಾಗಿ ನಾನು ದೂರು ಕೊಟ್ಟಿದ್ದೇನೆ, ಸೆಪ್ಟೆಂಬರ್ನಲ್ಲೇ ನನಗೆ ಸ್ಟಿಂಗ್ ವಿಚಾರ ಗೊತ್ತಾಗಿತ್ತು ಎಂದರು.
ನಾನು ತಪ್ಪೇ ಮಾಡಿಲ್ಲ, ನನ್ನ ಪರ ಯಾರು ಇರುವುದು ಬೇಡ. ಯಾರ ನೈತಿಕ ಬೆಂಬಲವೂ ಬೇಡ, SIT ಉನ್ನತ ಮಟ್ಟದ ತನಿಖೆ ಬೇಕಿಲ್ಲ, ಒಬ್ಬ ಪತ್ರಕರ್ತ, ಓರ್ವ ಮಹಿಳೆ ಇದರ ಹಿಂದೆ ಇದ್ದಾರೆ.
ನನ್ನ ಬ್ಲಾಕ್ ಮೇಲ್ ಮಾಡಲು ಯತ್ನಿಸಿದ್ದಾರೆ. ಸತ್ಯ ಹೊರ ಬರಲಿ ಅಂತ ನಾನೇ ದೂರು ಕೊಟ್ಟಿದ್ದೇನೆ. ಅಪಪ್ರಚಾರ ಆಗಬಾರದು ಅಂತ ಸ್ಟೇ ತಂದೆ ಅಷ್ಟೇ ಎಂದು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ರು. ವಿಡಿಯೋ ಇಲ್ಲಿದೆ ನೋಡಿ.