Watch | 'ನನಗೆ ಭೂಗತ ಲೋಕ ಮತ್ತು ರೆಡ್ ಲೈಟ್ ಏರಿಯಾಗಳಿಂದ ಹೆಚ್ಚಿನ ಮತಗಳು ಬಂದಿವೆ'

ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ನಾಗ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾಡಿದ ಹೇಳಿಕೆಯ ವಿಡಿಯೋ ವೈರಲ್ ಆಗಿ ಹೊಸ ರಾಜಕೀಯ ಚರ್ಚೆಗೆ ನಾಂದಿ ಹಾಡಿದೆ.

ಚುನಾವಣೆಯ ಸಮಯದಲ್ಲಿ ಕೆಲವು ಉನ್ನತ ಶಿಕ್ಷಣ ಪಡೆದವರು ಇದ್ದಂತಹ ಪ್ರದೇಶಗಳಿಗಿಂತ ಭೂಗತ ಲೋಕ ಮತ್ತು ರೆಡ್ ಲೈಟ್ ಪ್ರದೇಶಗಳಿಂದ ತಮಗೆ ಹೆಚ್ಚಿನ ಮತಗಳು ಬಂದಿವೆ ಎಂದು ಗಡ್ಕರಿ ಹೇಳಿದರು.

ಆದಾಗ್ಯೂ, ತಮ್ಮ ಹೇಳಿಕೆಗಳನ್ನು ಅಪರಾಧ ಚಟುವಟಿಕೆಗಳಿಗೆ ಅಥವಾ ಅವುಗಳಲ್ಲಿ ಭಾಗಿಯಾಗಿರುವ ಜನರಿಗೆ ಬೆಂಬಲ ಎಂದು ಅರ್ಥೈಸಬಾರದು ಎಂದು ಗಡ್ಕರಿ ಸ್ಪಷ್ಟಪಡಿಸಿದರು.

ಅಂತಹ ಪ್ರದೇಶಗಳ ಜನರೊಂದಿಗಿನ ಅವರ ಸಂಬಂಧ ಮತ್ತು ಅಲ್ಲಿ ನಡೆಸಲಾದ ಸಾಮಾಜಿಕ ಕಾರ್ಯ ಮತ್ತು ಅಭಿವೃದ್ಧಿ ಉಪಕ್ರಮಗಳಿಗೆ ಸಂಬಂಧಿಸಿ ಹೆಚ್ಚು ಮತ ಪಡೆದಿದ್ದಾಗಿ ಗಡ್ಕರಿ ತಿಳಿಸಿದರು.

ಗಡ್ಕರಿ, ತಮ್ಮ ದೀರ್ಘ ರಾಜಕೀಯ ಪ್ರಯಾಣ ಮತ್ತು ಸಮಾಜದ ವಿವಿಧ ವರ್ಗಗಳ ಜನರೊಂದಿಗಿನ ಸಂಬಂಧಗಳ ಬಗ್ಗೆ ಮಾತನಾಡಿದರು. ವಿಡಿಯೋ ಇಲ್ಲಿದೆ ನೋಡಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com