ವಿಡಿಯೋ
ಬ್ರಿಕ್ಸ್ (BRICS) ಶೃಂಗಸಭೆಯಿಂದ ದೇಶಕ್ಕೆ ಆಗುವ ಪ್ರಯೋಜನಗಳ ಬಗ್ಗೆ ಪಿ. ಚಿದಂಬರಂ ಪ್ರಶ್ನೆ ಎತ್ತಿದ ಮರುದಿನವೇ ಭಾರತ ಈ ಶೃಂಗಸಭೆಯನ್ನು ಆಯೋಜಿಸಿರುವುದನ್ನು ಹಿರಿಯ ನಾಯಕ ಶಶಿ ತರೂರ್ ಶ್ಲಾಘಿಸಿದ್ದಾರೆ.
ಬ್ರಿಕ್ಸ್ ಶೃಂಗಸಭೆಯ ಭಾರತದ ಆತಿಥ್ಯವನ್ನು "ಅತ್ಯಂತ ಪ್ರತಿಷ್ಠಿತ ವಿಷಯ" ಎಂದು ಬಣ್ಣಿಸಿದ್ದಾರೆ.
ದೆಹಲಿಯಲ್ಲಿ ನಡೆದ ಶೃಂಗಸಭೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ತರೂರ್, ಬ್ರಿಕ್ಸ್‌ನ ವ್ಯಾಪ್ತಿ ಮತ್ತು 'ಗ್ಲೋಬಲ್ ಸೌತ್'ಗೆ ಅದರ ಪ್ರಸ್ತುತತೆಯನ್ನು ಒತ್ತಿ ಹೇಳಿದರು.
ಜಾಗತಿಕ ಆಡಳಿತ ಸುಧಾರಣೆ, ಭದ್ರತಾ ಮಂಡಳಿಯ ಸುಧಾರಣೆ ಮತ್ತು ದ್ವಿಪಕ್ಷೀಯ ಪ್ರಗತಿಗೆ ಸಾಕಷ್ಟು ಅವಕಾಶವಿದೆ ಎಂದು ಶಶಿ ತರೂರ್ ಹೇಳಿದರು. ವಿಡಿಯೋ ಇಲ್ಲಿದೆ ನೋಡಿ.