Watch | ಹೈದರಾಬಾದ್ ಸೇನಾ ಶಸ್ತ್ರಾಸ್ತ್ರ ಕಳ್ಳತನ: ನಿವೃತ್ತ ಹವಾಲ್ದಾರ್ ಬಂಧನ

ಹೈದರಾಬಾದ್ ನ ಬೊಲ್ಲಾರಂನಲ್ಲಿರುವ ಮದ್ರಾಸ್ ರೆಜಿಮೆಂಟ್‌ನ 20ನೇ ಬೆಟಾಲಿಯನ್‌ನಿಂದ ಬಂದೂಕುಗಳು ಮತ್ತು ಮದ್ದುಗುಂಡುಗಳನ್ನು ಕದ್ದ ಆರೋಪದ ಮೇಲೆ ಪೊಲೀಸರು ನಿವೃತ್ತ ಸೇನಾ ಹವಾಲ್ದಾರ್ ನನ್ನು ಬಂಧಿಸಿದ್ದಾರೆ.

37 ವರ್ಷದ ಉಪ್ಪುತೊಲ್ಲ ಮಲ್ಲೇಶ್ ಎಂಬ ಆರೋಪಿಯನ್ನು, ಬೊಲ್ಲಾರಂ ಪೊಲೀಸರು, ಹೈದರಾಬಾದ್ ಪೊಲೀಸ್ ಟಾಸ್ಕ್ ಫೋರ್ಸ್ ಮತ್ತು ಎಸ್‌ಒಟಿ ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಲಾಯಿತು.

ಪೊಲೀಸರ ಪ್ರಕಾರ, ಮಲ್ಲೇಶ್ ಮದ್ರಾಸ್ ರೆಜಿಮೆಂಟ್‌ನ 20ನೇ ಬೆಟಾಲಿಯನ್‌ನ ಮಾಜಿ ಹವಾಲ್ದಾರ್ ಆಗಿದ್ದಾರೆ.

ಅವರು 2010 ರಲ್ಲಿ ಭಾರತೀಯ ಸೇನೆಗೆ ಸೇರಿದ್ದರು ಮತ್ತು ಜೂನ್ 30, 2026 ರಂದು ಸೇವೆಯಿಂದ ನಿವೃತ್ತರಾದರು.

ಸೇವೆಯಿಂದ ಅಕಾಲಿಕವಾಗಿ ನಿವೃತ್ತಿ ಹೊಂದಿದ್ದರ ಬಗ್ಗೆ ಇದ್ದ ಅಸಮಾಧಾನವೇ ಈ ಕೃತ್ಯಕ್ಕೆ ಪ್ರಾಥಮಿಕ ಕಾರಣವೆಂದು ತೋರುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com