ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಶನಿವಾರ ಐಐಟಿ ರೂರ್ಕಿಯ ಘಟಿಕೋತ್ಸವದಲ್ಲಿ ಮಾತನಾಡುವ ವೇಳೆ, ತಮ್ಮ ಒಂದು ಸವಾಲಿನ ಗುಪ್ತಚರ ಕಾರ್ಯಾಚರಣೆಯನ್ನು ಸ್ಮರಿಸಿಕೊಂಡರು.
ಗಡಿ ಕಾರ್ಯಾಚರಣೆಗೆ ತೆರಳಿದ್ದ ಗುಪ್ತಚರ ತಂಡವೊಂದು ನಿಗದಿತ ಸಮಯಕ್ಕೆ ಹಿಂತಿರುಗಲಿಲ್ಲ. ಯಾವುದೇ ಮಾಹಿತಿ ಇಲ್ಲದೆ ದಿನಗಳು ಕಳೆದವು.
ಅಂತಿಮವಾಗಿ, ಆ ಸಿಬ್ಬಂದಿ ಚೀನಾದ ವಶದಲ್ಲಿದ್ದಾರೆ ಎಂಬ ಸುದ್ದಿ ಪ್ರಧಾನ ಕಚೇರಿಯಿಂದ ಬಂತು.
ಆ ಸಮಯದಲ್ಲಿ ಸಿಕ್ಕಿಂನಲ್ಲಿ ನಿಯೋಜನೆಗೊಂಡಿದ್ದ ಯುವ ಗುಪ್ತಚರ ಅಧಿಕಾರಿಯಾಗಿದ್ದ ಅಜಿತ್ ದೋವಲ್ ಅವರಿಗೆ, ಈ ಘಟನೆಯು ತಮ್ಮದೇ ವೃತ್ತಿಜೀವನದ ಭವಿಷ್ಯದ ಬಗ್ಗೆ ಆತಂಕವನ್ನು ಉಂಟುಮಾಡಿತ್ತು.
ಇದು ನನ್ನ ವೃತ್ತಿಜೀವನದ ಅಂತ್ಯ ಎಂದು ನನಗೆ ಅನ್ನಿಸಿತ್ತು. ಆಗ ನಾನು ಇಪ್ಪತ್ತರ ಹರೆಯದಲ್ಲಿದ್ದೆ ಮತ್ತು ಹೊಸ ವೃತ್ತಿಜೀವನವನ್ನು ಪ್ರಾರಂಭಿಸಬೇಕಾದ ಪರಿಸ್ಥಿತಿ ಎದುರಾಗಿತ್ತು.
ಸಿಕ್ಕಿಂ ಭಾರತದೊಂದಿಗೆ ವಿಲೀನಗೊಳ್ಳುವ ಪ್ರಕ್ರಿಯೆಯಲ್ಲಿದ್ದಾಗ ಅಲ್ಲಿ ನಿಯೋಜನೆಗೊಂಡಿದ್ದ ತಮಗೆ ಗುಪ್ತಚರ ಕೆಲಸ ಹೊಸದಾಗಿತ್ತು ಎಂದು ದೋವಲ್ ತಿಳಿಸಿದರು. ವಿಡಿಯೋ ಇಲ್ಲಿದೆ ನೋಡಿ.