ಸುದ್ದಿ
ರೈಲಿನಲ್ಲಿ ಸೀಟಿಗಾಗಿ ಕಾದಾಡಿ ಪರಸ್ಪರ ಬಟ್ಟೆ ಹರಿದುಕೊಂಡ ಮಹಿಳೆಯರು!
ಚೀನದ ಸಬ್‌ವೇ ರೈಲಿನಲ್ಲಿ ಖಾಲಿ ಇದ್ದ ಸೀಟ್ ತನಗೇ ಬೇಕೆಂದು ಹಠಕ್ಕೆ ನಿಂತ ಇಬ್ಬರು ಮಹಿಳೆಯರು ಪರಸ್ಪರ ಬೈದುಕೊಂಡು, ಜಗಳವಾಡಿ, ಕೈಕೈ ಮಿಲಾಯಿಸಿ ಕೊನೆಗೆ ಪರಸ್ಪರರ ಬಟ್ಟೆಯನ್ನೇ ಹರಿದುಕೊಂಡು ತಮ್ಮ ಮಾನ-ಮರ್ಯಾದೆಯನ್ನು ತಾವೇ ಹರಾಜು ಹಾಕಿಕೊಂಡ ಘಟನೆ ನಡೆದಿದೆ. ವಿಡಿಯೋದಲ್ಲಿ ದಾಖಲಾಗಿರುವ ಈ ಘಟನೆಯ ಚಿತ್ರಿಕೆಯನ್ನು ನ್ಯೂಸ್ ಟ್ಯೂಬ್ ವತಿಯಿಂದ ಯೂ ಟ್ಯೂಬ್‌ಗ ಅಪ್‌ಲೋಡ್ ಮಾಡಲಾಗಿದೆ. ಈ ವಿಡಿಯೋ ಚಿತ್ರಿಕೆಯು ಈಗ ಸಾಮಾಜಿಕ ಜಾಲ ತಾಣದಲ್ಲಿ ಹೆಚ್ಚು ವೀಕ್ಷಣೆಗೆ ಒಳಗಾಗಿದೆ.
