ಸುದ್ದಿ
ಮೂಕನಿಗೆ ಸ್ಯಾಮ್ ಸಂಗ್ ನೀಡಿದ ಅದ್ಭುತ ಗಿಫ್ಟ್..!
ದೈಹಿಕವಾಗಿ ಕೆಲ ಅಂಗಗಳು ಊನವಾದ ವ್ಯಕ್ತಿಗಳು ಸಾಮಾನ್ಯವಾಗಿ ಸಾಮಾನ್ಯ ಸಮಾಜದಿಂದ ತಮ್ಮನ್ನು ತಾವು ಬೇರೆಯವರೆಂದೇ ಕಾಣುತ್ತಾರೆ. ಆದರೆ ಖ್ಯಾತ ಎಲೆಕ್ಟ್ರಾನಿಕ್ಸ್ ಉಪಕರಣ ತಯಾರಿಕಾ ಸಂಸ್ಥೆ ಸ್ಯಾಮ್ ಸಂಗ್ ಇಂತಹ ಸಮಾಜದ ವೈರುಧ್ಯಕ್ಕೆ ತನ್ನದೇ ಆದ ರೀತಿಯಲ್ಲಿ ಉತ್ತರ ನೀಡಿದ್ದು, ಮಾತುಬಾರದ ಕಿವಿಕೇಳದ ಮುಹರೆಮ್ ಎಂಬ ವ್ಯಕ್ತಿಗೆ ಹೃದಯ ಸ್ಪರ್ಶಿ ಉಡುಗೊರೆ ನೀಡಿದೆ. ಈ ಉಡುಗೊರೆಗಾಗಿ ಒಂದು ವಿಶೇಷ ತಂಡವನ್ನೇ ಕಟ್ಟಿದ ಸ್ಯಾಮ್ ಸಂಗ್, ಆ ತಂಡಕ್ಕೆ ಅವನದೇ ಸಂಜ್ಞಾ ಭಾಷೆಯಲ್ಲಿ ವ್ಯವಹರಿಸಲು ಒಂದು ತಿಂಗಳ ಕಾಲ ತರಬೇತಿ ಕೂಡ ನೀಡಿತ್ತಂತೆ.
