ಸುದ್ದಿ
ಹಳ್ಳಿಯ ಅತೀ ದೊಡ್ಡ ಹೆಸರನ್ನು ಚಾಣಾಕ್ಷವಾಗಿ ಉಚ್ಛರಿಸಿದ ನಿರೂಪಕ..!
ಚಾನೆಲ್ 4. ಬ್ರಿಟನ್ನಿನ ಈ ನ್ಯೂಸ್ ಚಾನೆಲ್ಲನ್ನು ಎಷ್ಟು ಜನ ಕೇಳಿದ್ದಾರೋ ಗೊತ್ತಿಲ್ಲ. ಆದರೆ, ಅದಕ್ಕಿಂತ ದುಪ್ಪಟ್ಟು ಪರಿಚಿತಗೊಂಡಿರುವ ಮನುಷ್ಯ ಆ ನ್ಯೂಸ್ ಚಾನೆಲ್ಲಿನ ಲಿಯಾಮ್ ಡಟನ್. ಈತ ಆ ಚಾನೆಲ್ಲಿನಲ್ಲಿ ವೆದರ್ ಆ್ಯಂಕರ್. ಮೊನ್ನೆ ಸೆ.9ರಂದು ಈತನ ಹೆಸರು ವಿಶ್ವವ್ಯಾಪಿ ಆಯಿತು. ಈತನ ಸ್ಪಷ್ಟ ಉಚ್ಛಾರಣೆಗೆ ಎಲ್ಲೆಡೆಯಿಂದ ಪ್ರಶಂಸೆ ಸುರಿದು ಬಂತು. ಅಂದಹಾಗೆ, ಈತನನ್ನು ಜಗವ್ಯಾಪಿ ಮಾಡಿಸಿದ್ದು ನಾರ್ತ್ವೆಸ್ಟ್ ವೇಲ್ಸ್ ನ ಒಂದು ಹಳ್ಳಿ.
