ಸುದ್ದಿ
ನರ್ಸ್ ಕೈ ಮುಟ್ಟಿದ ರೋಗಿಗೆ ವೈದ್ಯನ ಪಂಚ್, ಸ್ಥಳದಲ್ಲೇ ಸಾವು, ವೈರಲ್ ಆಯ್ತು ವಿಡಿಯೋ
ಚಿಕಿತ್ಸೆ ನೀಡುತ್ತಿದ್ದ ಮಹಿಳಾ ನರ್ಸ್ ಕೈಯನ್ನು ದುರುದ್ದೇಶಪೂರ್ವಕವಾಗಿ ಮುಟ್ಟಿದ ರೋಗಿಯನ್ನು ಕೋಪೋದ್ರಿಕ್ತ ವೈದ್ಯನೊಬ್ಬ ಆಸ್ಪತ್ರೆಯಲ್ಲಿಯೇ ಹೊಡೆದು ಕೊಂದ ಘಟನೆ ರಷ್ಯಾದ ದಕ್ಷಿಣ ಭಾಗದ ಬೆಲ್ಗೊರೋಡ್ ಎಂಬಲ್ಲಿ ನಡೆದಿದೆ. ರೋಗಿಯಿಂದ ಲೈಂಗಿಕ ಹಿಂಸೆಗೊಳಗಾದ ನರ್ಸ್ ಕೂಡಲೇ ತನ್ನ ಹಿರಿಯ ವೈದ್ಯರಿಗೆ ದೂರು ನೀಡಿದ್ದು ಕೊಪದಿಂದಲೇ ಕೊಠಡಿಗೆ ಆಗಮಿಸಿದ ವೈದ್ಯ ರೋಗಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಇದನ್ನು ತಡೆಯಲು ಬಂದ ವ್ಯಕ್ತಿಯನ್ನು ಕೂಡ ವೈದ್ಯ ಥಳಿಸಿದ್ದು, ತೀವ್ರಪೆಟ್ಟುತಿಂದ ರೋಗಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
