ಸುದ್ದಿ
ದೆಹಲಿಯ ಜನಕಪುರಿ ಹಿಟ್ ಅಂಡ್ ರನ್ ಅಪಘಾತ ಸಿಸಿಟಿವಿಯಲ್ಲಿ ಸೆರೆ
ಸೋಮವಾರ ದೆಹಲಿ ಜನಕಪುರಿ ಪ್ರದೇಶದಲ್ಲಿ ನಡೆದ ಭೀಕರ ಅಪಘಾತ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವ್ಯಾಪಕ ವೈರಲ್ ಆಗಿದೆ. ರಸ್ತೆ ಬದಿ ನಡೆದು ಹೋಗುತ್ತಿದ್ದ ಪಾದಾಚಾರಿಗೆ ಬಲಭಾಗದಲ್ಲಿಯೇ ವೇಗವಾಗಿ ಬಂದ ಕಾರು ಗುದ್ದಿದ್ದು, ಕಾರು ಗುದ್ದಿ ರಭಸಕ್ಕೆ ವ್ಯಕ್ತಿ ಮಾರುದ್ದ ಹಾರಿ ಬಿದ್ದು ಸಾವನ್ನಪ್ಪಿದ್ದಾರೆ. ಪಾನಮತ್ತ 21 ವರ್ಷದ ಯುವಕ ಕಾರನ್ನು ಓಡಿಸುತ್ತಿದ್ದನೆಂದು ಪೊಲೀಸ್ ಮೂಲಗಳು ತಿಳಿಸಿವೆ.
