ಸುದ್ದಿ
ಪವಾಡ ಸದೃಶ್ಯ: ಬೆಂಗಳೂರಿನಲ್ಲಿ ಮೈ ಮೇಲೆ ಕಾರು ಹರಿದರು ಎದ್ದು ಕುಳಿತ ಮಗು
ಬೆಂಗಳೂರಿನ ಜೆಪಿ ನಗರದಲ್ಲಿ ರಸ್ತೆಯಲ್ಲಿ ಆಟವಾಡುತ್ತಿದ್ದ ಮಗುವಿನ ಮೇಲೆ ಕಾರು ಹರಿದಿದ್ದರೂ ಅದೃಷ್ಟವಶಾತ್ ಮಗು ಯಾವುದೇ ಅಪಾಯವಿಲ್ಲದೇ ಎದ್ದು ನಿಂತಿದ್ದು ಅಚ್ಚರಿ ಮೂಡಿಸಿದೆ. 14 ತಿಂಗಳ ಮಗು ಶಟಲ್ ರಾಕೆಟ್ ಜತೆ ಆಟವಾಡಲು ಮನೆಯಿಂದ ಹೊರಬಂದಿದೆ. ಅಲ್ಲಿಯೇ ಇದ್ದ ಇನ್ನೊಂದು ಮಗುವಿನ ಜತೆ ಮಾತನಾಡುತ್ತಾ ರಸ್ತೆಗೆ ಬಂದಿದೆ. ಇದನ್ನು ಗಮನಿಸದ ಕಾರು ಚಾಲಕ ಕಾರನ್ನು ಹಿಂದಕ್ಕೆ ತೆಗೆದಿದ್ದಾನೆ. ಈ ವೇಲೆ ಕಾರಿನ ಎರಡು ಚಕ್ರಗಳು ಮಗುವಿನ ಮೇಲೆ ಹರಿದಿತ್ತು. ಆದರೂ ಮಗು ತಕ್ಷಣ ಎದ್ದು ನಿಂತಿದೆ.
