ಕ್ರೀಡೆ
ಚಾರ್ಲಿ ಆ್ಯಡಮ್ಸ್ ರ ಅಮೋಘ ಗೋಲು..!
ಸ್ಟಾಕ್ ತಂಡದ ಮಿಡ್ ಫೀಲ್ಡರ್ ಚಾರ್ಲಿ ಆ್ಯಡಮ್ಸ್, ಬರೋಬ್ಬರಿ 66 ಯಾರ್ಡ್ (198 ಅಡಿ) ದೂರದಿಂದ ಚೆಲ್ಸಾ ತಂಡದ ಗೋಲು ಪೆಟ್ಟಿಗೆಯೊಳಗೆ ಚೆಂಡನ್ನು ನುಗ್ಗಿಸಿ ಹೊಸ ಇತಿಹಾಸ ಸೃಷ್ಟಿಸಿದರು. ಗೋಲು ಪೆಟ್ಟಿಗೆಯನ್ನು ಕಾಯುತ್ತಿದ್ದ ತಿಬೌಟ್ ಕೋರ್ಶಿಯಸ್ ಅವರು ಗೋಲು ಪೆಟ್ಟಿಗೆಯಿಂದ ಸಾಕಷ್ಟು ಮುಂದೆಬಂದಿರುವುದನ್ನು ಗಮನಿಸಿದ ಚಾರ್ಲಿ, ತಮ್ಮ ಎಡಗಾಲಿನಿಂದ ಚೆಂಡಿಗೆ ಬಲವಾದ ಕಿಕ್ ಕೊಟ್ಟರು. ಅಲ್ಲಿಂದ ಹಾರಿದ ಚೆಂಡು ಗೋಲು ಪೆಟ್ಟಿಗೆಯ ಮೇಲ್ಭಾಗದಿಂದ ಹಾರಿ ಬಂದ ಚೆಂಡು ನೇರವಾಗಿ ಗೋಲ್ ಪೆಟ್ಟಿಗೆಯ ಒಳಸೇರಿತು.
