ಕ್ರೀಡೆ
ಮೆಸ್ಸಿ ಮ್ಯಾಜಿಕ್ ಗೋಲು
ಬಾರ್ಸಿಲೋನಾದ ಕಾಂಪ್ ನೌನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಬಾರ್ಸಿಲೋನಾ ತಂಡದ ಆಟಗಾರ ಮೆಸ್ಸಿ ಎದುರಾಳಿ ತಂಡದ ಆಟಗಾರರನ್ನು ವಂಚಿಸಿ ಗೋಲು ಗಳಿಸುವಲ್ಲಿ ಯಶಸ್ವಿಯಾದರು. ಕ್ರೀಡಾಂಗಣದ ಮಧ್ಯ ಭಾಗದಿಂದ ತಾವೊಬ್ಬರೇ ಚೆಂಡನ್ನು ಎದುರಾಳಿ ಆಟಗಾರರಿಗೆ ಸಿಗದಂತೆ ತುಂಬಾ ಚಾಕಚಕ್ಯತೆಯಿಂದ ಸಂಬಾಳಿಸುತ್ತಾ ಮೆಸ್ಸಿ ಗಳಿಸಿದ ಈ ಗೋಲು ಅಮೋಘವಾಗಿತ್ತು.
