ಕಾರ್ಗಿಲ್ ನಲ್ಲಿ ಅತಿಹಿಮ ಬೀಳುತ್ತಿದ್ದಂತೆ ಭಾರತೀಯ ಸೇನೆ ಹಿಂದೆ ಬರುತ್ತದೆ. ನಂತರ ಹಿಮ ಕರಗುತ್ತಲೇ ಮತ್ತೆ ಅಲ್ಲಿಗೆ ಹೋಗುತ್ತದೆ. ಹೀಗೆ ವಾಡಿಕೆಯಂತೆ ಹಿಮ ಬೀಳುತ್ತಿದ್ದಾಗ ಅಲ್ಲಿಂದ ವಾಪಸ್ ಬಂದಿದ್ದ ಭಾರತೀಯ ಸೇನೆ ಆ ವರ್ಷವೂ ಹಿಮ ಕರಗಿದ ಮೇಲೆ ವಾಪಸ್ ತೆರಳಬೇಕಿತ್ತು. ಹೀಗಾಗಿ ಭಜರಂಗ್ ಪೋಸ್ಟ್ ನ ಹತ್ತುವುದಕ್ಕೆ ಮಂಜು ಕರಗಿದೆಯಾ ಹತ್ತಬಹುದಾ ಎಂದು ನೋಡಿಕೊಂಡು ಬರಲು ಮೊದಲು ಸೌರಬ್ ಕಾಲಿಯಾ ಅಲ್ಲಿಗೆ ಹೋಗುತ್ತಾರೆ. ಸೌರಬ್ ಕಾಲಿಯಾ, ಭಜರಂಗ್ ಪೋಸ್ಟ್ ನತ್ತ ಮೊದಲ ಬಾರಿಗೆ ಹೋದಾಗ ಈ ದೇಶದ ಒಳಗೆ ನಮ್ಮ ಗುಡ್ಡದ ಮೇಲೆ ಬಂದು ಕುಳಿತಿರುವವರು ಪಾಕಿಸ್ತಾನದವರು ಅಂತ ತಿಳಿದಿರಲಿಲ್ಲ. ಗುಪ್ತಚರ, ರಾ, ಐ.ಬಿಗಳು ವಿಫಲವಾಗಿದ್ದವು.