ಜೋಗುಳ ಸಿರಿ ಬೆಳಕು!

ಚಿಕ್ಕಂದಿನಲ್ಲಿ ಕಲಿಯುವ ಕಲಿಸಲಾಗುವ ವಿಷಯಗಳು ಮಗುವಿನ ಮೆದುಳಿನಲ್ಲಿ ದೃಢವಾಗಿ ಬೇರೂರುತ್ತವೆ. ಈ ನೆನಪುಗಳು ಸಕಾರಾತ್ಮಕವಾಗಿದ್ದರೆ ಮಗುವಿಗೆ ಲಾಭ.
ಮಧುರವಾದ ಜೋಗುಳ ಶಿಶುಗಳ ಸ್ಮರಣ ಶಕ್ತಿಯನ್ನು ಹೆಚ್ಚಿಸುತ್ತದೆ
ಮಧುರವಾದ ಜೋಗುಳ ಶಿಶುಗಳ ಸ್ಮರಣ ಶಕ್ತಿಯನ್ನು ಹೆಚ್ಚಿಸುತ್ತದೆ

-ಪ್ರೇಮ್

ಅಮ್ಮಂದಿರು ಮುದ್ದು ಕದಮ್ಮಗಳನ್ನು ಮಲಗಿಸಲು ಲಾಲಿ ಹಾಡ್ತಾರೆ. ಈ ಜೋಗುಳದ ಹಾಡಿಗುಂಟು ಮತ್ತು ತರಿಸುವ ತಾಕತ್ತು. ಅದಕ್ಕೆ ಲಾಲಿ ಹಾಡುತ್ತಿದ್ದಂತೆಯೇ ಮಕ್ಕಳು ನಿದ್ರಾದೇವಿ ಮಡಿಲಿಗೆ ಜಾರೋದು.

ಹಾಗಾದ್ರೆ ಈ ಲಾಲಿ ಹಾಡಲ್ಲಿ ಏನಿದೆ? ಮಧುರವಾದ ಜೋಗುಳ ಶಿಶುಗಳ ಸ್ಮರಣ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಲ್ಲಿನ ಒಳ್ಳೆಯ ಅಂಶಗಳನ್ನು ಮಕ್ಕಳು ಹೆಚ್ಚು ಗಮನದಲ್ಲಿಟ್ಟು ಕೊಳ್ಳುತ್ತವಂತೆ. ಬಿಹೇವಿಯರ್ ಅಂಡ್ ಡೆವಲಪ್‌ಮೆಂಟ್ ನಿಯತಕಾಲಿಕೆಯಲ್ಲಿನ ಲೇಖನವೊಂದು ಇದನ್ನು ಪ್ರತಿಪಾದಿಸಿದ್ದು, ಭಾವನೆಗಳು ಮಕ್ಕಳ ಸ್ಮರಣ ಶಕ್ತಿಯ ಮೇಲೆ ಹೇಗೆ ಪರಿಣಾಮ ಬೀರಬಲ್ಲದು ಎಂಬ ಬಗ್ಗೆ ಇದೇ ಮೊದಲ ಬಾರಿಗೆ ಅಧ್ಯಯನ ನಡೆಸಿದ್ದೇವೆ ಎಂದು ಅಧ್ಯಯನದ ನೇತೃತ್ವ ವಹಿಸಿದ್ದ ಬ್ರೈಘಾಮ್ ವಿವಿ ಪ್ರೊ.ರಾಸ್ ಫ್ಲಾಮ್ ಹೇಳುತ್ತಾರೆ.

ಮಕ್ಕಳು ಮಾತು ಕಲಿಯುವುದಕ್ಕೂ ಮುನ್ನ ವಿಭಿನ್ನ ಪ್ರಕ್ರಿಯೆಗಳಿಗೆ ಹೇಗೆ ಸ್ಪಂದಿಸುತ್ತವೆ ಎಂಬ ಬಗ್ಗೆ ವೈವಿಧ್ಯ ಮಾರ್ಗಗಳ ಮೂಲಕ ಸಂಶೋಧಕರು ಅಧ್ಯಯನ ನಡೆಸಿದ್ದಾರೆ. ಈ ಅಧ್ಯಯನದಲ್ಲಿ ಸಂಶೋಧಕರು ಶಿಶುವಿನ ಕಣ್ಮುಗಳ ಚಲನೆ ಮತ್ತು ನಿರ್ದಿಷ್ಟ ಚಿತ್ರವೊಂದನ್ನು ಎಷ್ಟು ಕಾಲ ದಿಟ್ಟಿಸಿ ನೋಡಬಲ್ಲವು ಎಂಬುದನ್ನೂ ಗಮನಿಸಿದ್ದಾರೆ.

ಒಂದೇ ರೀತಿ ಫಲಿತಾಂಶ
ಕಿಟಕಿ, ಬಾಗಿಲಿಗೆ ಪರದೆಗಳನ್ನು ಹಾಕಿರುವ ಕೊಠಡಿಯಲ್ಲಿ, ಕಂಪ್ಯೂಟರ್ ಮುಂದೆ ಮಗುವೊಂದನ್ನು ಕೂರಿಸಲಾಗಿತ್ತು. ಆ ಪರದೆಯಲ್ಲಿ ವ್ಯಕ್ತಿಯೊಬ್ಬ ಕಾಣಿಸಿಕೊಂಡು ಸಂತೋಷದ, ತಟಸ್ಥ ಅಥವಾ ಕೋಪದ ದನಿಯಲ್ಲಿ ಮಾತನಾಡುತ್ತಾನೆ. ಆಗ ಮಗುವಿನ ಮುಖ ಚಹರೆಯಲ್ಲಿ ಆಗುವ ಬದಲಾವಣೆಗಳನ್ನು ಗಮನಿಸಲಾಯಿತು. ಪರದೆಯಲ್ಲಿ ಕಾಣಿಸಿದ ಚಹರೆ ಅಥವಾ ನಕಾರಾತ್ಮಕ ದನಿಗೆ ಮಗು ಪ್ರತಿಕ್ರಿಯಿಸುವುದನ್ನು ಗಮನಸಿಲಾಯಿತು. ಆಗ ಮಗು ಸಕಾರಾತ್ಮಕ ದನಿಗಳನ್ನು ಹಾಗೂ ಚಹರೆಗಳನ್ನು ಮಾತ್ರ ನೆನಪಿನಲ್ಲಿಟ್ಟುಕೊಂಡಿತ್ತು.

ಇದೇ ಪ್ರಕ್ರಿಯೆಯನ್ನು ಪುನರಾವರ್ತಿಸಿದಾಗಲೂ ಫಲಿತಾಂಶ ಒಂದೇ ರೀತಿಯಾಗಿತ್ತು. ಇದೇ ಸಂಶೋಧನಾ ತಂಡ ಶಾಸ್ತ್ರೀಯ ಸಂಗೀತ ಮುಂತಾದುವುಗಳನ್ನು ಅರ್ಥೈಸಿಕೊಳ್ಳುವ ಮಗುವಿನ ಸಾಮರ್ಥ್ಯದ ಬಗ್ಗೆಯೂ ಅಧ್ಯಯನ ನಡೆಸಿತ್ತು. ಚಿಕ್ಕಂದಿನಲ್ಲಿ ಕಲಿಯುವ ಕಲಿಸಲಾಗುವ ವಿಷಯಗಳು ಮಗುವಿನ ಮೆದುಳಿನಲ್ಲಿ ದೃಢವಾಗಿ ಬೇರೂರುತ್ತವೆ. ಈ ನೆನಪುಗಳು ಸಕಾರಾತ್ಮಕವಾಗಿದ್ದರೆ ಮಗುವಿಗೆ ಲಾಭ.

ಇದಕ್ಕೆ ತದ್ವಿರುದ್ಧವಾಗಿದ್ದರೆ, ಪರಿಣಾಮಗಳೂ ತದ್ವಿರುದ್ಧವೇ ಆಗಿರುತ್ತದೆ. ಅದಕ್ಕೆ ಮಕ್ಕಳ ಬಾಲ್ಯ ಅದ್ಭುತವಾಗಿರುವಂತೆ ನೋಡಿಕೊಳ್ಳುವುದು ಪೋಷಕರ ಕರ್ತವ್ಯ. ಅವುಗಳಿಗೆ ಪೂರಕ ವಾತಾವರಣವನ್ನು ಹಿರಿಯರು ಸೃಷ್ಟಿಸಬೇಕು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com