ಓ ಮೈ 'ಗಾರ್ಡನ್'

ಹಳ್ಳಿಗಳಲ್ಲಿ ಆ ತಲೆನೋವೇ ಇಲ್ಲ. ಹೂ ಗಿಡಗಳನ್ನು ಬೆಳೆಸೋದಕ್ಕೆ ಅಂಗಳ ಇರುತ್ತೆ...
ಗಾರ್ಡನ್ ಅಂದ ಮತ್ತಷ್ಟು ಹೆಚ್ಚುತ್ತದೆ.
ಗಾರ್ಡನ್ ಅಂದ ಮತ್ತಷ್ಟು ಹೆಚ್ಚುತ್ತದೆ.

ಹಳ್ಳಿಗಳಲ್ಲಿ ಆ ತಲೆನೋವೇ ಇಲ್ಲ. ಹೂ ಗಿಡಗಳನ್ನು ಬೆಳೆಸೋದಕ್ಕೆ ಅಂಗಳ ಇರುತ್ತೆ. ಅಲ್ಲಿ ಗಿಡಗಳಿಗೆ ಬೇಕಾದ ಸಾವಯವ ಗೊಬ್ಬರ, ನೀರಾವರಿ ವ್ಯವಸ್ಥೆಯೂ ಇರುತ್ತೆ. ಆದರೆ ಪ್ರಾಬ್ಲಂ ಇರೋದೇ ಸಿಟಿಯಲ್ಲಿ. 'ಕಾಂಕ್ರಿಟ್ ಕಾಡಿನಲ್ಲಿ ವಾಹನಗಳಿಗೇ ನಿಲ್ಲಿಸಲು ಜಾಗವಿಲ್ಲ, ಇನ್ನು ಗಿಡಮರಗಳಿಗೆಲ್ಲಿ ಜಾಗ?' ಎಂಬ ನಮ್ಮ ಮನದ ಮರುಭೂಮಿಯೊಳಗೆ ಬೆಳೆದ ಪ್ರಶ್ನೆಗೆ ಯಾರು ನೀರೆರೆದರೋ ಗೊತ್ತಿಲ್ಲ.

ಹೂ ಗಿಡಗಳನ್ನು ಬೆಳೆಸುವುದಕ್ಕೆ ಜಾಗದ ಸಮಸ್ಯೆ ಎಂದು ಕೊರಗಬೇಕಿಲ್ಲ. ಇಂಥ ಹವ್ಯಾಸ ಇರುವವರಿಗೆ ಮನೆಯ ಮುಂದಿನ ಅಂಗಳದ ಹಂಗು ಬೇಕಿಲ್ಲ. ಟೆರೇಸ್, ಬಾಲ್ಕನಿ, ಕಿಟಕಿಗಳಲ್ಲಿ ಹೂ ಕುಂಡಗಳನ್ನಿಟ್ಟು ಅಲ್ಲಿ ಗಿಡಗಳನ್ನು ಬೆಳೆಸಬಹುದು, ಗಿಡಗಳ ಆರೈಕೆ ಬಗ್ಗೆ ಮೊದಲೇ ತಿಳಿದುಕೊಂಡು, ಕೆಲವು ಗಿಡಗಳಿಗೆ ವಿಶೇಷ ಕಾಳಜಿ ವಹಿಸಬೇಕಷ್ಟೇ. ನಂತರ ವಿನ್ಯಾಸದ ಬಗ್ಗೆ ಯೋಚಿಸಿ.

ಒಳಾಂಗಣದ ಹೂ ಕುಂಡಗಳಲ್ಲಿ ಗಿಡಗಳನ್ನು ಬೆಳೆಸುವಿರಾದರೆ ಹೂ ಕುಂಡಗಳಲ್ಲಿ ಬಹುಕಾಲ ಬೆಳೆಯಬಲ್ಲ ಗಿಡಗಳನ್ನೇ ಆಯ್ಕೆಮಾಡಿಕೊಳ್ಳಿ. ಮನೆಯ ಒಳಗೆ ಮತ್ತು ಹೊರಗೆ ಇಡಬಹುದಾದ ಗಿಡಗಳನ್ನು ನರ್ಸರಿಯಿಂದ ಖರೀದಿಸಬಹುದು. ಹೂ ಕುಂಡಗಳಿಗಾಗಿ ಕಾಲಕಾಲಕ್ಕೆ ಗಿಡಗಳಿಗೆ ನೀಡಲು ಬೇಕಾದ ಮಣ್ಣು, ಗೊಬ್ಬರವನ್ನೂ ಖರೀದಿಸಿಟ್ಟುಕೊಳ್ಳಿ.

ಚಾವಣಿಯಲ್ಲಿ ಉದ್ಯಾನ ನಿರ್ಮಿಸುವ ಆಸೆ ನಿಮ್ಮದಾಗಿದ್ದರೆ ಚಾವಣಿ ನೀರು ನಿರೋಧಕವೇ ಎಂದು ಪರೀಕ್ಷಿಸಬೇಕು. ಸೂರ್ಯನ ಪ್ರಕಾಶ ಹೆಚ್ಚಿದ್ದರೂ ಮೈಯೊಡ್ಡಿ ಬೆಳೆಯಬಲ್ಲ ಹೂಗಿಡಗಳನ್ನೂ ಆರಿಸಿಕೊಳ್ಳಬೇಕು.

ತಂಪಾದ ಗಾಳಿ ಹೆಚ್ಚು ಬೀಸುವೆಡೆ ಹೂಗಿಡಗಳನ್ನು ಇಡಬಾರದು. ಕಿಟಕಿಯಿಂದ ಸೂರ್ಯನ ಬೆಳಕು ಬೀಳುವಂತಿರಬೇಕು. ಸೂರ್ಯನ ಬೆಳಕು ಬೀಳುವಲ್ಲಿ ಒಂದರ್ಧ ಗಂಟೆ ಇಟ್ಟು ನಂತರ ಹೂ, ಕ್ರೋಟನ್ ಗಿಡಗಳನ್ನು ಒಳಾಂಗಣದಲ್ಲಿ ಜೋಡಿಸಬಹುದು.

ಕಂಟೈನರ್ ಅಥವಾ ಹೂ ಕುಂಡಗಳಲ್ಲಿ ವಿವಿಧ ಜಾತಿಯ ಹೂ, ಅಲಂಕಾರಿಕ ಗಿಡಗಳನ್ನು ಬೆಳೆಸಬಹುದು. ವಿವಿಧ ಗಾತ್ರ, ಆಕಾರದ ಹೂ ಕುಂಡಗಳೂ ಇಂದು ನರ್ಸರಿಗಳಲ್ಲಿ ಲಭ್ಯ. ಗಿಡಗಳು ಬೆಳೆಯುವ ಗಾತ್ರಗಳಿಗನುಗುಣವಾಗಿ ಕುಂಡಗಳನ್ನು ಆಯ್ಕೆಮಾಡಿಕೊಂಡು, ಯಾವುದಾದರೊಂದು ಗಿಡಕ್ಕೆ ಸೋಂಕು ತಗುಲಿದರೆ ಅಂಥ ಹೂ ಕುಂಡವನ್ನೇ ದೂರ ಇಡಿ.

ಇತರೆ ಗಿಡಗಳಿಗೆ ಹರಡದಂತೆ ಎಚ್ಚರ ವಹಿಸಿ. ಕಾಲ ಕಾಲಕ್ಕೆ ಗೊಬ್ಬರ ಹಾಕುವುದನ್ನು ಮರೆಯದಿರಿ. ಗಿಡದಲ್ಲಿ ಅರಳಿ ನಿಂತ ಹೂಗಳು ಪೂರ್ತಿಯಾಗಿ ಬಾಡಿ ಹೋಗುವುದಕ್ಕೆ ಮೊದಲೇ ಕತ್ತರಿಸಿ ಹಾಕಿ. ಇದರಿಂದ ಹೊಸ ಚಿಗುರು ಬೇಗ ಬರುತ್ತದೆ.

ಫಲವತ್ತಾದ ಮಣ್ಣು ಹೂ ತೋಟಕ್ಕೆ ಅವಶ್ಯ. ಮಣ್ಣಿನಲ್ಲಿರುವ ಕಳೆ ಮತ್ತಿತರ ಸಸ್ಯಗಳನ್ನು ಬೇರ್ಪಡಿಸಿ ಹದಗೊಳಿಸಿ. ಹೂಗಿಡಗಳನ್ನು ಅವುಗಳು ಬಿಡುವ ಹೂವಿನ ಬಣ್ಣಗಳಿಗನುಗುಣವಾಗಿ ಜೋಡಿಸಿದೆ. ಬಣ್ಣಗಳ ಹೊಂದಾಣಿಕೆ ಇರಲಿ.

ಇದರಿಂದ ಗಾರ್ಡನ್ ಅಂದ ಮತ್ತಷ್ಟು ಹೆಚ್ಚುತ್ತದೆ. ವಿವಿಧ ಜಾತಿಯ ಸಸ್ಯಗಳು ವಿವಿಧ ಕೀಟಗಳನ್ನು ಆಕರ್ಷಿಸುತ್ತವೆ. ಕೆಲವು ಕೀಟಗಳು, ಚಿಟ್ಟೆಗಳು ಹೂತೋಟದಲ್ಲಿ ಪ್ರಯೋಜನಕ್ಕೆ ಬರುತ್ತವೆ. ಅವುಗಳಿಂದಾಗಿಯೇ ಪರಾಗಸ್ಪರ್ಶ ಕ್ರಿಯೆ ನಡೆಯುತ್ತವೆ. ಕೆಲವು ಕೀಟಗಳು ಸಸ್ಯಗಳಿಗೆ ಹಾನಿಕಾರಕ.

ಹಾಗಾಗಿ ಕಾಟ ಕೊಡುವ ಕೀಟಗಳ ಬಗ್ಗೆ ಗಮನಹರಿಸಬೇಕು. ಕೀಟಗಳನ್ನು ನಿಯಂತ್ರಿಸಲು ಕೀಟನಾಶಕಗಳನ್ನು ಬಳಿ. ಇಂಥ ಹೂ ತೋಟ ಹಾಗೂ ಕುಂಡಗಳಿಂದ ಮನೆಯ ವಿನ್ಯಾಸಕ್ಕೆ ಹೊಸ ಚೈತನ್ಯ ತುಂಬಿಕೊಳ್ಳುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com