ವೆಲಂಕಣಿಯ ಹಸಿರು ಗಣಿ

ಐಟಿ ಕ್ರಾಂತಿಗೆ ಹೆಸರಾಗಿರುವ ಬೆಂಗಳೂರಿಗೆ ಈಗ ಮತ್ತೊಂದು ಗರಿ. ಸಾಫ್ಟ್‌ವೇರ್ ವಲಯದ ಭಾಗವಾಗಿರುವ...
ವೆಲಂಕಣಿಯ ಹಸಿರು ಗಣಿ

ಐಟಿ ಕ್ರಾಂತಿಗೆ ಹೆಸರಾಗಿರುವ ಬೆಂಗಳೂರಿಗೆ ಈಗ ಮತ್ತೊಂದು ಗರಿ. ಸಾಫ್ಟ್‌ವೇರ್ ವಲಯದ ಭಾಗವಾಗಿರುವ ಎಲೆಕ್ಟ್ರಾನಿಕ್ ಸಿಟಿಯ ವೆಲಂಕಣಿಯಲ್ಲಿ ಹೊಸದೊಂದು ಹಸಿರು ಉದಯವಾಗಿದೆ. ಬರೀ ಕೀಲಿ ಮಣಿಯನ್ನು ಮುಂದಿಟ್ಟುಕೊಂಡು ಬೆರಳ ತುದಿಯಲ್ಲೇ ಜಗತ್ತಿನ ನಾನಾ ಕೆಲಸಗಳನ್ನು ಮಾಡುತ್ತಿದ್ದ ವೆಲಂಕಣಿ ಪ್ರದೇಶದ ಜನಕ್ಕೆ ಈಗ ಹಸಿರು ಉಸಿರು ನೀಡುತ್ತಿದೆ. ಕೂತು ಕೆಲಸ ಮಾಡುವ ಸಿಬ್ಬಂದಿಗೆ ಅಲ್ಲಿನ ಐಟಿ ಕಂಪನಿಗಳು ಸ್ವಚ್ಛ, ಸುಂದರ ಗಾಳಿ ಹಾಗೂ ಪರಿಸರ ನೀಡಲು ಹಸಿರು ಉದ್ಯಾನ ಬೆಳೆಸಿದೆ. ವೆಲಂಕಣಿಯಲ್ಲಿ ಬೆಳೆಸಿರುವ ಈ ಉದ್ಯಾನಕ್ಕೆ ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್ (ಐಜಿಬಿಸಿ)ನವರು ಉತ್ತಮ ಹಸಿರು ಪ್ರಮಾಣ ಪತ್ರವನ್ನೂ ನೀಡಿದ್ದಾರೆ. ಇದು ಭಾರತದಲ್ಲೇ ಮೊಟ್ಟ ಮೊದಲ ಬಾರಿಗೆ ವೆಲಂಕಣಿ ಟೆಕ್ನಾಲಜಿ ಪಾರ್ಕ್‌ಗೆ ಸಿಕ್ಕ ಗೌರವೂ ಆಗಿದೆ. ಒಟ್ಟು 23 ಎಕರೆಯಲ್ಲಿ ತನ್ನ ವಿಸ್ತಾರವನ್ನು ಹರಡಿಕೊಂಡಿರುವ ವೆಲಂಕಣಿಯಲ್ಲಿ ಐಟಿ ಸೀಮನ್ಸ್, ಡಚ್ ಬ್ಯಾಂಕ್ ಆಪರೇಷನ್ಸ್, ಪಾಟ್ನಿ ಕಂಪ್ಯೂಟರ್, ವಿಟಿಯೋಸ್ ಕ್ಯಾಪಿಟಲ್ ಸೇರಿದಂತೆ ವಿವಿಧ ಕಂಪನಿಗಳು ಸೇರಿ ಈ ಉದ್ಯಾನವನ್ನು ಅಭಿವೃದ್ಧಿಪಡಿಸಿದ್ದು, ಐಜಿಬಿಸಿಯವರು ಪ್ರಮಾಣ ಪತ್ರ ನೀಡಿದ್ದಾರೆ.
ವಿಶೇಷ ಆರ್ಥಿಕ ವಲಯದಲ್ಲಿ ವ್ಯಾಪಾರ ವಹಿವಾಟಿನೊಂದಿಗೆ ಪರಿಸರದ ಕಾಳಜಿ ವಹಿಸುವ ಕಂಪನಿಗಳಿಗೆ ಐಜಿಬಿಸಿ ಉತ್ತೇಜನ ನೀಡುತ್ತಾ ಬಂದಿದೆ. ಐಜಿಬಿಸಿಯ ಮೂಲ ಉದ್ದೇಶ ಹಸಿರನ್ನು ಉಳಿಸುವುದು, ಪರಿಸರ ಬೆಳೆಸುವವರಿಗೆ ಉತ್ತೇಜನ ನೀಡುವುದು. ಅಷ್ಟೇ ಅಲ್ಲದೆ ಕಾರ್ಖಾನೆಗಳು, ದೊಡ್ಡ ದೊಡ್ಡ ಅಪಾರ್ಟ್‌ಮೆಂಟ್‌ಗಳಲ್ಲೂ ಇಂಥ ಉದ್ಯಾನಗಳನ್ನು ಬೆಳೆಸಿದರೆ, ಅವರಿಗೂ ಐಜಿಬಿಸಿಯವರು ಪ್ರಮಾಣ ಪತ್ರ ನೀಡುತ್ತಿದ್ದಾರೆ. 2015ಕ್ಕೆ ಜಗತ್ತಿನಲ್ಲೇ ಭಾರತ ಅತಿ ಹೆಚ್ಚು ಹಸಿರು ಪ್ರದೇಶ ಹೊಂದಿರುವ ಪ್ರದೇಶವಾಗಿ ಗುರುತಿಸುವ ಗುರಿಯನ್ನು ಐಜಿಬಿಸಿ ಹೊಂದಿದೆ. ಅವರ ಈ ಗುರಿಗೆ ಇನ್ನಷ್ಟು ಪ್ರೇರಣೆ ಸಿಗಬೇಕಿದೆ. ಅದಕ್ಕಾಗಿ ಎಲ್ಲರೂ ತಮ್ಮ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಹಸಿರು ಬೆಳೆಸಲೇ ಬೇಕಾದ ಅನಿವಾರ್ಯತೆ ಇಂದು ಸೃಷ್ಟಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com