ಗೋಡೆಗೆ ಹಚ್ಚೆ!

ಗೋಡೆಗಳನ್ನು ಅಲಂಕಾರಿಕ ವಸ್ತುಗಳಾಗಿ ಬದಲಾಯಿಸುವ ಮೂಲಕ ಎಲ್ಲರ ಗಮನ ಸೆಳೆದು ಮನೆಯ ಹೊರಗೂ ಒಳಗೂ ಹಬ್ಬಬಹುದಾದ ಸುಂದರ ಕಲಾಕೃತಿಯೇ ಗ್ರಾಫಿಟಿ...
ಸುಂದರ ಸ್ಪ್ರೇ ಪೇಂಟಿಂಗ್‍ ಗ್ರಾಫಿಟಿ
ಸುಂದರ ಸ್ಪ್ರೇ ಪೇಂಟಿಂಗ್‍ ಗ್ರಾಫಿಟಿ
Updated on

ಗೋಡೆಗಳನ್ನು ಅಲಂಕಾರಿಕ ವಸ್ತುಗಳಾಗಿ ಬದಲಾಯಿಸುವ ಮೂಲಕ ಎಲ್ಲರ ಗಮನ ಸೆಳೆದು ಮನೆಯ ಹೊರಗೂ ಒಳಗೂ ಹಬ್ಬಬಹುದಾದ ಸುಂದರ ಕಲಾಕೃತಿಯೇ ಗ್ರಾಫಿಟಿ.

ಪಬ್ಲಿಕ್ ಆರ್ಟ್ ಎನಿಸಿಕೊಂಡಿದ್ದ ಗ್ರಾಫಿಟಿ ಇದೀಗ ಮನೆಯೊಳಗೂ ಕಾಲಿಟ್ಟಿದೆ. ಮನೆಯ ಸೌಂದರ್ಯವನ್ನು ಇಮ್ಮಡಿಗೊಳಿಸಿ, ಮನೆಯೊಡೆಯನ ಆಸಕ್ತಿಯನ್ನು ಬಿಂಬಿಸುತ್ತದೆ ಗ್ರಾಫಿಟಿ. ಮನೆಯ ಹೊರಗಿನ ಕಾಂಪೌಂಡ್‍ನಿಂದ ಒಳಗಿನ ಮಕ್ಕಳ ಕೋಣೆಯವರೆಗೂ ಗೋಡೆಗೆ ಈ ಹಚ್ಚೆ ಹಾಕಬಹುದು. ಸ್ಪ್ರೇ ಪೇಂಟಿಂಗ್‍ನಿಂದ ನಿರ್ಮಿತವಾಗುವ ಈ ಗೋಡೆಚಿತ್ರ ಥ್ರೀಡಿಯಲ್ಲೂ ಗೋಡೆಯಿಂದ ಹೊರಗೆ ಮುಖ ಹಾಕಿ ಕೂರಬಲ್ಲದು.

ಚಲನಚಿತ್ರಗಳಲ್ಲಿ ಗ್ರಾಫಿಕ್ಸ್ ಬಳಸಿದಂತೆ ಗೋಡೆಗಳಲ್ಲಿ ಗ್ರಾಫಿಟಿ ಬಣ್ಣಗಳಲ್ಲಿ, ಕಪ್ಪುಬಿಳುಪಿನಲ್ಲೂ ಸೃಜನಶೀಲತೆಯಿಂದ, ಕಲಾತ್ಮಕವಾಗಿ ಅಲಂಕರಿಸುತ್ತದೆ. ಮನಸ್ಸಿಗೆ ಮುದ ನೀಡುವ ಚಿತ್ರಗಳನ್ನು ಹೇಳಿ ಬರೆಸಬಹುದು. ಮಾನಸಿಕವಾಗಿ ಗ್ರಾಫಿಟಿ ಉತ್ತಮ ಅಂಶಗಳನ್ನು ಒಳಗೊಂಡಿದೆ. ಆದರೆ ದೈಹಿಕವಾಗಿ ಆರೋಗ್ಯ ಹದಗೆಡಿಸಲೂಬಹುದು. ಹೀಗಾಗಿ ಈ ವಿಷಯದಲ್ಲಿ ಎಚ್ಚರ ಅಗತ್ಯ. ಏಕೆಂದರೆ ಇದರಲ್ಲಿ ಬಳಸುವ ಪೇಂಟ್ ಟಾಕ್ಸಿಕ್ ಕೆಮಿಕಲ್‍ಗಳನ್ನು ಒಳಗೊಂಡಿರುತ್ತದೆ. ಹೀಗಾಗಿ ಪರ್ಯಾಯವಾಗಿ ಮಾಸ್ ಗ್ರಾಫಿಟಿ ಬಳಸಬಹುದು.

ಇದು ಗ್ರೀನ್ ಆರ್ಟ್ ಆಗಿದ್ದು, ಹೂವು ಬೆಳೆಯದ ಹುಲ್ಲಿಗೆ ಬಿಯರ್ ಮತ್ತು ಮೊಸರು ಹಾಕಿ ಗೋಡೆಗೆ ಬೇಕಾದ ಆಕಾರದಲ್ಲಿ ಅಂಟಿಸಲಾಗುತ್ತದೆ. ಅಂಟಿಸುವುದರಿಂದ ಹುಲ್ಲು ಬೆಳೆಯುವ ಗೊಡವೆಯೂ ಇಲ್ಲ. ಪರಿಸರ ಸ್ನೇಹಿಯಂತೆಯೂ ಕಾಣುತ್ತದೆ. ಆರೋಗ್ಯಕ್ಕೂ ಒಳ್ಳೆಯದು.

ಜಾಹೀರಾತಿಗೂ ಗ್ರಾಫಿಟಿ

ಹೆಸರು ಹೊಸದೆಂದ ಮಾತ್ರಕ್ಕೆ ನಿನ್ನೆ ಮೊನ್ನೆ ಹುಟ್ಟಿಕೊಂಡ ಆರ್ಟ್ ಇದಲ್ಲ. ಗ್ರೀಕರ, ರೋಮನ್ನರ ಕಾಲದಲ್ಲೇ ಗ್ರಾಫಿಟಿಯ ಬೇರುಗಳು ಸಿಗುತ್ತವೆ. ಬೆಂಗಳೂರಿನಲ್ಲೂ ಮಲ್ಲೇಶ್ವರಂ, ಎಂಜಿ ರೋಡ್, ಬನಶಂಕರಿ, ಕಲ್ಯಾಣನಗರಗಳಲ್ಲಿ ಗ್ರಾಫಿಟಿ ಜಾಹೀರಾತಾಗಿ, ಹೋಟೆಲ್‍ನ ಹೆಸರಾಗಿ, ಮಾಹಿತಿ ನೀಡುವ ಸಲುವಾಗಿ, ಜಾಗೃತಿ ಮೂಡಿಸುವಂಥ ವಿವಿಧ ಕಾರಣಕ್ಕಾಗಿ ಗ್ರಾಫಿಟಿ ಎತ್ತರದ ಗೋಡೆಗಳಲ್ಲಿ ಹಬ್ಬಿ ನಿಂತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com