ವಿಧವೆಯರು ಯಾಕೆ ಕುಂಕುಮವನ್ನು ಹಣೆ ಮೇಲೆ ಇಡಬಾರದು?

ಸಿಂಧೂರಮ್‌ ಸೌಂದರ್ಯ ಸಾಧನಂ ಎಂಬ ನಾಣ್ಣುಡಿಯೊಂದಿದೆ. ಹಣೆಯ ಮೇಲೆ ನಗುನಗುತಿರುವ ಕುಂಕುಮದಿಂದ ಮೊಗವು ಆಕರ್ಷಕವಾಗಿರುವುದು...
ಕುಂಕುಮ ಪುಡಿ
ಕುಂಕುಮ ಪುಡಿ

ಸಿಂಧೂರಮ್‌ ಸೌಂದರ್ಯ ಸಾಧನಂ ಎಂಬ ನಾಣ್ಣುಡಿಯೊಂದಿದೆ. ಹಣೆಯ ಮೇಲೆ ನಗುನಗುತಿರುವ ಕುಂಕುಮದಿಂದ ಮೊಗವು ಆಕರ್ಷಕವಾಗಿರುವುದು.ಕುಂಕುಮ ಅಂದ ತಕ್ಷಣ ನೆನಪಿಗೆ ಬರುವುದು ಕೆಂಪು .

ಹಿ೦ದೂ ಧರ್ಮದವರು ತಮ್ಮ ಧಾರ್ಮಿಕ ಮತ್ತು ಸಾಮಾಜಿಕ ಆಚರಣೆಗಳಲ್ಲಿ ಕು೦ಕುಮ ಬಳಸುತ್ತಾರೆ. ಅದನ್ನು ಅರಿಷಿಣ ಅಥವಾ ಖಾವಿಯಿಂದ ತಯಾರಿಸಲಾಗುತ್ತದೆ. ಅರಸಿನ ಕೊ೦ಬುಗಳನ್ನು ಚೆನ್ನಾಗಿ ಒಣಗಿಸಿ ಪುಡಿಮಾಡಿ ಸ್ವಲ್ಪ ನೀರೂಡಿಸಿದ ಸುಣ್ಣ ಬೆರೆಸಿದಾಗ ಗಾಢ ಹಳದಿ ಬಣ್ಣದ ಪುಡಿಯು ಕೆ೦ಪು ಬಣ್ಣಕ್ಕೆ ಬದಲಾಗುತ್ತದೆ.

ಕುಂಕುಮವನ್ನು ಸಾಮಾನ್ಯವಾಗಿ ಹಿಂದೂಗಳು ಹಣೆಯ ಮೇಲೆ ಹಚ್ಚಿಕೊಳ್ಳುತ್ತಾರೆ. ಈ ಸ್ಥಳದಲ್ಲಿ ಇಟ್ಟುಕೊಳ್ಳಲು ಕಾರಣವೇನೆಂದರೆ ಯೋಗ ಅಭ್ಯಾಸದಲ್ಲಿ ಮಾನವ ದೇಹ ಏಳು ಶಕ್ತಿ ಕೇಂದ್ರಗಳಾಗಿ ವಿಭಜಿಸಲ್ಪಟ್ಟಿದೆ. ಬೆನ್ನುಮೂಳೆಯ ಮೂಲದಿಂದ ಪ್ರಾರಂಭವಾಗಿ ತಲೆಯ ತುದಿಯವರೆಗೆ ಹರಡಿದೆ. ಈ ಶಕ್ತಿಕೇಂದ್ರಗಳಲ್ಲಿ ಆರನೆಯ ಚಕ್ರವು ಮೂರನೆಯ ಕಣ್ಣು ಎಂದೂ ಹೇಳುವುದುಂಟು. ಇದು ಕಣ್ಣುಗಳ ಹುಬ್ಬುಗಳ ನಡುವೆ ಇರುವ ಬಿಂದು. ಈ ಬಿಂದುವಿನ ಮೂಲಕ ಮಾನವ ಆಧ್ಯಾತ್ಮಿಕವಾಗಿ ದೈವಿಕತೆಗೆ ತೆರೆಯುವ ಸ್ಥಳ ಎಂದೂ ನಂಬಲಾಗಿದೆ.

ಗಂಡನ ಮರಣಾ ನಂತರ ಆತನ ಹೆಂಡತಿ ಹಣೆಯಲ್ಲಿ ಕುಂಕುಮವನ್ನು ಧರಿಸುವಾಗ ಆಕೆಯು ತನ್ನ ಗಂಡನನ್ನು ನೆನೆಸಿಕೊಳ್ಳುತ್ತಾಳೆ. ಇದರಿಂದ ಆಕೆಯ ಗಂಡನ ಶರೀರವು ಮತ್ತೆ ಭೂಲೋಕಕ್ಕೆ ಬರುವ ಅನಿವಾರ್ಯ ಸನ್ನಿವೇಶವುಂಟಾಗಬಹುದು ಎಂದು ನಂಬಲಾಗಿದೆ. ವಿಧವೆಯ ಗಂಡನ ಸೂಕ್ಷ್ಮ ಶರೀರದ ಮರಣೋತ್ತರ ಪ್ರಯಾಣಕ್ಕೆ ತೊಡಕುಂಟಾಗುತ್ತದೆ. ಮಾಯೆಯ ಮೋಹದಿಂದ ಬಿಡುಗಡೆ ಹೊಂದಲು ಮಹಿಳೆಯು ತನ್ನ ಗಂಡನ ಮರಣಾ ನಂತರ ತನ್ನಲ್ಲಿದ್ದ ಮೋಹದ ಭಾವವದಿಂದ ಬಿಡುಗಡೆ ಪಡೆಯುವ ಕಡೆ ತನ್ನ ಪ್ರಜ್ಞೆಯನ್ನು ಎಚ್ಚರಿಸಿಕೊಳ್ಳುವ ಸಲುವಾಗಿ, ಮುತ್ತೈದೆ ಭಾಗ್ಯಗಳಾದ ಹೂವು, ಮಾಂಗಲ್ಯ ಕಾಲುಂಗುರ, ಬಳೆ ಮತ್ತು ಕುಂಕುಮವನ್ನು ತ್ಯಜಿಸುತ್ತಾರೆ. ಇದು ಆಕೆ ತನ್ನ ಮನಸ್ಸನ್ನು ಭಗವಂತನ ಕಡೆ ತಿರುಗಿಸುವುದಕ್ಕೆ ಪ್ರಯತ್ನಿಸಲು ಸಹಾಯಕಾರಿಯಾಗುತ್ತದೆ.

ಆದರೆ ಇತ್ತೀಚಿನ ದಿನಗಳಲ್ಲಿ ಆಧುನೀಕತೆ ಮುಂದುವರಿದಂತೆ ಕಟ್ಟು ಪಾಡು, ಸಂಪ್ರದಾಯಗಳೆಲ್ಲಾ ದಿನ ನಿತ್ಯದ ಜೀವನದಿಂದ ದೂರು ಸರಿಯುತ್ತಿದ್ದು, ಹಲವು ಕಂದಾಚಾರ ಮೌಢ್ಯಗಳಿಗೆ ಬ್ರೇಕ್ ಹಾಕಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com