ಸ್ಕಿನ್‌ ಟೈಟ್ ಜೀನ್ಸ್ ತೊಟ್ಟಿದ್ದರಿಂದ ಕುಸಿದು ಬಿದ್ದ ಮಹಿಳೆ!

ಸ್ಕಿನ್‌ ಟೈಟ್‌ ಜೀನ್ಸ್‌ ಧರಿಸಿದ್ದರಿಂದ ಕಾಲಿನ ರಕ್ತ ಸಂಚರಾ ಸ್ಥಗಿತಗೊಂಡು ಆಸ್ಟ್ರೇಲಿಯಾದ ಮಹಿಳೆಯೊಬ್ಬರು ಕುಸಿದು ಬಿದ್ದ ಘಟನೆ ಮಂಗಳವಾರ ವರದಿಯಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮೆಲ್ಬರ್ನ್‌: ಸ್ಕಿನ್‌ ಟೈಟ್‌ ಜೀನ್ಸ್‌ ಧರಿಸಿದ್ದರಿಂದ ಕಾಲಿನ ರಕ್ತ ಸಂಚರಾ ಸ್ಥಗಿತಗೊಂಡು ಆಸ್ಟ್ರೇಲಿಯಾದ ಮಹಿಳೆಯೊಬ್ಬರು ಕುಸಿದು ಬಿದ್ದ ಘಟನೆ ಮಂಗಳವಾರ ವರದಿಯಾಗಿದೆ.

ಅಡಿಲೇಡ್ ನ 35 ವರ್ಷದ ಮಹಿಳೆ  ಸ್ಕಿನ್ ಟೈಟ್ ಜೀನ್ಸ್‌ ಪ್ಯಾಂಟ್‌ ಧರಿಸಿ ಎಲ್ಲೋ ಹೊರಟಿದ್ದರು. ಟೈಟ್ ಜೀನ್ಸ್ ನಿಂದಾಗಿ ಆಕೆಯ ಕಾಲು ಊದಿಕೊಂಡಿದ್ದರಿಂದ ನಡೆದಾಡುವುದೂ ಕಷ್ಟವಾಗಿ ಕುಸಿದು ಬಿದ್ದಿದ್ದಾರೆ. ಬಳಿಕ ಸ್ಥಳೀಯರು ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರು.

ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಆಸ್ಪತ್ರೆಯ ನರರೋಗ ತಜ್ಞ  ಡಾ. ಥಾಮಸ್‌ ಕಿಂಬರ್‌ ಅವರು, ಮಹಿಳೆಯನ್ನು ನಮ್ಮ ಆಸ್ಪತ್ರೆಗೆ ಕರೆತಂದಾಗ ಆಕೆಯ ಪರಿಸ್ಥಿತಿ ಗಂಭೀರವಾಗಿತ್ತು. ಎರಡೂ ಕಾಲುಗಳ ಮಂಡಿಯಿಂದ ಕೆಳಗಿನ ಮಾಂಸಖಂಡಗಳು ವಿಪರೀತ ಊದಿಕೊಂಡಿದ್ದವು. ಆಕೆ ಧರಿಸಿದ್ದ ಪ್ಯಾಂಟ್‌ನ್ನು ಒಂದಿಂಚೂ ಸರಿಸಲು ಸಾಧ್ಯವಾಗದೆ ಪ್ಯಾಂಟ್‌ ಕತ್ತರಿಸುವುದು ಅನಿವಾರ್ಯವಾಯಿತ ಎಂದು ಹೇಳಿದ್ದಾರೆ.

ಮಹಿಳೆಗೆ ತನ್ನ ಪಾದ ಅಥವಾ ಬೆರಳುಗಳನ್ನು ಸರಿಸಲೂ ಆಗುತ್ತಿರಲಿಲ್ಲ. ಅಷ್ಟರಲ್ಲಾಗಲೇ ಕಾಲುಗಳ ಕೆಳಭಾಗ ಮತ್ತು ಪಾದಗಳಲ್ಲಿ ಸ್ಪರ್ಶಜ್ಞಾನವೂ ಇರಲಿಲ್ಲ. ಅಭಿಧಮನಿಯೊಳಗೆ ಡ್ರಿಪ್ಸ್‌ ಹಾಕಿದ ನಂತರ ಕೊಂಚ ಚೇತರಿಸಿಕೊಂಡು, ಯಾರದೇ ಸಹಾಯವಿಲ್ಲದೆ ನಡೆದಾಡುವ ಹಂತಕ್ಕೆ ಬಂದ ಮೇಲೆ ಅಂದರೆ ನಾಲ್ಕು ದಿನಗಳ ನಂತರ ಮನೆಗೆ ಕಳುಹಿಸಲಾಯಿತು’ ಎಂದು ಥಾಮಸ್ ವಿವರಿಸಿದ್ದಾರೆ.

ರಕ್ತ ಸಂಚಾರ ಸ್ಥಗಿತ: ದೀರ್ಘಾವಧಿ ಅತಿ ಬಿಗಿಯಾದ ಜೀನ್ಸ್‌ ಪ್ಯಾಂಟ್‌ ಧರಿಸಿದ್ದರಿಂದ ಆಕೆಯ ಎರಡೂ ಕಾಲುಗಳ ನರಗಳಿಗೆ ಗಂಭೀರ ಪ್ರಮಾಣದ  ಹಾನಿಯಾಗಿದೆ. ಅಲ್ಲದೆ ಕಾಲುಗಳ ಕೆಳಭಾಗಕ್ಕೆ ರಕ್ತ ಸಂಚಾರಕ್ಕೂ ತೀವ್ರ ಅಡಚಣೆಯಾದ ಪರಿಣಾಮ ಮಾಂಸಖಂಡಗಳು ಸ್ಪರ್ಶಜ್ಞಾನವನ್ನು ಕಳೆದುಕೊಂಡು ಊದಿಕೊಂಡಿದ್ದವು ಎಂದು ಸ್ಥಳೀಯ ಆಸ್ಪತ್ರೆಯ ವೈದ್ಯರ ತಂಡ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com