ಸುಖೀ ದಾಂಪತ್ಯಕ್ಕೊಂದು ಕಿವಿಮಾತು

ಆಫೀಸು ಕೆಲಸ ಮುಗಿಸಿ ಗಂಡ ಮನೆಗೆ ಬಂದಾಗ ಹೆಂಡತಿಯಾದವಳು ಬಿಸಿ ಬಿಸಿ ಕಾಫಿ ಮಾಡಿಕೊಡಬೇಕು ಎಂಬ ಆಸೆ ಹೆಚ್ಚಿನ ಗಂಡಸರಿಗೆ...
ದಂಪತಿಗಳು (ಸಾಂದರ್ಭಿಕ ಚಿತ್ರ )
ದಂಪತಿಗಳು (ಸಾಂದರ್ಭಿಕ ಚಿತ್ರ )
Updated on

ಆಫೀಸು ಕೆಲಸ ಮುಗಿಸಿ ಗಂಡ ಮನೆಗೆ ಬಂದಾಗ ಹೆಂಡತಿಯಾದವಳು ಬಿಸಿ ಬಿಸಿ ಕಾಫಿ ಮಾಡಿಕೊಡಬೇಕು ಎಂಬ ಆಸೆ ಹೆಚ್ಚಿನ ಗಂಡಸರಿಗೆ ಇರುತ್ತೆ. ಆದರೆ ಸುಸ್ತಾಗಿ ಬಂದ ಗಂಡನಿಗೆ ಕೆಲವೊಮ್ಮೆ ಬಿಸಿ ಬಿಸಿ ಕಾಫಿ ಜತೆ ದೂರುಗಳ ಪಟ್ಟಿಯನ್ನೂ ಹೆಂಡ್ತಿ ಒಪ್ಪಿಸುತ್ತಾಳೆ. ಅಷ್ಟೊತ್ತಿಗೆ ಅಲ್ಲಿ ಜಗಳ ಶುರುವಾಗಿಯೇ ಬಿಡುತ್ತೆ. ಮನೆಗೆ ಬಂದ ಕೂಡಲೇ ಶುರುವಾಗುತ್ತೆ ನಿನ್ನ ರಾಮಾಯಣ ಎಂದು ಗಂಡ ಗೊಣಗುಟ್ಟಿದರೆ ನಿನ್ನನ್ನು ಮದುವೆಯಾಗಿ ತಪ್ಪು ಮಾಡಿಬಿಟ್ಟೆ ಅನ್ನುತ್ತಾಳೆ ಹೆಂಡತಿ. ಹೀಗೆ ಪರಸ್ಪರ ತಪ್ಪುಗಳನ್ನು ಹೊರಿಸಿಕೊಂಡು ಅಲ್ಲೊಂದು ಮಹಾ ಯುದ್ಧವೇ ನಡೆಯುತ್ತವೆ. ಗಂಡ ಹೆಂಡತಿಯ ಜಗಳ ಉಂಡು ಮಲಗುವ ತನಕ ಎಂಬುದು ನಾಣ್ನುಡಿ. ಆದರೆ ಈಗೀಗ ಇಂಥಾ ಪುಟ್ಟ ಪುಟ್ಟ ಜಗಳಗಳೇ ವಿಚ್ಛೇದನ, ಆತ್ಮಹತ್ಯೆ ಅಥವಾ ಕೊಲೆಗಳಿಗೆ ಕಾರಣವಾಗುತ್ತದೆ.

ದಾಂಪತ್ಯದಲ್ಲಿ ಇಬ್ಬರ ನಡುವೆ ಸಾಮರಸ್ಯದ ಕೊರತೆ ಮತ್ತು ಪರಸ್ಪರ ಅರ್ಥೈಸಿ
ಕೊಳ್ಳುವುದರಲ್ಲಿ ಎಡವಿರುವುದೇ ಬಹುತೇಕ ವಿರಸಗಳಿಗೆ ಕಾರಣ. ದಾಂಪತ್ಯದಲ್ಲಿ ಒಂದು ಪುಟ್ಟ ಒಡಕು ಮೂಡಿದರೆ ಸಾಕು , ಅಲ್ಲಿ ಸಂಶಯದ ಭೂತ ಧುತ್ತನೆ ಮೇಲೇಳುತ್ತದೆ. ಪ್ರತಿಯೊಂದನ್ನೂ ಸಂಶಯದಿಂದ ನೋಡುವ ಮನಸ್ಥಿತಿ ಇಬ್ಬರಲ್ಲೂ ಬಂದರೆ ಮುಗೀತು..ಆ ದಾಂಪತ್ಯದ ಸುಖ ಅಲ್ಲೇ ಇಲ್ಲವಾಗುತ್ತದೆ. ದಾಂಪತ್ಯದಲ್ಲಿ ಇಂಥದೆಲ್ಲಾ ಇದ್ದದ್ದೇ ಎಂದು ಸುಮ್ಮನೆ ಕೂರುವ ಬದಲು ಕೆಲವೊಂದು ಸೂತ್ರಗಳನ್ನು ಪಾಲಿಸಿದರೆ, ಪುಟ್ಟ ಪುಟ್ಟ ಜಗಳನ್ನು ದೂರವಿರಿಸಿ ನೆಮ್ಮದಿಯಾಗಿರಬಹುದು.

ಇದಕ್ಕೆ ನೀವೇನು ಮಾಡಬೇಕು ಗೊತ್ತಾ?
 

  • ನಿಮ್ಮ ಸುತ್ತಲೂ ಪಾಸಿಟಿವ್ ಎನರ್ಜಿ ತುಂಬಿರುವಂತೆ ಮಾಡಿ. ಎಲ್ಲ ವಿಷಯದಲ್ಲೂ ಪಾಸಿಟಿವ್ ಆಗಿ ಯೋಚನೆ ಮಾಡಿ
  • ಸತ್ಯಾಸತ್ಯತೆಯನ್ನು ಅರಿತ ನಂತರವೇ ಮಾತನಾಡಿ, ಜಗಳದಿಂದ ದೂರವಿರಿ
  • ನಿಮ್ಮ ಸಂಗಾತಿಯ ಒಳ್ಳೆಯ ಗುಣಗಳ ಬಗ್ಗೆ ಆಗಾಗ್ಗೆ ಮೆಚ್ಚುಗೆ ವ್ಯಕ್ತ ಪಡಿಸುತ್ತಿರಿ.
  • ಕೆಟ್ಟ ಗುಣಗಳಿದ್ದರೆ ಅದನ್ನು ಸರಿಪಡಿಸುವಾಗ ಹಿರಿಯರ ಸಹಾಯ ತೆಗೆದುಕೊಳ್ಳಿ
  • ಮನೆಯ ವಿಷಯಗಳು ಮನೆಯಲ್ಲೇ ಇದ್ದರೆ ಒಳಿತು. ಸಮಸ್ಯೆ ಬಂದರೆ ಮನೆಯ ಹಿರಿಯರಲ್ಲಿ  ಹೇಳಿ ಪರಿಹಾರ ಕಂಡುಕೊಳ್ಳಬೇಕೇ ವಿನಾ ನೆರೆಮನೆಯವರಲ್ಲಿ ನಿಮ್ಮ ದುಃಖ ತೋಡಿಕೊಳ್ಳಬೇಡಿ. (ನೆರೆಮನೆಯವರು ಒಳ್ಳೆಯವರಿರಬಹುದು ಆದರೆ ಎಲ್ಲರೂ ಒಳ್ಳೆಯವರಾಗಿರಲ್ಲ ಎಂಬುದು ನೆನಪಿಡಿ)
  • ನಿಮ್ಮ ಕುಟುಂಬ ಜೀವನವನ್ನು ಇನ್ನೊಬ್ಬ ವ್ಯಕ್ತಿಯೊಂದಿಗೆಯೋ, ಕುಟುಂಬದೊಂದಿಗೆಯೋ ತುಲನೆ ಮಾಡುವುದು ಬೇಡ. ಅವರು ಅವರೇ, ನೀವು ನೀವೇ..ಅವರು ನೀವಾಗಲು ಸಾಧ್ಯವಿಲ್ಲ, ನೀವು ಅವರಾಗಲು ಸಾಧ್ಯವಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಿ
  • ನಿಮ್ಮ ಆದಾಯಕ್ಕೆ ತಕ್ಕಂತೆಯೇ ನಿಮ್ಮ ಲೈಫ್ ಸ್ಟೈಲ್ ಇರಲಿ. ಆದಾಯ ಕಡಿಮೆ ಇದ್ದಾಗ ಆಡಂಬರ ಜೀವನ ನೆಮ್ಮದಿಗೆ ಸಂಚಕಾರ ತಂದೊಡ್ಡುತ್ತದೆ.
  • ನಿಮ್ಮ ಸಂಗಾತಿಯ ಮೇಲೆ ನಂಬಿಕೆ ಇರಲಿ. ಪುಟ್ಟ ಪುಟ್ಟ ಸಂಶಯಗಳಿಂದಲೇ ಸಂಬಂಧಗಳು ಮುರಿದು ಬೀಳುತ್ತವೆ. ನಿಮ್ಮ ಸಂಗಾತಿಯ ಮೇಲೆ ನಿಮಗೆ ನಂಬಿಕೆಯಿದ್ದರೆ ಸಾಕು ಪ್ರೀತಿ, ನೆಮ್ಮದಿ, ಸಾಮರಸ್ಯ ಎಲ್ಲವೂ ನಿಮ್ಮದಾಗುತ್ತದೆ.
  • ನಿಮ್ಮ ಸಂಗಾತಿಗೆ ಸಮಯ ಕೊಡಿ. ಕೆಲಸದ ಬ್ಯುಸಿಯಲ್ಲಿ ಕಳೆದು ಹೋಗಿ, ಸಾಕಷ್ಟು ಸಂಪಾದನೆ ಮಾಡಿದ್ದರೂ ನಿಮ್ಮ ಸಂಗಾತಿಗೆ, ಕುಟುಂಬಕ್ಕೆ ನೀವು ಸಮಯ ಮೀಸಲಿರಿಸದೇ ಇದ್ದರೆ ಕುಟುಂಬದ ತಾಳ ತಪ್ಪಿ ಹೋಗುತ್ತದೆ. ಕೆಲಸದೊಂದಿಗೆ ಕುಟುಂಬವೂ ಮುಖ್ಯ. ಕುಟುಂಬದವರಿಗೆ ನಿಮ್ಮ ಸಮಯ ಕೊಡಿ, ಅವರೊಂದಿಗೆ ನೀವು ಕಳೆಯುವ ಕ್ಷಣಗಳನ್ನು ದುಡ್ಡು ಕೊಟ್ಟು ಖರೀದಿಸಲು ಸಾಧ್ಯವಿಲ್ಲ.
  • ಏನೇ ಕಷ್ಟ ಬಂದರೂ ನಿಮ್ಮ ಜತೆಯಾಗಿ ನಿಲ್ಲುವುದು ನಿಮ್ಮ ಕುಟುಂಬ ಮಾತ್ರ. ಯಾವುದೇ ಕಾರಣಕ್ಕೆ ಕುಟುಂಬವನ್ನು ಕಡೆಗಣಿಸಬೇಡಿ.
  • ಕಚೇರಿ ಟೆನ್ಶ್‌ನ್‌ನ್ನು ಕಚೇರಿಯಲ್ಲೇ ಬಿಟ್ಟು ಬನ್ನಿ. ನಿಮ್ಮ ಮನೆಗೆ ಬಂದಾಗ ಮನೆ ಮಕ್ಕಳು ಸಂಸಾರದೊಂದಿಗೆ ಎಲ್ಲವನ್ನೂ ಮರೆತು ಪ್ರೀತಿಸಿ
  • ಪ್ರತೀ ದಿನ ಹೊಸತು ಎಂಬಂತೆ ಬದುಕಿ. ನಿಮ್ಮ ಸಂಗಾತಿಯಲ್ಲಿಯೂ ಈ ಹೊಸತನವನ್ನು ಕಾಣಲು ಯತ್ನಿಸಿ.
  • ದುಡ್ಡು, ಸಂಪಾದನೆ, ಐಷಾರಾಮಿ ಬಂಗಲೆ ಏನೇ ಇದ್ದರೂ ನೆಮ್ಮದಿ ಇಲ್ಲದಿದ್ದರೆ ಏನು ಪ್ರಯೋಜನ?  ನೆಮ್ಮದಿ ಬೇಕೆಂದರೆ ನಮ್ಮವರನ್ನು ಪ್ರೀತಿಸಬೇಕು, ನಾವು ಮಾಡುವ ಕೆಲಸವನ್ನು ಪ್ರೀತಿಸಬೇಕು. ಪ್ರೀತಿಯಿಂದ ಎಲ್ಲವನ್ನೂ ಗೆಲ್ಲಲು ಸಾಧ್ಯ.

-ಸಾರ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com