
ವಯಸ್ಸು 35. ಅಲ್ಲಲ್ಲಿ ಬಿಳಿ ಕೂದಲು ಕಾಣಿಸಿಕೊಂಡಿದೆ. ಮುಖದಲ್ಲಿ ಸುಕ್ಕು ಮೆಲ್ಲನೆ ಇಣುಕುತ್ತಿದೆ. ಕನ್ನಡಿಯ ಮುಂದೆ ನಿಂತು ನನಗೆ ವಯಸ್ಸಾಯಿತು ಎಂದು ನಿಟ್ಟುಸಿರು ಬಿಡುವಾಗ, ಮತ್ತಷ್ಟು ಯಂಗ್ ಕಾಣಿಸುವುದು ಹೇಗೆ? ಎಂಬ ಪ್ರಶ್ನೆಯೂ ಎದ್ದೇಳುತ್ತದೆ. ಸಾಮಾನ್ಯವಾಗಿ ಗಂಡಸರಿಗಿಂತ ಹೆಂಗಸರಿಗೆ ಬೇಗನೆ ವಯಸ್ಸಾದಂತೆ ಕಾಣುತ್ತದೆ. ಮನೆಯ ಜವಾಬ್ದಾರಿ ಹಾಗೂ ಕಚೇರಿ ಕೆಲಸಗಳ ಒತ್ತಡವೂ ಇದಕ್ಕೆ ಕಾರಣ. ಹೀಗಿರುವಾಗಲೇ ಕೇವಲ ಏಳು ದಿನಗಳಲ್ಲಿ ಮುಖದ ಸುಕ್ಕುಗಳು ಇಲ್ಲದಂತೆ ಮಾಡಿ ಎನ್ನುವ ಜಾಹೀರಾತು ಪದೇ ಪದೇ ಗಮನ ಸೆಳೆಯುತ್ತದೆ. ಆ ಕ್ರೀಮ್ ಬಳಸಲೋ, ಈ ಕ್ರೀಮ್ ಬಳಸಲೋ ಎಂಬ ದ್ವಂದ್ವ. ಕ್ರೀಮ್ ಬಳಸಿ ಅಡ್ಡಪರಿಣಾಮಗೊಳಗಾದವರ ಮುಖಗಳು ಕಣ್ಣಿಗೆ ಬರುತ್ತವೆ. ಏನೂ ಬೇಡ ಎಂದು ಸುಮ್ಮನಿರಲು ಮನಸ್ಸು ಒಲ್ಲದು. ಹಾಗಾದರೆ ಏನು ಮಾಡಬೇಕು? ಎಂಬುದು ನಿಮ್ಮ ಪ್ರಶ್ನೆಯಾಗಿದ್ದರೆ ಜಸ್ಟ್ ನಿಮ್ಮ ಉಡುಗೆ ತೊಡುಗೆಗಳ ಸ್ಟೈಲ್ ಬದಲಾಯಿಸಿಕೊಳ್ಳಿ!
ಯೆಸ್ ...ನಿಮ್ಮ ಡ್ರೆಸ್ಸಿಂಗ್ ಸ್ಟೈಲ್ ನಿಂದ ಇನ್ನಷ್ಟು ಯಂಗ್ ಆಗಿ ಕಾಣಿಸಿಕೊಳ್ಳಬಹುದು.
ಡ್ರೆಸ್‌ನಿಂದ ಹೊಸ ಲುಕ್
ಯಾರಾದ್ರೂ ಆಂಟಿ ಎಂದು ಕರೆದರೆ ಕೋಪ ಬರುತ್ತೆ. ಸಾರಿ ಉಟ್ಟುಕೊಂಡು ಬಂದರೆ ಆಂಟಿ, ಜೀನ್ಸ್ ಟಾಪ್ ಹಾಕಿಕೊಂಡರೆ 25ರ ಹರೆಯದ ಹುಡುಗಿ! ಹರೆಯವನ್ನು ಮರೆಮಾಚಲು ಮಾಡರ್ನ್ ಡ್ರೆಸ್‌ಗಳನ್ನು ಧರಿಸಬೇಕೆಂಬ ರೂಲ್ಸ್ ಏನೂ ಇಲ್ಲ. ಹಾಗಾದರೆ ಯಾವ ರೀತಿಯ ಡ್ರೆಸ್ ಧರಿಸಬೇಕು? ಇಲ್ಲಿದೆ ಟಿಪ್ಸ್...
Advertisement