ಸುಲಭವಾಗಿ ಏರ್ ಕೂಲರ್ ನಿರ್ವಹಣೆ

ಆಧುನಿಕ ಜಗತ್ತಿನ ಜೀವನ ಸರವೇಗದಲ್ಲಿ ಬದಲಾಗುತ್ತಿದೆ. ಅದಕ್ಕೆ ತಕ್ಕಂತೆ ದೈನಂದಿನ ಬಳಕೆಯ ವಸ್ತುಗಳು ಆಧುನಿಕತೆಯ ಸ್ಪರ್ಶ ಪಡೆದುಕೊಳ್ಳುತ್ತಿವೆ. ಪ್ರತಿ ಋತು ಮಾನಗಳಿಗೂ ಹೊಸ ಯಂತ್ರಗಳ ಅವಶ್ಯಕತೆ ಇಂದು ಅತ್ಯಗತ್ಯ...
ಸುಲಭವಾಗಿ ಏರ್ ಕೂಲರ್ ನಿರ್ವಹಣೆ
ಸುಲಭವಾಗಿ ಏರ್ ಕೂಲರ್ ನಿರ್ವಹಣೆ
Updated on

ಆಧುನಿಕ ಜಗತ್ತಿನ ಜೀವನ ಸರವೇಗದಲ್ಲಿ ಬದಲಾಗುತ್ತಿದೆ. ಅದಕ್ಕೆ ತಕ್ಕಂತೆ ದೈನಂದಿನ ಬಳಕೆಯ ವಸ್ತುಗಳು ಆಧುನಿಕತೆಯ ಸ್ಪರ್ಶ ಪಡೆದುಕೊಳ್ಳುತ್ತಿವೆ. ಪ್ರತಿ ಋತು ಮಾನಗಳಿಗೂ ಹೊಸ ಯಂತ್ರಗಳ ಅವಶ್ಯಕತೆ ಇಂದು ಅತ್ಯಗತ್ಯ. ಅಷ್ಟರ ಮಟ್ಟಿಗೆ ಮನುಷ್ಯ ಯಂತ್ರಗಳ ಮೇಲೆ ಅವಲಂಭಿತನಾಗಿದ್ದಾನೆ. ಇದೀಗ ಬೇಸಿಗೆಗಾಲ, ಎಲ್ಲೆಡೆ ಬಿಸಿಲಿನ ಧಗೆ, ಬಿಸಿ ಗಾಳಿಯದ್ದೇ ಅನುಭವನ, ಆದ್ದರಿಂದ ಏರ್ ಕೂಲರ್ ಗೂ ಕಚೇರಿ, ಮನೆ, ಸಭಾಂಗಣ ಕಾರ್ಯಕ್ರಮಗಳಲ್ಲಿ ಅನಿವಾರ್ಯ ಏನ್ನುವಂತಾಗಿದೆ.

ಬೇಸಿಗೆ ಕಾಲದಲ್ಲಿ ಬಳಸಲ್ಪಡುವ ಏರ್ ಕೂಲರ್ ಗಳ ನಿವಾರಣೆ ಕೂಡ ಅತಿ ಮುಖ್ಯ. ಪ್ರತಿ ತಿಂಗಳು ಅಥವಾ ಬೇಸಿಗೆಗಾಲದಲ್ಲಿ ಏರ್ ಕೂಲರ್ ಗಳನ್ನು ಬದಲಾಯಿಸಬೇಕು. ಇದು ಕೂಲರ್ ಗಳನ್ನು ಧೀರ್ಘಕಾಲ ಬಾಳಿಕೆ ಬರಲು ಸಹಾಯ ಮಾಡುತ್ತವೆ. ಪ್ರತಿ ಆರು ತಿಂಗಳಿಗೊಮ್ಮೆ ಕೂಲರ್ ನಲ್ಲಿರುವ ಧೂಳನ್ನು ಸ್ವಚ್ಛಗೊಳಿಸಬೇಕು.

ಮೃದುವಾದ ಬಟ್ಟೆಯನ್ನು ನೀರಿನಲ್ಲಿ ಅದ್ದಿ, ಏರ್ ಕೂಲರ್ ನ್ನು ಸ್ವಚ್ಛಗೊಳಿಸಬೇಕು ಇದು ತಂಪಾದ ಗಾಳಿ ಹರಡಲು ಸಹಾಯವಾಗುತ್ತದೆ. ಏರ್ ಕೂಲರ್ ನಲ್ಲಿ ಫಿಲ್ಲರ್ ಮತ್ತು ಬೇಸಿನ್ ನ್ನು ಸ್ವಚ್ಚಮಾಡಬೇಕು. ಏಕೆಂದರೆ, ಗಾಳಿಯಲ್ಲಿನ ಧೂಳು ಬೇಸಿನ್ ನಲ್ಲಿ ಕಟ್ಟಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಇದು ತಂಪಾದ ಗಾಳಿಯನ್ನು ಹೊರಹಾಕಲು ಅಡ್ಡಲಾಗಿ ಪರಿಣಮಿಸುತ್ತದೆ. ಆದ್ದರಿಂದ ನಿಯಮಿತವಾಗಿ ಕೈಗೊಳ್ಳುವ ಏರ್ ಕೂಲರ್ ಸ್ವಚ್ಛತೆ ತಂಪಾದ ಗಾಳಿ ನೀಡಲು ಸಾಧ್ಯ.

ಏರ್ ಕೂಲರ್ ಗಳು ಕೇವಲ ತಂಪಾದ ಗಾಳಿ ನೀಡಲು ಮಾತ್ರ ಸೀಮಿತವಲ್ಲ. ಉಸಿರಾಡುವಾಗ ಏರ್ ಕೂಲರ್ ನಿಂದ ಹೊರಹಾಕಲ್ಪಡುವ ಗಾಳಿಯು ಶುದ್ಧವಾಗಿರಬೇಕು, ಆಧ್ದರಿಂದ ಈ ಕೆಳಕಂಡ ಸೂತ್ರಗಳು ಏರ್ ಕೂಲರ್ ಗಳನ್ನು ಸ್ವಚ್ಛವಾಗಿಡಲ ಸಹಕಾರಿ.

ಬೇಸಿಗೆಗಾಲದಲ್ಲಿ ಪಾಲಿಸಬೇಕಾದ ಸೂತ್ರಗಳು
1.ಏರ್ ಕೂಲರ್ ಮೇಲೆ ಹೊದಿಸಲ್ಪಟ್ಟ ವಸ್ತುಗಳನ್ನು ತೆಗೆದುಹಾಕಬೇಕು
2.ಫಿಲ್ಲರ್ ಪ್ಯಾಡ್ ಗಳನ್ನು ನೀರಿನಿಂದ ಸ್ವಚ್ಛಗೊಳಿಸಬೇಕು
3.ಮೃದುವಾದ ಬಟ್ಟೆಯನ್ನು ನೀರಿನಲ್ಲಿ ಅದ್ದಿ, ಏರ್ ಕೂಲರ್ ನ್ನು ಸ್ವಚ್ಛಗೊಳಿಸಬೇಕು

ಬೇಸಿಗೆಯ ನಂತರ ಸ್ವಚ್ಛವಾಗಿಡುವ ಬಗೆ

1.ಏರ್ ಕೂಲರ್ ಗೆ ಸಂಪರ್ಕಗೊಂಡ ವಿದ್ಯುತ್ ನ್ನು ಸ್ಥಗಿತಗೊಳಿಸಬೇಕು
2.ಮೃದುವಾದ ಬ್ರಶ್ ನಿಂದ ಏರ್ ಕೂಲರ್ ಗೆ ಅಂಟಿಕೊಂಡಿುರುವ ಧೂಳು ಮತ್ತು ಗಸಿಯಂತಹ ಅಂಟಾದ ಕೊಳೆಯನ್ನು ಸ್ವಚ್ಛಗೊಳಿಸಬೇಕು
3.ಕಲುಷಿತ ನೀರು ಟಯರ್ ಮತ್ತು ಪೈಪ್ ಗಳು ಮೂಲಕ ಹೊರ ಹಾಕಬೇಕು
4.ಮೃದುವಾದ ಬಟ್ಟೆಯಿಂದ ಬೇಸಿನ್ ಮತ್ತು ನೀರಿನ ಪಂಪ್ ಗಳನ್ನು ಶುದ್ಧಗೊಳಿಸಬೇಕು
5.ಫ್ಯಾನ್ ನನ್ನು ಚಾಲನೆಯಲ್ಲಿಟ್ಟು ಏರ್ ಕೂಲರ್ ನ ಒಳಭಾಗವನ್ನು ಶುಚಿಗೊಳಿಸಬೇಕು
6.ವಾಟರ್ ಫ್ರೂಫ್ ಕವರ್ ಗಳನ್ನು ಬಾಹ್ಯ ಅಂಶಗಳಿಂದ ಸಂರಕ್ಷಿಸಲ್ಬಡಬೇಕು

ಏರ್ ಕೂಲರ್ ನಿವಾರಣೆಯ ವಿಧಾನಗಳು: ಸುಲಭ ವಿಧಾನಗಳು

1.ಏರ್ ಕೂಲರ್ ಶುದ್ಧಗೊಳಿಸುವ ಮುನ್ನ ವಿದ್ಯುತ್ ಸಂಪರ್ಕ ಸ್ಧಗಿತಗೊಳಿಸಿ
2.ಧೂಳು ಮತ್ತು ಗಸಿಯಂತಹ ಕೊಳೆಯಿಂದ ಕೂಲರ್ ನ್ನು ಸಂರಕ್ಷಿಸಲು ಬೇಸಿಗೆ ಋತುಮಾನದಲ್ಲಿ ಎರಡು ಬಾರಿಯಾದರು ಪ್ಯಾಡನ್ನು ಬದಲಾಯಿಸಬೇಕು
3.ನೈಲಾನ್ ಬ್ರಶ್ ಮತ್ತು ಪ್ಲಾಸ್ಟಿಕ್ ಸ್ಕ್ಯಾಪರ್ಸ್ ಮೂಲಕ ಟ್ಯೂಬ್ ಗಳಲ್ಲಿ ಕಟ್ಟಿಕೊಂಡಿರುವ ಮರಳು, ಉಪ್ಪಿನಾಂಶ, ಮತ್ತಿತರ ಕೊಳೆಯನ್ನು ಹೊಗಲಾಡಿಸಬೇಕು
4. ವಿ-ಬೆಲ್ಟ್ ಬಿರುಕು ಬಿಟ್ಟಿದೆಯೇ ಎಂಬುದರ ಬಗ್ಗೆ ಗಮನ ಹರಿಸಬೇಕು
5. ಮೋಟಾರ್ ನ್ನು ಮತ್ತು ಗಾಳಿ ಚಕ್ರಗಳ ಸರಿಯಾದ ಕಾರ್ಯನಿರ್ವಹಣೆಯನ್ನು ಪರಿಶೀಲಿಸಬೇಕು. ಗಾಳಿ ಚಕ್ರಗಳು ಜಖಂಗೊಡಿದ್ದರೆ ಬದಲಾಯಿಸಬೇಕು
6. ನೀರು ಸರಿಯಾದ ಹರಿಯುವಿಕೆಗೆ ಸೈಡ್ ಪ್ಯಾನಲ್ ಗಳಲ್ಲಿ ಇಲ್ಲದಿದ್ದಾಗ, ಸುಲಭವಾಗಿ ಬಾಗಲು ತಂತಿಯನ್ನು ಟ್ಯೂಬ್ ಗಳಲ್ಲಿ ಇಳಿಬಿಟ್ಟು, ಶುದ್ಧಗೊಳಿಸಬೇಕು.
ಈ ಎಲ್ಲ ಅಂಶಗಳನ್ನು ಪಾಲಿಸಿದರೆ, ಏರ್ ಕೂಲರ್ ನಿಂದ ಹೊರಹೊಮ್ಮುವ ಗಾಳಿ ತಂಪಾಗಿದ್ದು, ದೀರ್ಘಕಾಲ ಬಾಳಿಕೆಗೆ ಲಭ್ಯವಾಗುತ್ತದೆ.

- ಮೈನಾಶ್ರೀ. ಸಿ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com