
ವಾಷಿಂಗ್ಟನ್: ಸಾಮಾನ್ಯವಾಗಿ ಉದ್ಯೋಗಸ್ಥ ಮಹಿಳೆಯರು ತಮ್ಮ ತಾಯಿಯಾಗುವ ಅವಕಾಶವನ್ನು ಮುಂದೂಡುವುದೇ ಹೆಚ್ಚು. 40ರವರೆಗೂ ದುಡಿದು ಬಳಿಕ ತಾಯಿತನವನ್ನು ಅನುಭವಿಸೋಣ ಎನ್ನುವ ತಾಯಂದಿರಿಗೆ ಎಚ್ಚರಿಕೆ ನೀಡುವ ವರದಿಯೊಂದು ಹೊರಬಿದ್ದಿದೆ.
ತಮ್ಮ 40 ವರ್ಷ ವಯಸ್ಸಿನ ಬಳಿಕ ಮಹಿಳೆ ತಾಯಿಯಾದರೆ ಆಕೆಗೆ ಹೃದಯಾಘಾತ ಮತ್ತು ಪಾರ್ಶವಾಯುವಿನ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ಇತ್ತೀಚಿನ ವೈಜ್ಞಾನಿಕ ವರದಿಯೊಂದು ಹೇಳಿದೆ. ಮಿನ್ನೆಸೋಟಾದಲ್ಲಿರುವ ಜೀನತ್ ಖುರೇಷಿ ಪಾರ್ಶ್ವವಾಯು ಚಿಕಿತ್ಸಾ ಸಂಸ್ಥೆ (Zeenat Qureshi Stroke Institute)ಯ ವೈದ್ಯ ಅದ್ನಾನ್ ಖುರೇಷಿ ಅವರು ಈ ವರದಿ ನೀಡಿದ್ದು, ಯೌವ್ವನದಲ್ಲಿ ತಾಯ್ತನ ಅನುಭವಿಸುವ ಮಹಿಳೆಯರಿಗಿಂತಲೂ ಹೆಚ್ಚಾಗಿ ವಯಸ್ಸಾದ ಮಹಿಳೆಯರು ತಾಯಿಯಾದರೆ ಅವರಲ್ಲಿ ಹೆಚ್ಚು ಆರೋಗ್ಯಕರ ಸಮಸ್ಯೆಗಳು ಎದುರಾಗುತ್ತವೆ ಎಂದು ತಿಳಿಸಿದ್ದಾರೆ.
ಅದ್ನಾನ್ ಖುರೇಷಿ ಅವರು ಸುಮಾರು 72, 221 ಮಹಿಳೆಯರನ್ನು ತಮ್ಮ ಅಧ್ಯಯನಕ್ಕೆ ಬಳಸಿಕೊಂಡಿದ್ದು, 50 ರಿಂದ 79 ವರ್ಷ ವಯಸ್ಸಿನೊಳಗಿರುವ ಮಹಿಳೆಯರನ್ನೂ ಕೂಡ ಅಧ್ಯಯನಕ್ಕೆ ಬಳಸಿಕೊಳ್ಳಲಾಗಿದೆ. ಈ ಪೈಕಿ 3, 306 ಮಹಿಳೆಯರು ಸೂಕ್ತ ವಯಸಿನ್ನಲ್ಲಿ ಗರ್ಭ ಧರಿಸಿದ್ದು, ಅವರಲ್ಲಿ ಹೃದಯಾಘಾತ ಮತ್ತು ಪಾರ್ಶ್ವವಾಯು ಪ್ರಮಾಣವನ್ನು ಲೆಕ್ಕಹಾಕಲಾಗಿದೆ. ಯೌವ್ವನಾ ವಸ್ಥೆಯಲ್ಲಿ ಗರ್ಭ ಧರಿಸಿದ ಮಹಿಳೆಯರಿಂಗಿತ 40 ಬಳಿಕ ಅಂದರೆ ಗರ್ಭ ಧರಿಸಿದ ವಯಸ್ಕ ಮಹಿಳೆಯರಲ್ಲಿ ಅತಿ ಹೆಚ್ಚು ಅನಾರೋಗ್ಯಕರ ಸಮಸ್ಯೆಗಳು ಕಂಡುಬಂದಿವೆ. ಪ್ರಮುಖವಾಗಿ ಹೃದಯಾಘಾತ ಮತ್ತು ಪಾರ್ಶ್ವವಾಯುವಿನಂತಹ ಗಂಭೀರ ಸಮಸ್ಯೆಗಳು ಹೆಚ್ಚಾಗಿ ಕಂಡುಬಂದಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಯೌವ್ವನಾವಸ್ಥೆಯಲ್ಲಿ ಗರ್ಭಧರಿಸುವ ಮಹಿಳೆಯರಿಗಿಂತ ಗರ್ಭ ಧರಿಸುವ ವಯಸ್ಕ ಮಹಿಳೆ ಅಂದರೆ 40 ರ ನಂತರ ಗರ್ಭ ಧರಿಸುವ ಮಹಿಳೆಯರಲ್ಲಿ ಹೆಚ್ಚಾಗಿ ಹೃದಯಾಘಾತ ಮತ್ತು ಪಾರ್ಶ್ವವಾಯುವಿನಂತಹ ಸಮಸ್ಯೆಗಳು ಕಂಡುಬಂದಿದೆ. ಇಂತಹ ಮಹಿಳೆಯರಲ್ಲಿ ಸಾಮಾನ್ಯವಾಗಿ ಶೇ. 2.4ರಿಂದ 3.8ರಷ್ಟು ಪಾರ್ಶ್ವವಾಯುವಿಗೆ ತುತ್ತಾಗುವ ಮತ್ತು ಶೇ.0.1ರಿಂದ ಶೇ.1 ರಷ್ಟು ಮೆದುಳು ಪಾರ್ಶವಾಯುವಿಗೆ ತುತ್ತಾಗುವ ಸಂಭವವಿದೆ. ಇದಲ್ಲದೆ ಶೇ.2.5ರಿಂದ ಶೇ. 3 ರಷ್ಟು ಹೃದಯಾಘಾತವಾಗುವ ಸಂಭವವಿದೆ.
ಒಟ್ಟಾರೆ ಯೌವ್ವನಾವಸ್ಥೆಯಲ್ಲಿ ಗರ್ಭಧರಿಸುವ ಮಹಿಳೆಯರಿಗಿಂತಲೂ 40 ರ ಬಳಿಕ ಗರ್ಭ ಧರಿಸುವ ಮಹಿಳೆಯರು ಹೆಚ್ಚು ಅನಾರೋಗ್ಯಕ್ಕೀಡಾಗುತ್ತಾರೆ ಎಂದು ವರದಿ ಹೇಳಿದೆ.
Advertisement