ಮೇಕ್‏ಅಪ್‏ಗೆ ಪುರುಷರಿಂದ ಮೆಚ್ಚುಗೆ, ಮಹಿಳೆಯರಿಂದ ಅಸೂಯೆ

ಮಹಿಳೆ ತನ್ನ ಪ್ರತಿಷ್ಠೆ ಹೆಚ್ಚಿಸಿಕೊಳ್ಳಲು ಮೇಕ್ ಅಪ್ ಮಾಡಿಕೊಳ್ಳುತ್ತಾಳೆ ಎಂದು ಪುರುಷ ಭಾವಿಸುತ್ತಾನೆ, ಆದರೆ ಮೇಕ್ ಅಪ್ ಮಾಡಿಕೊಳ್ಳುವುದು ತನ್ನ ಪ್ರಾಬಲ್ಯ ಮೆರೆಯಲು ಎಂದು ..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಲಂಡನ್: ಮಹಿಳೆಯರು ತಮ್ಮ ಸೌಂದರ್ಯ ಹೆಚ್ಚಿಸಿಕೊಳ್ಳಲು ಮೇಕ್ ಅಪ್ ಮಾಡಿಕೊಳ್ಳುತ್ತಾರೆ ಎಂದು ಭಾವಿಸಲಾಗಿತ್ತು, ಆದರೆ ಹೊಸ ಸಂಶೋಧನೆಯೊಂದು ಪ್ರಕಾರ ಈ ಅಭಿಪ್ರಾಯ ಸುಳ್ಳು ಎಂದು ಹೇಳಿದೆ.

ಮಹಿಳೆ ತನ್ನ ಪ್ರತಿಷ್ಠೆ ಹೆಚ್ಚಿಸಿಕೊಳ್ಳಲು ಮೇಕ್ ಅಪ್ ಮಾಡಿಕೊಳ್ಳುತ್ತಾಳೆ ಎಂದು ಪುರುಷ ಭಾವಿಸುತ್ತಾನೆ,  ಆದರೆ ಮೇಕ್ ಅಪ್ ಮಾಡಿಕೊಳ್ಳುವುದು ತನ್ನ ಪ್ರಾಬಲ್ಯ ಮೆರೆಯಲು ಎಂದು ಮಹಿಳೆ ಭಾವಿಸುತ್ತಾಳೆ ಎಂದು ಸಂಶೋಧನೆಯಿಂದ ಬಹಿರಂಗವಾಗಿದೆ.

ಮೇಕ್ ಅಪ್ ಬಗ್ಗೆ ಪುರುಷರು ಹಾಗೂ ಮಹಿಳೆಯರ ಗ್ರಹಿಕೆಗಳು ಭಿನ್ನವಾಗಿರುತ್ತವೆ. ಮೇಕ್ ಅಪ್ ಬಗ್ಗೆ ಮಹಿಳೆ ಮತ್ತು ಪುರುಷರು ಹೇಗೆ ವಿಭಿನ್ನವಾಗಿ ಗ್ರಹಿಸುತ್ತಾರೆ ಎಂಬುದನ್ನು ಸಂಶೋದನೆ ವರದಿ ಮಾಡಿದೆ.

ಹೆಣ್ಣು ಹಾಗೂ ಗಂಡುಮಕ್ಕಳ ಮಧ್ಯೆ ನಡೆಸಲಾದ ಅಧ್ಯಯನದಲ್ಲಿ ತಿಳಿದು ಬಂದ ಅಂಶವೆಂದರೆ. ಮೇಕಪ್ ಮಾಡಿಕೊಳ್ಳುವ ನಾರಿಯರು ಹೆಚ್ಚು ಆಕರ್ಷಕವಾಗಿ ಕಾಣಿಸುತ್ತಾರೆ ಎಂದು ಇಬ್ಬರು ಒಪ್ಪಿಕೊಂಡಿದ್ದಾರೆ. ಆದರೆ ಹೈ ಸ್ಟೇಟಸ್ ವಿಷಯ ಅವರವರು ನೋಡುವ ದೃಷ್ಟಿ ಕೋನದ ಮೇಲೆ ಅವಲಂಬಿತವಾಗಿರುತ್ತದೆ ಎಂದು ಸ್ಕಾಟ್ ಲ್ಯಾಂಡ್ ನ ಸ್ಟಿರ್ಲಿಂಗ್ ವಿವಿಯ ಸಂಶೋಧಕಿ ವಿಕ್ಟೋರಿಯಾ ಮಿಲೇವಾ ತಿಳಿಸಿದ್ದಾರೆ.

ಉನ್ನತ ಸ್ಥಾನವನ್ನು ಎರಡು ಪ್ರಮುಖ ಮಾರ್ಗಗಳಿಂದ ಪಡೆಯಬಹುದು ಎಂದು ಸಂಶೋಧಕರು ಹೇಳಿದ್ದಾರೆ. ಪ್ರತಿಷ್ಠೆಯಿಂದ ಉನ್ನತ ಸ್ಥಾನ ಪಡೆಯಬಹುದು.

ನಿಮ್ಮ ಬಗ್ಗೆ ಧನಾತ್ಮಕ ಅಭಿಪ್ರಾಯಗಳು ಹಾಗೂ ನಿಮ್ಮ ಗುಣಗಳು ಬೇರೆಯವರು ನಿಮ್ಮನ್ನು ಅನುಸರಿಸುವಂತೆ ಮಾಡುತ್ತದೆ ಎಂದು ಹೇಳಿದೆ.

ಮಹಿಳೆಯ ಮೇಕ್ ಅಪ್ ಬಗ್ಗೆ ಮತ್ತೊಬ್ಬ ಮಹಿಳೆ ಧನಾತ್ಮಕವಾಗಿ ಯೋಚಿಸುತ್ತಾಳೆ ಎಂದು ಕೂಡ ಸಂಶೋಧನೆ ತಿಳಿಸಿದೆ.

ಮೇಕ್ ಅಪ್ ಮಾಡಿಕೊಳ್ಳುವ ಮಹಿಳೆ ಹೆಚ್ಚು ಪ್ರಾಬಲ್ಯವುಳ್ಳವಳಾಗಿರುತ್ತಾಳೆ ಎಂದು ಗ್ರಹಿಸುವ ಮತ್ತೊಬ್ಬ ಮಹಿಳೆ ತನ್ನ ಸಾಮರ್ಥ್ಯ ಕಡಿಮೆಯಾಗುವ ಬೆದರಿಕೆಯಲ್ಲಿ ಹೊಟ್ಟೆಕಿಚ್ಚು ಪಡುತ್ತಾಳೆ ಎಂದು ಸಂಶೋಧಕಿ ತಿಳಿಸಿದ್ದಾರೆ.

ಮೇಕ್ ಅಪ್ ಮಾಡಿಕೊಂಡ ಮಹಿಳೆ ಪುರುಷರಿಗೆ ಹೆಚ್ಚು ಆಕರ್ಷಣೆಗೊಳಗಾಗುತ್ತಾಳೆ, ಹೆಚ್ಚು ವಿಶ್ವಾಸನೀಯವಾಗಿ ನಡೆದುಕೊಳ್ಳುತ್ತಾಳೆ ಎಂದು  ಮೇಕ್ ಅಪ್ ಮಾಡಿಕೊಳ್ಳದ ಮಹಿಳೆ ಹೆಚ್ಚು ಅಸೂಯೆ ಪಡುತ್ತಾಳೆ ಎಂಬುದು ಸಂಶೋಧನೆಯಿಂದ ತಿಳಿದು ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com