ಬೆಂಗಳೂರಿನಲ್ಲಿ ಹೆಚ್ಚಾಗುತ್ತಿರುವ ಸ್ತನ ಕ್ಯಾನ್ಸರ್ ರೋಗಿಗಳ ಸಂಖ್ಯೆ

ಜನಸಂಖ್ಯೆ ಆಧಾರಿತ ಕ್ಯಾನ್ಸರ್ ನೋಂದಾವಣೆ 2012-14ರ ಪ್ರಕಾರ, ನಗರದಲ್ಲಿ ಹೆಣ್ಣು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಜನಸಂಖ್ಯೆ ಆಧಾರಿತ ಕ್ಯಾನ್ಸರ್ ನೋಂದಾವಣೆ 2012-14ರ ಪ್ರಕಾರ, ನಗರದಲ್ಲಿ ಹೆಣ್ಣು ಮಕ್ಕಳಲ್ಲಿ ಸ್ತನ ಕ್ಯಾನ್ಸರ್ ಇತ್ತೀಚಿನ ವರ್ಷಗಳಲ್ಲಿ ಜಾಸ್ತಿಯಾಗುತ್ತಿದೆ. ನಾರಾಯಣ ಹೆಲ್ತ್ ಸಿಟಿಯ ಮಜುಂದಾರ್ ಷಾ ಕ್ಯಾನ್ಸರ್ ಕೇಂದ್ರದ ವೈದ್ಯಕೀಯ ಗ್ರಂಥಿ ಶಾಸ್ತ್ರದ ಮುಖ್ಯಸ್ಥ ಡಾ.ಸಂತೋಷ್ ಗೌಡ ಅವರ ಪ್ರಕಾರ, ನಮ್ಮ ದೇಶದಲ್ಲಿ ಸ್ತನ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. 45 ವರ್ಷ ಕಳೆದ ಮಹಿಳೆ ವರ್ಷಕ್ಕೊಂದು ಸಲ ಸ್ತನ ರೇಖನ ಪರೀಕ್ಷೆ ನಡೆಸಬೇಕು. 55 ವರ್ಷಗಳು ಕಳೆದ ನಂತರ ಎರಡು ವರ್ಷಗಳಿಗೊಮ್ಮೆ ಮಾಡಿಸಿಕೊಳ್ಳಬೇಕು. ಪ್ರತಿನಿತ್ಯ ವ್ಯಾಯಾಮ, ಸಸ್ಯಾಹಾರ ಸೇವನೆ, ಹಣ್ಣು, ತರಕಾರಿ ಹೆಚ್ಚೆಚ್ಚು ಸೇವಿಸುವುದು, ಆರೋಗ್ಯಕರ ಜೀವನಶೈಲಿ ರೂಢಿಸಿಕೊಂಡರೆ ಉತ್ತಮ. ನಗರದ ಜೀವನಶೈಲಿಯಂತೆ ಅತಿಯಾದ ಆಲ್ಕೋಹಾಲ್ ಸೇವನೆ ಮಾಡದಿರುವುದು, ಹಾರ್ಮೋನ್ ಪೂರಕಗಳನ್ನು ಜಾಗರೂಕತೆಯಿಂದ ತೆಗೆದುಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು ಎನ್ನುತ್ತಾರೆ.
ಸ್ತನ ಕ್ಯಾನ್ಸರ್ ಗೆ ತುತ್ತಾಗುವ ಶೇಕಡಾ 90ರಷ್ಟು ಮಹಿಳೆಯರಿಗೆ ವಂಶಪಾರಂಪರ್ಯವಾಗಿ ಬಂದಿರುವುದಿಲ್ಲ.ಪಾರಂಪರ್ಯ ರೋಗ ಎಂದು ಕಂಡುಬಂದಿಲ್ಲ. ಒಬ್ಬ ಮಹಿಳೆ ಸ್ತನ ಕ್ಯಾನ್ಸರ್ ನ ತೀವ್ರ ಅಪಾಯದ ಮಟ್ಟದಲ್ಲಿದ್ದರೆ ಅದನ್ನು ಕಡಿಮೆ ಮಾಡಲು ವೈದ್ಯಕೀಯ ಚಿಕಿತ್ಸೆಗಳಿವೆ ಎನ್ನುತ್ತಾರೆ ಸಂತೋಷ್ ಗೌಡ. ಸಿಟ್ ಕೇರ್ ಹಾಸ್ಪಿಟಲ್ ನ ಸ್ತನ ಕ್ಯಾನ್ಸರ್ ಸರ್ಜನ್ ಡಾ.ಆಂಟೊನಿ ಪೈ ಅವರು ಹೇಳುವ ಪ್ರಕಾರ, ಪಾರಿಸರಿಕ ಕಾರಣಗಳು, ಹಾರ್ಮೋನ್ಸ್, ಸ್ಥೂಲಕಾಯ ಮೊದಲಾದವುಗಳು ಸ್ತನ ಕ್ಯಾನ್ಸರ್ ಗೆ ಪ್ರಮುಖ ಕಾರಣಗಳಾಗಿರುತ್ತವೆ. ಕಡಿಮೆ ನಿರೋಧಕ ವ್ಯವಸ್ಥೆಯಿಂದಾಗಿ ಭಾರತೀಯರು ಹೆಚ್ಚು ವೈರಲ್ ಸೋಂಕಿಗೆ ತುತ್ತಾಗುತ್ತಾರೆ ಎಂದು ಹೇಳುತ್ತಾರೆ.
ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯ ಸೋಂಕುಶಾಸ್ತ್ರಜ್ಞ ಮತ್ತು ಜೈವಿಕ ಸಂಖ್ಯಾಶಾಸ್ತ್ರಜ್ಞ ಡಾ.ಸಿ.ರಮೇಶ್, 20 ವರ್ಷ ಕಳೆದ ನಂತರ ಮಹಿಳೆಯರು ಸ್ವಯಂ ಪರೀಕ್ಷೆ ನಡೆಸಬೇಕು. 30ರಿಂದ 40 ವರ್ಷ ವಯಸ್ಸಿನ ಮಹಿಳೆಯರು ವೈದ್ಯಕೀಯ ಪರೀಕ್ಷೆ ಮತ್ತು 40 ವರ್ಷಕ್ಕಿಂತ ಮೀರಿದ ಮಹಿಳೆಯರು ಮಮೊಗ್ರಮ್ ಮಾಡಿಸಿಕೊಳ್ಳಬೇಕು ಎನ್ನುತ್ತಾರೆ.
ವಾಕಥಾನ್: ಅಕ್ಟೋಬರ್ ತಿಂಗಳನ್ನು ಸ್ತನ ಕ್ಯಾನ್ಸರ್ ಜಾಗೃತಿ ತಿಂಗಳನ್ನಾಗಿ ಕಿದ್ವಾಯಿ ಆಸ್ಪತ್ರೆ ಆಚರಿಸುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com