ತ್ವಚೆಯ ಬಣ್ಣಕ್ಕೂ ಆತ್ಮವಿಶ್ವಾಸಕ್ಕೂ ಸಂಬಂಧ ಇಲ್ಲ

ಎಲ್ಲರಿಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು. ಈ ಸಂದರ್ಭದಲ್ಲಿ ನಾನು ಹೇಳಬಯಸುವುದೇನೆಂದರೆ...
ನಿವೇದಿತಾ
ನಿವೇದಿತಾ

ಎಲ್ಲರಿಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು. ಈ ಸಂದರ್ಭದಲ್ಲಿ ನಾನು ಹೇಳಬಯಸುವುದೇನೆಂದರೆ ಮಹಿಳೆಯರಲ್ಲಿ ಆತ್ಮ ವಿಶ್ವಾಸ ಹೆಚ್ಚಾಗಬೇಕು. ಆತ್ಮ ವಿಶ್ವಾಸದ ಬಲವಿದ್ದರೆ ಆಕೆ ಸಾಧನೆಯ ಮೆಟ್ಟಿಲುಗಳನ್ನೇರಬಹುದು. ನೀವೇ ನೋಡಿದ್ದೀರಿ, ಟೀವಿಯಲ್ಲಿ ತೋರಿಸುವ ಜಾಹೀರಾತಿನಲ್ಲಿ ಹುಡುಗಿ ಬೆಳ್ಳಗಿದ್ದರೆ ಮಾತ್ರ ಆಕೆಗೆ ಆತ್ಮವಿಶ್ವಾಸ ಬರುತ್ತೆ ಎಂದು ಬಿಂಬಿಸಲಾಗುತ್ತಿದೆ. ಆದರೆ ನಾನು ಹೇಳುವುದೇನೆಂದರೆ ತ್ವಚೆಯ ಬಣ್ಣಕ್ಕೂ ಆತ್ಮ ವಿಶ್ವಾಸಕ್ಕೂ ಯಾವುದೇ ಸಂಬಂಧ ಇಲ್ಲ. ಮನುಷ್ಯನ ತ್ವಚೆಯ ಬಣ್ಣ ಅವನು ವಾಸಿಸುವ ಪರಿಸರಕ್ಕೆ ಹೊಂದಿಕೊಂಡು ಇರುತ್ತದೆ. ಅದರಲ್ಲಿ ತಾರತಮ್ಯ ಸಲ್ಲ. ಶ್ಯಾಮ ವರ್ಣದವರು ಆಕರ್ಷಣೀಯವಾಗಿ ಕಾಣುವುದಿಲ್ಲ ಎಂಬ ಮಾತನ್ನು ನಾನು ಒಪ್ಪುವುದಿಲ್ಲ. ಆಕರ್ಷಣೀಯವಾಗಿ ಕಾಣುವುದು ತ್ವಚೆಯ ಬಣ್ಣವನ್ನು ಅವಲಂಬಿಸಿರುವುದಿಲ್ಲ. ಜನರು ಜಾಹೀರಾತಿನ ಮೋಡಿಗೊಳಗಾಗಿ ಏನೇನೋ ಹಚ್ಚಿ ಗೌರವರ್ಣ ಪಡೆಯಲು ಯತ್ನಿಸುತ್ತಾರೆ. ಇದ್ಯಾವುದೂ ನಮ್ಮ ದೇಹಕ್ಕೆ ಒಳ್ಳೆಯದಲ್ಲ.
ನಂದಿತಾ ದಾಸ್ 'ಡಾರ್ಕ್ ಈಸ್ ಬ್ಯೂಟಿಫುಲ್ 'ಎಂಬ ಅಭಿಯಾನವನ್ನು ಆರಂಭಿಸಿದ್ದು ಗೊತ್ತೇ ಇದೆ. ತ್ವಚೆಯ ಬಣ್ಣದ ಬಗ್ಗೆ ಕೀಳರಿಮೆ ಹೊಂದುವುದಾಗಲೀ ತಾರತಮ್ಯ ಮಾಡುವುದಾಗಲೀ ಸರಿಯಲ್ಲ. ಆತ್ಮ ವಿಶ್ವಾಸವನ್ನು ನಾವು ನಮ್ಮಲ್ಲಿಯೇ ಬೆಳೆಸಿಕೊಂಡು ಬರಬೇಕು. ತ್ವಚೆಯ ಬಣ್ಣದ ಮೇಲೆ ಆತ್ಮ ವಿಶ್ವಾಸ ಅಥವಾ ಯಶಸ್ಸು ಅವಲಂಬಿತವಾಗಿಲ್ಲ.


-ನಿವೇದಿತಾ
ರಾಜ್ಯ ಪ್ರಶಸ್ತಿ ವಿಜೇತ ನಟಿ


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com