ಆರೋಗ್ಯ ಕಾಳಜಿ
ಆರೋಗ್ಯ ಕಾಳಜಿ

ಒತ್ತಡದ ಬದುಕಿಗೆ ಹೆಲ್ತ್ ಟಿಪ್ಸ್

ಹೆಣ್ಣು ಸಂಸಾರದ ಕಣ್ಣು. ಇಡೀ ಜಗತ್ತನ್ನೇ ತೂಗುವ ಗೆಲ್ಲುವ ಶಕ್ತಿ ಅವಳಲ್ಲಿದೆ. ತನ್ನ ಆಸಕ್ತಿ, ಅಭಿರುಚಿ, ಜವಾಬ್ದಾರಿಗಳನ್ನು ಸಂಸಾರದಲ್ಲಷ್ಟೆ...

ಹೆಣ್ಣು ಸಂಸಾರದ ಕಣ್ಣು. ಇಡೀ ಜಗತ್ತನ್ನೇ ತೂಗುವ ಗೆಲ್ಲುವ ಶಕ್ತಿ ಅವಳಲ್ಲಿದೆ. ತನ್ನ ಆಸಕ್ತಿ, ಅಭಿರುಚಿ, ಜವಾಬ್ದಾರಿಗಳನ್ನು ಸಂಸಾರದಲ್ಲಷ್ಟೆ ಅಲ್ಲದೆ ಸಮಾಜದಲ್ಲೂ  ತೋರುವುದು/ವಹಿಸುವುದು ಅವಳ ವೈಶಿಷ್ಟ್ಯ. ಸದಾ ಒಂದಿಲ್ಲೊಂದು ಕೆಲಸದಲ್ಲಿ ತೊಡಗಿಸಿಕೊಳ್ಳುವ ಅವಳು ಸಂಸಾರ ಹಾಗು ಸಮಾಜದ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ತನ್ನ ಆರೋಗ್ಯ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವುದನ್ನು ಮರೆಯುತ್ತಾಳೆ. ಈಗಿನ ಜಂಜಾಟದ, ಒತ್ತಡದ ಜೀವನದಲ್ಲಿ ಸದಾಕಾಲ ಎನರ್ಜಿ  ಉಳಿಸಿಕೊಳ್ಳುವುದು ಅತ್ಯಗತ್ಯ.
ಇಲ್ಲಿವೆ ಕೆಲವು ಸುಲಭೊಪಾಯಗಳು

  • ಸಮತೋಲನ ಆಹಾರ ಸೇವಿಸುವುದರಿಂದ ಅಧಿಕ ಸುಸ್ತು ಆಯಾಸವನ್ನು ತಡೆಗಟ್ಟಬಹುದು. ಸಮತೋಲನ ಆಹಾರ ಕಾರ್ಬೋ ಹೈಡ್ರೇಟ್, ಪ್ರೊಟೀನ್, ಫ್ಯಾಟ್, ವಿಟಮಿನ್ಸ್, ಖನಿಜಗಳು, ನೀರು ಈ ಎಲ್ಲ ಪೋಷಕಾಂಶಗಳನ್ನು ಹೊಂದಿರಬೇಕು.
  • ಪ್ರತಿನಿತ್ಯದ ಆಹಾರದಲ್ಲಿ ಹಸಿ ತರಕಾರಿ, ಹಣ್ಣು-ಹಂಪಲು ಸೊಪ್ಪುಗಳನ್ನು ಹೇರಳವಾಗಿ ಬಳಸಬೇಕು. ಇವುಗಳಿಂದ ಕಬ್ಬಿಣ, ಕ್ಯಾಲ್ಸಿಯಂ, ನಾರು, ಖನಿಜಾಂಶ ಮತ್ತು ಜೀವಸತ್ವಗಳು ದೊರೆಯುತ್ತವೆ.
  • ದಿನಕ್ಕೆ 2-3 ಲೀಟರಿನಷ್ಟು ನೀರು ಕುಡಿಯಬೇಕು. ಮಿತವಾದ ಕಾಫಿ/ಟೀ ಸೇವನೆಯು ಸಹ ಮಾನಸಿಕ ಸ್ವಾಸ್ಥ್ಯಕ್ಕೆ ಉಪಯುಕ್ತವಾಗಬಹುದು.
  • ಖಾಲಿ ಹೊಟ್ಟೆಗೆ ಸೇವಿಸಿದ ಲೋಳೆರಸದ ಜ್ಯೂಸ್ ಇಡೀ ದಿನ ನಿಮ್ಮನ್ನು ಹೈ ಎನರ್ಜೆಟಿಕ್ ಆಗಿರುವಂತೆ ಮಾಡಬಲ್ಲದು. ಅಂತೆಯೆ ಡ್ರೈ ಫ್ರೂಟ್ಸ್ ಕೂಡ.
  • ಉತ್ತಮ ಆಹಾರ ಕ್ರಮದ ಜೊತೆ ವ್ಯಾಯಾಮವು ಅತ್ಯಗತ್ಯ. ನಿಯಮಿತ ವ್ಯಾಯಾಮ, ಯಾವುದೇ ರೀತಿಯ ದೈಹಿಕ ಚಟುವಟಿಕೆಯೂ ದೇಹ ಮತ್ತು ಮನಸ್ಸನ್ನು ಆರೋಗ್ಯವಾಗಿಡಲು ಸಹಕಾರಿ. ನಡಿಗೆ, ಈಜು, ಕ್ರೀಡೆಗಳು, ತೋಟಗಾರಿಕೆ, ಸೈಕ್ಲಿಂಗ್ ಇತ್ಯಾದಿ ಚಟುವಟಿಕೆಗಳು ವ್ಯಾಯಾಮ ನೀಡಬಲ್ಲವು.
  • ಇವೆಲ್ಲದರೊಂದಿಗೆ ಸ್ಥಿತಪ್ರಜ್ಞ  ಮನಸ್ಸು ಆರೋಗ್ಯ ಭಾಗ್ಯಕ್ಕೆ ಸೋಪಾನವಾಗಬಲ್ಲುದು.
ಚೈತ್ರಾ ರಾವ್, ಡಯಟೀಷನ್

Related Stories

No stories found.

Advertisement

X
Kannada Prabha
www.kannadaprabha.com