ವಿಷಕಾರಿ ಸೌಂದರ್ಯವರ್ಧಕಗಳು?

ಪ್ರಕೃತಿಯ ಕೊಡುಗೆಯಾದ ಸಹಜ ಸೌಂದರ್ಯವನ್ನು ಕಾಪಾಡಿಕೊಳ್ಳುವುದೂ ಒಂದು ಕಲೆ. ಆ ಚೆಲುವನ್ನು ಬಹಳ ವರ್ಷಗಳವರೆಗೆ ಮಾಸದಂತೆ ಕಾಪಾಡಿಕೊಳ್ಳದಿದ್ದರಿಂದ ಆಗುವ ನಷ್ಟ ಅಪಾರ...
ಸೌಂದರ್ಯವರ್ಧಕಗಳ ನಿಜವಾದ ಎಕ್ಸ್ ಪೈರಿ ಡೇಟ್ ನಿಮಗೆ ಗೊತ್ತಾ...?
ಸೌಂದರ್ಯವರ್ಧಕಗಳ ನಿಜವಾದ ಎಕ್ಸ್ ಪೈರಿ ಡೇಟ್ ನಿಮಗೆ ಗೊತ್ತಾ...?

ಪ್ರಕೃತಿಯ ಕೊಡುಗೆಯಾದ ಸಹಜ ಸೌಂದರ್ಯವನ್ನು ಕಾಪಾಡಿಕೊಳ್ಳುವುದೂ ಒಂದುಕಲೆ. ಆ ಚೆಲುವನ್ನು ಬಹಳ ವರ್ಷಗಳವರೆಗೆ ಮಾಸದಂತೆ ಕಾಪಾಡಿಕೊಳ್ಳದಿದ್ದರಿಂದ ಆಗುವ ನಷ್ಟ ಅಪಾರ.ಪ್ರತಿಯೊಬ್ಬರಲ್ಲಿ ಒಂದೊಂದು ವಿಶಿಷ್ಟ ಸೌಂದರ್ಯವಿರುತ್ತದೆ. ಕೆಲವರ ನಗುವೇ ಚೆನ್ನ. ಕೆಲವರಮುನಿಸೂ ಸೊಬಗೇ ಸೊಬಗು. ಹಲವರ ಮೈಮಾಟ ಚೆನ್ನ. ಸೊಂಪಾದ ತಲೆಕೂದಲು, ಅರಳು ಕಣ್ಣು, ಮಿಂಚುವದಂತಪಂಕ್ತಿಗಳು ಅವರ ಸೌಂದರ್ಯವಂತಿಕೆಗಳು ಹೆಚ್ಚಾಗಿರುವಂತೆ ಮಾಡುತ್ತದೆ.

ಪ್ರಾಕೃತಿಕದತ್ತವಾಗಿ ದೇವರು ಕೊಟ್ಟ ಸೌಂದರ್ಯವನ್ನು ಕೆಲವರುದುಡ್ಡುಕೊಟ್ಟು ಹಾಳು ಮಾಡಿಕೊಳ್ಳುತ್ತಿದ್ದಾರೆ ಎನ್ನುವುದೇ ವಿಪರ್ಯಾಸದ ಸಂಗತಿ. ಸೌಂದರ್ಯವನ್ನುಮತ್ತಷ್ಟು ಹೆಚ್ಚಿಸಿಕೊಳ್ಳುವ ಭರದಲ್ಲಿ ಮಹಿಳೆಯರು ತಮ್ಮ ಸೌಂದರ್ಯವನ್ನು ಶಾಶ್ವತವಾಗಿ ಕಳೆದುಕೊಳ್ಳುವತ್ತ ಕಾಲಿಡುತ್ತಿದ್ದಾರೆ. ಪ್ರತಿ ನಿತ್ಯ ನಾವು ಬಳಸುತ್ತಿರುವ ಸೌಂದರ್ಯವರ್ಧಕಗಳಲ್ಲಿಯಾವ ಯಾವ ರೀತಿಯ ರಾಸಾಯನಿಕ ವಸ್ತುಗಳನ್ನು ಬಳಸುತ್ತಿದ್ದಾರೆ ಎಂಬುದರ ಬಗ್ಗೆ ಎಷ್ಟೋ ಮಂದಿ ಯೋಚನೆಮಾಡಿರುವುದಿಲ್ಲ. ಸಮಯಕ್ಕೆ ಸಿಕ್ಕ ಕ್ರೀಮ್,ಸೋಪು, ಶಾಂಪುಇನ್ನಿತರೆ ವಸ್ತುಗಳನ್ನು ಅಂಗಡಿಗಳಿಂದ ಕೊಂಡು ಬಳಕೆ ಮಾಡಿಬಿಡುತ್ತಾರೆ.

ಇನ್ನು ಬಳಕೆಯ ವಸ್ತುವಿನ ಮೇಲೆ ಸಾಮಾನ್ಯವಾಗಿ ಕನಿಷ್ಟ ಎಂದರು 6 ರಿಂದ 1 ವರ್ಷ ಎಂದು ಎಕ್ಸ್ ಪೈರಿ ಡೇಟ್ ಕೊಟ್ಟಿರುತ್ತಾರೆ. ಆದರೆ ಆ ವಸ್ತುವಿನ ಅವಧಿ ಅದಕ್ಕಿಂತಲೂ ಕಡಿಮೆ ಇರುತ್ತದೆ. ಎಕ್ಸ್ ಪೈರಿ ಆದ ವಸ್ತುವನ್ನು ಬಳಕೆ ಮಾಡಿದ ಕೆಲವು ದಿನಗಳ ನಂತರ ಸಮಸ್ಯೆಗಳು ಪ್ರಾರಂಭವಾಗುತ್ತದೆ. ನೀವು ದಿನನಿತ್ಯ ಬಳಸುವ ವಸ್ತುಗಳ ಸಾಮಾನ್ಯ ಅವಧಿಗಳು ಈ ಕೆಳಕಂಡಿಂತಿವೆ.

ಮೇಕಪ್ ಗೆ ಬಳಸುವ ವಸ್ತುಗಳ ಸಮಯಾವಧಿಗಳೆಷ್ಟು...?

ಮಸ್ಕರಾ: ಮಸ್ಕರಾ ಹಾಕುವುದು ಕಣ್ಣುಗಳಿಗೆ ಭಾರೀ ಹಾನಿಕಾರಕ. ಮಸ್ಕರಾ ತೆಗೆದುಕೊಂಡಾಗ ಅದರಲ್ಲಿ 3 ತಿಂಗಳವರೆಗೂ ಅವಧಿ ಇರುತ್ತದೆ ಎಂದು ತಿಳಿಸಿರುತ್ತಾರೆ. ಆದರೆ ಮಸ್ಕರಾವಿನ ಅವಧಿ ಇರುವುದು ಕೇವಲ 6 ರಿಂದ 8 ವಾರ ಅಷ್ಟೇ ಅಂದರೆ 56 ದಿನಗಳು. ಇನ್ನೂ ಸಮಯವಿದೆ ಎಂದು ಉಪಯೋಗಿಸಿದರೆ ಕಣ್ಣುಗಳು ಹಾಳಾಗುವುದರಲ್ಲಿ ಸಂಶಯವಿಲ್ಲ.

ಫೇಸ್ ಮಾಸ್ಕ್: ಫೇಸ್ ಮಾಸ್ಕ್ ಅವಧಿ ಒಂದರಿಂದ ಎರಡು ವರ್ಷಗಳು ಮಾತ್ರ. ಫೇಸ್ ಮಾಸ್ಕ್ ಗಳ ಅವಧಿ ಮುಗಿಯುತ್ತಿದ್ದಂತೆ ತನ್ನ ಬಣ್ಣವನ್ನು ಬದಲಿಸುತ್ತದೆ. ಅಲ್ಲದೆ ಒಣಗಿ ಹೋದಂತೆ ಕಾಣುತ್ತದೆ. ಇದರಿಂದ ಅದರ ಅವಧಿಯನ್ನು ತಿಳಿದು ಕೊಳ್ಳಬಹುದು.

ಪರ್ಫ್ಯೂಮ್: ಪರ್ಪ್ಯೂಮ್ ಹಾಳಾಗಿದೆ ಅವಧಿ ಮುಗಿದಿದೆ ಎನ್ನುವುದನ್ನು ಅದರ ವಾಸನೆಯಿಂದಲೇ ತಿಳಿದುಕೊಳ್ಳಬಹುದು. ವಾಸನೆ ಬದಲಾಗಿ ಕೆಟ್ಟ ವಾಸನೆ ಬಂದರೆ ಇದನ್ನು ಬಳಸಬೇಡಿ.

ಕನ್ಸೀಲರ್: ಕನ್ಸೀಲರ್ ಅವಧಿ 1 ವರ್ಷ ಮಾತ್ರ. ಇದೂ ಸಹ ಅವಧಿ ಮುಗಿಯುತ್ತಿದ್ದಂತೆ ಒಣಗಲು ಪ್ರಾರಂಭಿಸುತ್ತದೆ. ಅವಧಿ ಮುಗಿದ ಕನ್ಸೀಲರ್ ಗಳ ಬಳಕೆ ಚರ್ಮದ ಆರೋಗ್ಯಕ್ಕೆ ಮಾರಕ.

ಫೇಶಿಯಲ್ ವೈಪ್ಸ್ ಅಥವಾ ವೈದ್ಯಕೀಯ ಪ್ಯಾಡ್ ಗಳು: ಸಾಮಾನ್ಯವಾಗಿ ಇದರ ಅವಧಿ 2 ತಿಂಗಳು ಮಾತ್ರ ಇರುತ್ತದೆ. ಅವಧಿ ಮುಗಿಯುತ್ತಿದ್ದಂತೆ ಇದೂ ಕೂಡ ಒಣಗಲು ಪ್ರಾರಂಭಿಸುತ್ತದೆ.

ಬ್ಲಷ್: ಇದರ ಅವಧಿ 2 ಅಥವಾ 3 ಮೂರು ವರ್ಷ ಇರುತ್ತದೆ.

ಲೈನರ್: ಲಿಕ್ವಿಡ್ ಲೈನರ್ 6 ತಿಂಗಳು ಇದ್ದರೆ ಪೆನ್ಸಿಲ್ ಲೈನರ್ ಗೆ 2 ವರ್ಷಗಳ ಕಾಲ ಅವಧಿ ಇರುತ್ತದೆ. ಪೆನ್ಸಿಲ್ ಐ ಲೈನರ್ ಗಿಂತ ಲಿಕ್ವಿಡ್ ಲೈನರ್ ನಲ್ಲಿ ಹೆಚ್ಚು ಬ್ಯಾಕ್ಟೀರಿಯಾಗಳು ಇರುತ್ತದೆ.

ಸನ್ ಸ್ಕ್ರೀನ್: ಇದರ ಅವಧಿ ಸಾಮಾನ್ಯವಾಗಿ 3 ವರ್ಷಗಳಿದ್ದು, ಅವಧಿ ಮುಗಿದ ನಂತರ ಬಳಸಿದರೂ ಇದು ಬೇರೆ ರಾಸಾಯನಿಕ ವಸ್ತುಗಳಷ್ಟು ಹಾನಿಕಾರಕವಲ್ಲ. ಆದರೆ ಇದರ ಬಣ್ಣ ಬದಲಾಗಿದ್ದರೆ ಬಳಸುವುದು ಮಾರಕ.

ಲಿಪ್ ಸ್ಟಿಕ್, ಲಿಪ್ ಗ್ಲಾಸ್: ಲಿಪ್ ಸ್ಟಿಕ್ ಅವಧಿ 2 ವರ್ಷ ಇದ್ದರೆ, ಲಿಪ್ ಗ್ಲಾಸ್ ಅವಧಿ 12 ತಿಂಗಳು ಇರುತ್ತದೆ. ಅವಧಿ ನಂತರ ಇದರ  ಬಣ್ಣದಲ್ಲಿ ಬದಲಾವಣೆ ಅಥವಾ ವಾಸನೆಯಲ್ಲಿ ಬದಲಾವಣೆಗಳು ಕಂಡು ಬಂದರೆ ಪುನಃ ಬಳಕೆ ಮಾಡುವುದು ಬಹಳ ಹಾನಿಕಾರಕ.

ಪೌಡರ್ ಶಾಡೋ: ಸಾಮಾನ್ಯವಾಗಿ ಈಪೌಡರ್ ಶಾಡೋವಿನ ಅವಧಿ 2 ವರ್ಷ ಇರುತ್ತದೆ. ಬಳಸುವಾಗ ಬಣ್ಣ ನೀಡದೆ ಕಾಂತಿಯುತವಾಗಿ ಕಾಣದೆ ಇರುವಂತೆ ಕಾಣಿಸಿಕೊಂಡರೆ ಇದರ ಅವಧಿ ಮುಗಿದಿದೆ ಎಂದು ಕಂಡು ಹಿಡಿಯಬಹುದು.

ಕ್ರೀಮ್ ಅಥವಾ ಫೌಂಡೇಶನ್: ಫೌಂಡೇಶನ್ ಸಾಮಾನ್ಯವಾಗಿ 12 ರಿಂದ 18 ತಿಂಗಳವರೆಗೂ ಅವಧಿ ಇರುತ್ತದೆ. ಪೌಡರ್ ಅವಧಿ 2 ವರ್ಷಗಳ ಕಾಲ ಇರುತ್ತದೆ. ಅವಧಿ ಮುಗಿಯುತ್ತಿದ್ದಂತೆ ಇದೂ ಸಹ ತನ್ನ ಬಣ್ಣ ಬದಲಿಸಲು ಪ್ರಾರಂಭಿಸುತ್ತದೆ. ಮತ್ತು ಮುಖಕ್ಕೆ ಹಾಕಿದಾಗ ಬೂದಿ ಹಚ್ಚಿದಂತಹ ಅನುಭವವಾಗುತ್ತದೆ.

ಪ್ರೈಮರ್: ಇದರ
ಅವಧಿ
ವರ್ಷ
ಇರುತ್ತದೆ
ಅವಧಿ
ಮುಗಿಯುತ್ತಿದ್ದಂತೆ
ಕ್ರೀಮ್
ಬಾಟಲಿಯಿಂದಲೇ
ಬೇರ್ಪಡುತ್ತದೆ
ನಂತರ
ಇದನ್ನು
ಬಳಸಬಾರದು

ಬ್ರಶ್: ಮುಖಕ್ಕೆ ಬಳಸುವ ಬ್ರಶ್ ಗಳು ನಾವು ಶುದ್ಧವಾಗಿಟ್ಟುಕೊಳ್ಳುವುದರ ಮೇಲೆ ಇದರ ಅವಧಿ ಅವಲಂಬಿತವಾಗಿರುತ್ತದೆ. ಬಹಳ ದಿನದಿಂದ ಕ್ಲೀನ್ ಮಾಡದೆ ಹಾಗೆ ಇಟ್ಟಿದ್ದರೆ ಅದರ ಅವಧಿ ತಾನಾಗಿಯೇ ಮುಗಿದುಹೋಗಿರುತ್ತದೆ. ನಂತರ ಇದನ್ನು ಉಪಯೋಗಿಸುವುದರಿಂದ ಚರ್ಮದ ಅಲರ್ಜಿಗಳಾಗುತ್ತವೆ. ಆದ್ದರಿಂದ ಪ್ರತೀ ಎರಡು ವಾರಕ್ಕೊಮ್ಮೆ ಶಾಂಪೂ, ಮನೆಯಲ್ಲಿ ಉಪಯೋಗಿಸುವ ಬಾರ್ ಸೋಪುಗಳು ಅಥವಾ ಆಲಿವ್ ಆಯಿಲ್ ನಲ್ಲಿ ಮಸಾಜ್ ಮಾಡಿ ಶುದ್ಧಗೊಳಿಸಬೇಕು.

ದಿನನಿತ್ಯ ಬಳಸುವ ಮೇಕಪ್ ವಸ್ತುಗಳಲ್ಲಿ ಸಾಮಾನ್ಯವಾಗಿ ಅತ್ಯಂತ ಅಪಾಯಕಾರಿರಾಸಾಯನಿಕ ವಸ್ತುಗಳನ್ನು ಬಳಸಲಾಗುತ್ತಿದ್ದು, ಅವುಗಳಲ್ಲಿ ಕೆಲವು ರಾಸಾಯನಿಕ ವಸ್ತುಗಳ ಹೆಸರು ಹಾಗೂ ಆವಸ್ತುವಿನ ಲಕ್ಷಣಗಳು ಈ ಕೆಳಕಂಡಿಂತಿವೆ.

ಸಿಂಥೆಟಿಕ್ ಮಸ್ಕ್ಸ್
ಇದು ಸುಗಂಧ ದ್ರವ್ಯಗಳಲ್ಲಿ ಬಳಸಲ್ಪಡುತ್ತದೆ. ಇವು ಹಾರ್ಮೋನ್ಗಳ ಮೇಲೆ ದುಷ್ಪರಿಣಾಮ ಬೀರಿ, ಚರ್ಮದ ಸಂವೇದನಾಶೀಲತೆಗೆ ಧಕ್ಕೆ ತರಬಲ್ಲದು.

ಫಾರ್ಮಾಲ್ಡಿಹೈಡ್
ರಾಸಾಯನಿಕವನ್ನು ಸಾಮಾನ್ಯವಾಗಿ ಬ್ಯಾಕ್ಟೀರಿಯಾ ಬೆಳೆಯದಂತೆ ತಡೆಯಲು ಬಳಸಲಾಗುತ್ತದೆ. ಅಪಾಯಕಾರಿ ಅಂಶವೆಂದರೆ ಇಂತಹರಾಸಾಯನಿಕವನ್ನು ಕಾಸ್ಮೆಟಿಕ್ ಗಳಲ್ಲೂ ಬಳಕೆ ಮಾಡಲಾಗುತ್ತಿದ್ದು, ಕ್ಯಾನ್ಸರ್ ಕಾರಕವಾಗುವ ಸಾಧ್ಯತೆಗಳುಂಟು. ಈ ರಾಸಾಯನಿಕ ಚರ್ಮ ರೋಗಗಳಿಗೆ ಎಡೆ ಮಾಡಿಕೊಡುತ್ತದೆ.

ಡೈಯೋಕ್ಸೇನ್
ಶೃಂಗಾರ ಸಾಧನಗಳು, ಮಾರ್ಜಕಗಳಲ್ಲಿ ಬಳಕೆಯಾಗುತ್ತದೆ. ವಾತಾವರಣದಲ್ಲಿ ಬಹುಬೇಗ ಲೀನವಾಗುವ ಶಕ್ತಿ ಇದ್ದು, ಅಂತರ್ಜಲ ಪ್ರವೇಶಿಸುತ್ತದೆ. ಇದು ದೇಹ ಸೇರಿದರೆ ಮೂಗು, ಗಂಟಲಿನಲ್ಲಿ ಉರಿ ಕಾಣಿಸಿಕೊಳ್ಳುತ್ತದೆ. ನಂತರ ಮೂತ್ರಕೋಶ, ಯಕೃತ್ಗೆ ಹಾನಿ ಮಾಡುತ್ತದೆ. ಕ್ಯಾನ್ಸರ್ಕಾರಕವೂ ಆಗಿದೆ. ಪ್ರಾಣಿಗಳಲ್ಲೂ ಇದೇ ತೆರನಾದ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಹೈಡ್ರೋಕ್ವಿನೋನ್
ಚರ್ಮದ ಬ್ಲೀಚಿಂಗ್ ಉತ್ಪನ್ನಗಳಲ್ಲಿ ಕಂಡುಬರುತ್ತದೆ.ಇದರ ಬಳಕೆ ಚರ್ಮದ ಕ್ಯಾನ್ಸರ್ಗೆ ಕಾರಣವಾಗಬಹುದು. ಚರ್ಮದ ಗ್ರಂಥಿಗಳನ್ನು ನಾಶ ಮಾಡುತ್ತದೆ. ದೀರ್ಘಕಾಲದ ಬಳಕೆಯಿಂದ ಚರ್ಮವು ತನ್ನ ನೈಜತೆ ಕಳೆದುಕೊಳ್ಳುವ ಅಪಾಯವುಂಟು.

ಸೀಸ ಮತ್ತು ಇತರೆ ಲೋಹ ಪದಾರ್ಥಗಳು
ಲಿಪ್ಸ್ಟಿಕ್ ಮತ್ತು ಟೂತ್ಪೇಸ್ಟ್ಗಳು ಸೀಸ, ಪಾದರಸ, ಆರ್ಸೆನಿಕ್, ಅಲ್ಯೂಮಿನಿಯಂ, ಜಿಂಕ್ ಮತ್ತು ಕ್ರೋಮಿಯಮ್ನಂಥ ಪದಾರ್ಥಗಳನ್ನು ಒಳಗೊಂಡಿರುತ್ತವೆ. ಇವು ದೇಹದ ಮೇಲೆ ಅಡ್ಡ ಪರಿಣಾಮ ಉಂಟು ಮಾಡಬಲ್ಲವು. ಸಾಧ್ಯವಾದಷ್ಟು ಇಂತಹ ರಾಸಾಯನಿಕಗಳಿಲ್ಲದಂತಹ ವಸ್ತುಗಳನ್ನು ಕೊಂಡರೆ ಉತ್ತಮ.

ಆದರೆ ಮೇಕಪ್ ಮಾಡುವ ಮುನ್ನ ಹೆಣ್ಣು ಮಕ್ಕಳು ಅಲೋಚಿಸಬೇಕು. ಸಾಧ್ಯವಾದಷ್ಟು ರಾಸಾಯನಿಕ ವಸ್ತುಗಳನ್ನು ಬಳಸಿಲ್ಲದ ವಸ್ತುಗಳನ್ನು ಬಳಸಿದರೆ ತ್ವಚೆಯೊಂದಿಗೆ ಆರೋಗ್ಯವೂ ಉತ್ತಮವಾಗಿರುತ್ತದೆ.

ದಿನ ನಿತ್ಯ ನಾವು ಬಳಸುವ ಮೇಕಪ್ ವಸ್ತುಗಳ ಬಳಕೆಯಿಂದ ಉಂಟಾಗುವ ಸಾಮಾನ್ಯ ಸಮಸ್ಯೆಗಳು

ಬ್ಯೂಟಿ ಸೋಪ್:ತ್ವಚೆಯನ್ನು ತುಂಬಾ ಮೃದುವಾಗಿ ಮಾಡುತ್ತದೆ ಎಂಬ ಜಾಹೀರಾತುಗಳನ್ನು ನೋಡಿ ಅಂತಹ ಸೋಪುಗಳನ್ನು ಕೊಳ್ಳುತ್ತಾರೆ. ಆದರೆ ಅದರಲ್ಲಿ ಇರುವ PH  (ಪೊಟೆನ್ಷಿಯಲ್ ಆಪ್ ಹೈಡ್ರೋಜನ್)ಪ್ರಮಾಣ ಗಮನಿಸುವುದನ್ನು ಮರೆತುಬಿಡುತ್ತಾರೆ.PH ಪ್ರಮಾಣ ಗಮನಿಸುವುದು ಒಳ್ಳೆಯದು. ಸೋಪಿನಲ್ಲಿ PH ಜಾಸ್ತಿಯಿದ್ದರೆ ಅದು ತ್ವಚೆಯಲ್ಲಿರುವ ಅಸಿಡಿಕ್ ಪದರವನ್ನು ಕಡಿಮೆ ಮಾಡಿ ತ್ವಚೆಯನ್ನು ಮೃದುವಾಗಿ ಮಾಡುತ್ತದೆ. ಚರ್ಮದಲ್ಲಿನ ಬದಲಾವಣೆಗಳು ಕ್ಯಾನ್ಸರ್ ಗೆ ಕಾರಣವಾಗುತ್ತದೆ.

 ಬ್ಲಷರ್:  ಕೆನ್ನೆ ಆಕರ್ಷಕವಾಗಿ ಕಾಣಲು ಹೆಚ್ಚುವ ಬ್ಲಷ್ ಹೆಣ್ಣುಮಕ್ಕಲ ಈಸ್ಟ್ರೋಜನ್ ಹಾರ್ಮೋನ್ ನಲ್ಲಿ ಏರುಪೇರು ಉಂಟು ಮಾಡುತ್ತದೆ. ಇದರಿಂದ ಸ್ತನದ ಕ್ಯಾನ್ಸರ್ ಬರುವ ಸಾಧ್ಯತೆಯೇ ಹೆಚ್ಚು.

 ಲಿಪ್ ಸ್ಟಿಕ್ : ಲಿಪ್ ಸ್ಟಿಕ್ ನಲ್ಲಿ ಪಾರಾಪಿನ್ ಎಂಬ ರಾಸಾಯನಿಕವನ್ನು ಬಳಸಲಾಗಿರುತ್ತದೆ.ಲಿಪ್ ಸ್ಟಿಕ್ ಹಾಕಿ ಆಹಾರವನ್ನು ತಿಂದಾಗ ಅಥವಾ ನೀರು ಕುಡಿದಾಗ ತುಟ್ಟಿಗೆ ಹಚ್ಚಿದ ಲಿಪ್ ಸ್ಟಿಕ್ ನಲ್ಲಿರುವ ರಾಸಾಯನಿಕ ಅಂಶಗಳು ಹೊಟ್ಟೆಗೆ ಸೇರುತ್ತದೆ. ಇದರಿಂದ ದೇಹ ಅನಾರೋಗ್ಯಕ್ಕೆ ತುತ್ತಾಗುತ್ತದೆ.

 ಮಸ್ಕರಾ:  ಮಸ್ಕರಾ ಹಾಕುವುದು ಕಣ್ಣುಗಳಿಗೆ ಭಾರೀ ಹಾನಿಕಾರಕ. ಮಸ್ಕರಾದಲ್ಲಿರುವ ರಾಸಾಯನಿಕ ವಸ್ತುಗಳ ಬ್ಯಾಕ್ಟೀರಿಯಾಗಳು ಕಣ್ಣುಗಳ ಸ್ವಾಸ್ಥ್ಯವನ್ನು ಹಾಳು ಮಾಡುತ್ತದೆ. ಅಲ್ಲದೆ, ದೃಷ್ಟಿ ಹೀನತೆಗೆ ಕಾರಣವಾಗುತ್ತದೆ.                

ಉಗುರು ಬಣ್ಣ:  ಒಂದು ಸಾರಿ ಉಗುರು ಬಣ್ಣದ ಮುಚ್ಚಳವನ್ನು ತೆಗೆದರೆ ಅದರಲ್ಲಿರುವ ಕೆಲವು ಅಂಶಗಳು ಗಾಳಿಯಲ್ಲಿ ಆವಿಯಾಗಿ ಹೋಗುತ್ತದೆ. ನಂತರ ಉಗುರು ಬಣ್ಣ ಗಟ್ಟಿಯಾಗಲು ಆರಂಭಿಸುತ್ತದೆ. ಗಟ್ಟಿಯಾಗಲು ಆರಂಭಿಸಿದ ಉಗುರುಬಣ್ಣವನ್ನು ಪುನಃ ಉಪಯೋಗಿಸುತ್ತಲೇ ಬಂದರೆ ನಿಧಾನಗತಿಯಲ್ಲಿ ಉಗುರುಗಳನ್ನು ದಪ್ಪಗಾಗುವಂತೆ ಮಾಡಿ ನಂತರ ಉಗುರುಗಳಿಂದ ಸಮಸ್ಯೆ ಉಂಟಾಗುವಂತೆ ಮಾಡುತ್ತದೆ ಎಂದು  ವಿದೇಶಿಯ ನಿಯತಕಾಲಿಕೆಯೊಂದಕ್ಕೆ ಸಂದರ್ಶನ ನೀಡಿದ್ದ ಖ್ಯಾತ ಉಗುರು ತಜ್ಞ ಅನೆಟ್ ಸುಬಲೆಸ್ಕಿ (Annette Soboleski)ಹೇಳಿದ್ದಾರೆ.

ದಿನನಿತ್ಯ ಮೇಕಪ್: ಪ್ರತೀ ನಿತ್ಯ ಮೇಕಪ್ ಮಾಡುವುದರಿಂದ ಅದರಲ್ಲಿರುವ ರಾಸಾಯನಿಕ ವಸ್ತುಗಳು ತ್ವಚೆಯಲ್ಲಿ ಉಳಿದುಕೊಳ್ಳುವುದರಿಂದ ಎಷ್ಟು ತೊಳೆದರೂ ಹೋಗುವುದಿಲ್ಲ. ಇದರಿಂದ ತ್ವಚೆಯ ಆರೋಗ್ಯ ಹಾಳಾಗುತ್ತದೆ. 

-ಮಂಜುಳ.ವಿ.ಎನ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com