
ಎಲ್ಲರ ಜೀವನದಲ್ಲಿ ಅಮ್ಮನನ್ನು ಒಂದು ಸಲ ಕಳೆದುಕೊಂಡರೆ ಮತ್ತೆ ಸಿಗಲ್ಲ. ಆದರೆ ನನ್ನ ಲೈಫಲ್ಲಿ ಅದು ಸುಳ್ಳಾಯ್ತು. ಅಮ್ಮನ ಮುಖನೇ ನೋಡದೇ ಇರೋ ನನಗೆ ಅಮ್ಮನಾಗಿ ಪ್ರೀತಿ ಕೊಟ್ಟ ದೇವತೆ ಬಗ್ಗೆ ಎಷ್ಟು ಹೇಳಿದರೂ ಪದಗಳೇ ಇಲ್ಲ. ನನ್ನ ಪಿಯುಸಿ ಫಸ್ಟ್ ಡೇ ಕಾಲೇಜ್‌ನ ಫಸ್ಟ್ ಕ್ಲಾಸಿನಲ್ಲೇ ಆ ದೇವತೆ ನನಗೆ ಸಿಕ್ಕಿದ್ದು . ಬಟ್ ವಿಚಿತ್ರ ಅಂದ್ರೆ ಅವರಿಗೆ ಆವಾಗ ಇನ್ನೂ ಮದ್ವೆ ಆಗಿರ್ಲಿಲ್ಲ. ತಾಯಿ ಪ್ರೀತಿ ಕೊಡೋಕೆ ತಾಯೀನೇ ಆಗ್ಬೇಕು ಅಂತೇನೂ ಇಲ್ಲ . ಪ್ರತೀ ಹೆಣ್ಣಲ್ಲೂ ತಾಯ್ತನ ಇರುತ್ತೆ. ಅದಕ್ಕೆ ಗ್ರೇಟ್ ಎಕ್ಸಾಂಪಲ್ ನನ್ನ ಅನು. ನನ್ನ ಜೀವನದಲ್ಲಿ ನಾ ಸಾಧಿಸಿದ್ದು ಏನಾದ್ರೂ ಇದ್ರೆ ಅದು ನನ್ನ 'ಅನು' ಮಾತ್ರ. ಆ ದೇವರು ಕೊಟ್ಟ ಅಮೂಲ್ಯ ಗಿಫ್ಟ್ 'ಅನು' ಅಷ್ಟೇ. ಎಲ್ಲಾ ಸ್ಟೂಡೆಂಟ್ಸ್‌ಗೂ ಗ್ರೇಟ್ ಮಾಡೆಲ್ ನಮ್ ಲೆಕ್ಚರ್ ಅನು ಮಿಸ್. ತಾಳ್ಮೆ, ಪ್ರೀತಿ,ಸಹನೆ , ಸಾಧನೆ, ಮಮತೆಗೆ ಇನ್ನೊಂದು ಹೆಸರೇ ಅನು.
ನನ್ನ ಉಸಿರಿರುವವರೆಗೂ ನೀ ನನ್ನ ಉಸಿರಾಗ್ತೀಯಾ ಅಮ್ಮಾ..ನೀನಿದ್ದರೇನೇ ಎಲ್ಲಾ...ನೀನಿಲ್ಲದೆ ಏನೂ ಇಲ್ಲ.
ಹಾಟ್ಸ್ ಆಫ್ ಟು ಯು ಮೈ ವಲ್ಡ್ಸ್ ಬೆಸ್ಟ್ ಲೆಕ್ಚರ್, ಬೆಸ್ಟ್ ಅಮ್ಮ...
ಲವ್‌ಯು ಆ್ಯಂಡ್ ಮಿಸ್ ಯೂ..ನಿನ್ನ ಎಲ್ಲ ನೋವನ್ನು ಮರೆಯೋ ದಿನ ಬೇಗ ಬರಲಿ ಅನು..
ಹ್ಯಾಪಿ ವುಮೆನ್ಸ್ ಡೇ
-ನೇತ್ರಾ ರೆಡ್ಡಿ
Advertisement