
ನೀವು ಯಾಕೆ ಟ್ರೈ ಮಾಡಬಾರದು? ಅಂದಿದ್ದಳು. ಊರಿಗೆ ಹೋಗಿದ್ದಾಗ ನಾ ಕಳಿಸುವ sms ಗಳನ್ನು ನೋಡಿ ಮುಸಿಮುಸಿ ನಕ್ಕಿದ್ದಳು. ಫೇಸ್ ಬುಕ್ಕಿನಲ್ಲಿ ನಾ ಅವಳಿಗರಿಯದಂತೆ ಆಗಾಗ ನಾಲ್ಕು ಸಾಲುಗಳನ್ನು ಗೀಚ ತೊಡಗಿದೆ. .ಜೊತೆಗೆ ಕೆಲವು ಗೆಳೆಯ ಗೆಳತಿಯರ ಮೆಚ್ಚುಗೆ ಗಳಿಸತೊಡಗಿದೆ. ಆಗಾಗ ಇವಳಿಗೆ ನಾ ತೋರಿಸುತ್ತಿದ್ದೆ, ನೀವು ಇನ್ನೂ ಬರೆಯಿರಿ ಬರೆಯಿರಿ ಎಂದಳು. ನನಗೆ ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಆಹ್ವಾನ ಬಂದಾಗ ನನಗಿಂತ ಹೆಚ್ಚು ಖುಷಿಪಟ್ಟವಳು ನನ್ನ ಈ ಬೆನ್ನೆಲುಬು ಅನುರಾಧ.
ನಾವು ಮನೆಗಾಗಿ ಹುಡುಕಾಡತೊಡಗಿದಾಗ ಪುಟ್ಟಮಗುವನ್ನು ಎತ್ತಿಕೊಂಡು ನನ್ನೊಡನೆ ಅಲೆದಾಡದೇ ಇರದ ಜಾಗವಿಲ್ಲ. ಮನೆ ಕಟ್ಟುವ ಕೆಲಸ ಸಂಪೂರ್ಣವಾಗುವವರೆಗೂ ಸರಿಯಾಗಿ ವಿಶ್ರಾಂತಿಯನ್ನೂ ತೆಗೆದುಕೊಂಡವಳಲ್ಲ.
ಹೆಚ್ಚು ಹೆಚ್ಚು ಬರೆಯುವಾಸೆ, ಹೆಚ್ಚು ಹೇಳುವಾಸೆ, ಆದರೆ ಆಗದು. ಇವಳ ಬಗ್ಗೆ ಎಷ್ಟು ಬರೆದರೂ ಕಡಿಮೆಯೇ. ಅವಳ ಪ್ರೇರಣೆಯ ಬಗ್ಗೆ ಪದಗಳಲ್ಲಿ ತೋರ್ಪಡಿಸಲು ಮಹಿಳಾ ದಿನಾಚರಣೆ ಒಂದು ನೆಪ ಮಾತ್ರ !
-ವಿನೋದ್ ಕುಮಾರ್ ಬೆಂಗಳೂರು
Advertisement