ಅತ್ಯಾಚಾರಕ್ಕೆ ಕನಿಷ್ಠ 7 ವರ್ಷ ಜೈಲು

ಅತ್ಯಾಚಾರ... ಮಹಿಳೆಯನ್ನು ಒಂದು ಪಿಡುಗಿನಂತೆ ಕಾಡುತ್ತಿರುವ ಹೇಯ ಕೃತ್ಯ ಎಂದರೆ ಅತ್ಯಾಚಾರ. ಇಂತಹ ಅತ್ಯಾಚಾರಕ್ಕೆ ಒಳಗಾದವರು, ತಮ್ಮ ಜೀವನವೇ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಅತ್ಯಾಚಾರ... ಮಹಿಳೆಯನ್ನು ಒಂದು ಪಿಡುಗಿನಂತೆ ಕಾಡುತ್ತಿರುವ ಹೇಯ ಕೃತ್ಯ ಎಂದರೆ ಅತ್ಯಾಚಾರ. ಇಂತಹ ಅತ್ಯಾಚಾರಕ್ಕೆ ಒಳಗಾದವರು, ತಮ್ಮ ಜೀವನವೇ ಮುಳುಗಿ ಹೋಯಿತು ಎಂದುಕೊಂಡು, ಆತ್ಮಹತ್ಯೆ ದಾರಿ ಹಿಡಿಯುತ್ತಾರೆ, ಇನ್ನೂ ಕೆಲವರನ್ನು ಪಾಪಿಗಳೇ ಕೊಂದು ಹಾಕುತ್ತಾರೆ. ಇಂತಹ ಪ್ರಕರಣಗಳ ಬಗ್ಗೆ ಮಹಿಳೆಯರು ತಿಳಿದುಕೊಳ್ಳಲೇ ಬೇಕಾದ ಒಂದಿಷ್ಟು ಮಾಹಿತಿ ಇಂತಿದೆ.

ಅತ್ಯಾಚಾರವೆಂದರೆ:

  • ಮಹಿಳೆಯ ಇಚ್ಛೆಗೆ ವಿರುದ್ಧವಾಗಿ
  • ಮಹಿಳೆಯ ಒಪ್ಪಿಗೆಯಿಲ್ಲದೆ
  • ಮಹಿಳೆಗೆ ಆಪ್ತರಾದವರಿಗೆ ಜೀವ ಬೆದರಿಕೆ ಒಡ್ಡಿ ಒಪ್ಪಿಗೆ ಪಡೆದು
  • ಪರ ಪುರುಷನನ್ನು ತಪ್ಪಾಗಿ ತನ್ನ ಗಂಡನೆಂದು ತಿಳಿದು ಒಪ್ಪಿಗೆ ನೀಡಿದಾಗ
  • ಮನೋವಿಕಲತೆ ಅಥವಾ ಮದ್ಯದ ಪ್ರಭಾವದಿಂದಾಗಿ ತಾನು ಒಪ್ಪಿಗೆ ನೀಡಿದಾಗ
  • ಕೃತ್ಯದ ಸ್ವರೂಪ ಮತ್ತು ಪರಿಣಾಮಗಳನ್ನು ತಿಳಿಯುವ ಸ್ಥಿತಿಯಲ್ಲಿಲ್ಲದಿದ್ದಾಗ ಒಪ್ಪಿಗೆ ನೀಡಿದ್ದರೆ
  • 16 ವರ್ಷಗಳಿಗಿಂತ ಕಡಿಮೆ ವಯಸ್ಸಿನವಳಾಗಿದ್ದಾಗ ಒಪ್ಪಿಗೆ ನೀಡಿದ್ದರೆ - ಪುರುಷ ಅವಳೊಂದಿಗೆ ಲೈಂಗಿಕ ಸಂಭೋಗ ನಡೆಸಿದರೆ ಅದು ಅತ್ಯಾಚಾರ ಎನಿಸುತ್ತದೆ.

ಅತ್ಯಾಚಾರಕ್ಕೆ ಒಳಗಾದವರು ಮಾಡಬೇಕಾದುದು
  • ಕೂಡಲೇ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಬೇಕು
  • ವೈದ್ಯಕೀಯ ಪರೀಕ್ಷೆಗೆ ಒಳಪಡುವವರೆಗೆ ಸ್ನಾನ ಮಾಡಬಾರದು, ಅತ್ಯಾಚಾರ ನಡೆದಾಗ ತೊಟ್ಟಿದ್ದ ಒಳ ಉಡುಪುಗಳನ್ನು ಬದಲಿಸಬಾರದು ಮತ್ತು ನಾಶಪಡಿಸಬಾರದು
  • ಕೃತ್ಯ ನಡೆದ ಸ್ಥಳವನ್ನು ಪೊಲೀಸರು ಬಂದು ಸ್ಥಳ ಪರೀಕ್ಷೆ ನಡೆಸುವವರೆಗೆ ಸಾಧ್ಯವಾದಲ್ಲಿ ಹಾಗೆಯೇ ಕಾಪಾಡಬೇಕು
  • ದೂರು ದಾಖಲು ಮಾಡಿದ ನಂತರ ಎಫ್ಐಆರ್ ನ ಸಹಿ ಮಾಡಿದ ಪ್ರತಿಯನ್ನು ತಪ್ಪದೇ ಪಡೆಯಬೇಕು.
ಶಿಕ್ಷೆ
  • ಭಾರತ ದಂಡ ಸಂಹಿತೆಯ 175 ಮತ್ತು 176ನೇ ಪ್ರಕರಣಗಳ ರೀತ್ಯ ಇದು ಅಪರಾಧ ಮತ್ತು ಶಿಕ್ಷಾರ್ಹ
  • ಕನಿಷ್ಠ ಏಳು ವರ್ಷಗಳಿಂದ 10 ವರ್ಷಗಳವರೆಗೆ ಅಥವಾ ಜೀವಾವಧಿ ಕಾರಾವಸ ಶಿಕ್ಷೆಗೆ ವಿಸ್ತರಿಸಬಹುದು
  • ಮಹಿಳೆ ತನ್ನ ಅಭಿರಕ್ಷೆಯಲ್ಲಿರುವಾಗ ಪೊಲೀಸ್ ಅಧಿಕಾರಿ ಅಥವಾ ಅಧಿಕಾರದಲ್ಲಿರುವ ವ್ಯಕ್ತಿ ಅತ್ಯಾಚಾರವೆಸಗಿದ್ದರೆ ಕನಿಷ್ಠ ಹತ್ತು ವರ್ಷಗಳವರೆಗಿನ ಶಿಕ್ಷೆ
ಪಡೆಯಬೇಕಾದ ದಾಖಲೆ
ಎಫ್ಐಆರ್ ಎಂದರೇನು
  • ಅಪರಾಧದ ಬಗ್ಗೆ ಪೊಲೀಸರು ಸ್ವೀಕರಿಸಿದ ಮಾಹಿತಿಯೇ ಪ್ರಥಮ ಮಾಹಿತಿ ವರದಿ(ಎಫ್ಐಆರ್)
  • ಇದನ್ನು ಅತ್ಯಾಚಾರಕ್ಕೆ ಒಳಗಾದ ಮಹಿಳೆಯೇ ನೀಡಬೇಕೆಂದಿಲ್ಲ
  • ಎಫ್ಐಆರ್ ನಲ್ಲಿ ದಾಖಲು ಮಾಡಿದ ಅಂಶಗಳು ಮತ್ತು ತದನಂತರ ಕೊಡುವ ಹೇಳಿಕೆಗಳ ನಡುವೆ ವ್ಯತ್ಯಾಸಗಳಿಲ್ಲದಂತೆ ನೋಡಿಕೊಳ್ಳಬೇಕು
  • ಎಫ್ಐಆರ್ ಅನ್ನು ದಾಖಲು ಮಾಡಲು ಪೊಲೀಸ್ ಠಾಣೆಯ ಅಧಿಕಾರಿ ನಿರಾಕರಿಸುವಂತಿಲ್ಲ. ನಿರಾಕರಿಸಿದರೆ ಠಾಣೆಯ ಇನ್ಸ್ ಪೆಕ್ಟರ್ ನಿಗೆ, ಅವನೂ ನಿರಾಕರಿಸಿದರೆ ಲಿಖಿತ ದೂರನ್ನು ಎಸ್.ಪಿ ಅವರಿಗೆ ರಿಜಿಸ್ಟರ್ಡ್ ಅಂಚೆಯ ಮೂಲಕ ಕಳುಹಿಸಿ.
  • ಮಹಿಳಾ ಸಂಘಟನೆ ಅಥವಾ ಮಹಿಳೆ ನೇರವಾಗಿ ಮ್ಯಾಜಿಸ್ಟ್ರೇಟರಿಗೇ ದೂರು ನೀಡಬಹುದು.
ಎಫ್ಐಆರ್ ನಲ್ಲಿ ಇರಬೇಕಾದ ವಿವರಗಳು
  • ಆರೋಪಿಯ ಹೆಸರು ಮತ್ತು ವಿಳಾಸ
  • ಅಪರಾಧ ನಡೆದ ದಿನಾಂಕ, ಸ್ಥಳ, ಸಮಯ
  • ಅತ್ಯಾಚಾರ ನಡೆಯಿತೆಂಬುದರ ಸ್ಪಷ್ಟ ಸೂಚನೆ
  • ಅತ್ಯಾಚಾರಕ್ಕೆ ಸಂಬಂಧಿಸಿದಂತೆ ನಡೆದ ಅಪರಾಧಗಳು- ಅಪಹರಣ, ಹಲ್ಲೆ, ಕೊಲೆ ಯತ್ನ ಇತ್ಯಾದಿ
  • ಸಾಕ್ಷಿಗಳಿದ್ದರೆ ಅವರ ಹೆಸರು, ವಿಳಾಸ,ವಿವರ
  • ಎಫ್ಐಆರ್ ಗೆ ಕರ್ತವ್ಯದ ಮೇಲಿದ್ದ ಅಧಿಕಾರಿಯ ಸಹಿ ಇರಬೇಕು
(ಮಹಿಳಾ ಆಯೋಗದಿಂದ ಪಡೆದ ಮಾಹಿತಿ)


-ಮೈನಾಶ್ರೀ.ಸಿ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com