ಅದಾನಿ ಯೋಜನೆಗೆ ಆಸ್ಟ್ರೇಲಿಯಾ ಪ್ರಧಾನಿ ಒಲವು: ಪರಿಸರವಾದಿಗಳ ಟೀಕೆ

ಕ್ವೀನ್ಸ್ ಲ್ಯಾಂಡ್ ನಲ್ಲಿ ಭಾರತದ ಗೌತಮ್ ಅದಾನಿ ಸಂಸ್ಥೆ ನಡೆಸಲು ಉದ್ದೇಶಿಸಿರುವ ಕಲ್ಲಿದ್ದಲು ಗಣಿಗಾರಿಕೆ ಯೋಜನೆಗೆ ತೀವ್ರ ವಿರೋಧ ವ್ಯಕ್ತವಾಗಿದೆ.
ಗೌತಮ್ ಅದಾನಿ- ಆಸ್ಟ್ರೇಲಿಯಾ ಪ್ರಧಾನಿ(ಸಂಗ್ರಹ ಚಿತ್ರ)
ಗೌತಮ್ ಅದಾನಿ- ಆಸ್ಟ್ರೇಲಿಯಾ ಪ್ರಧಾನಿ(ಸಂಗ್ರಹ ಚಿತ್ರ)

ನವದೆಹಲಿ: ಆಸ್ಟ್ರೇಲಿಯಾದ ಸೆಂಟ್ರಲ್ ಕ್ವೀನ್ಸ್ ಲ್ಯಾಂಡ್ ನಲ್ಲಿ ಭಾರತದ ಗೌತಮ್ ಅದಾನಿ ಸಂಸ್ಥೆ ನಡೆಸಲು ಉದ್ದೇಶಿಸಿರುವ ಕಲ್ಲಿದ್ದಲು ಗಣಿಗಾರಿಕೆ ಯೋಜನೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಆದರೆ ಆಸ್ಟ್ರೇಲಿಯಾ ಪ್ರಧಾನಿ ಟೋನಿ ಅಬ್ಬೋಟ್ ಮಾತ್ರ ಅದಾನಿ ಯೋಜನೆಯನ್ನು ಬೆಂಬಲಿಸುತ್ತಿದ್ದಾರೆ.

ಅದಾನಿ ಯೋಜನೆಗೆ ಪರಿಸರ ಅನುಮೋದನೆಯನ್ನು ರದ್ದುಗೊಳಿಸಿರುವ ಫೆಡರಲ್ ನ್ಯಾಯಾಲಯದ ತೀರ್ಮಾದ ವಿರುದ್ಧ ಟೋನಿ ಅಬ್ಬೋಟ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 21 ಬಿಲಿಯನ್ ಡಾಲರ್ ವೆಚ್ಚದ ಅದಾನಿ ಯೋಜನೆಯಿಂದ  ಕ್ವೀನ್ಸ್ ಲ್ಯಾಂಡ್ ಹಾಗೂ ಆಸ್ಟ್ರೇಲಿಯಾದ ವಿವಿಧ ಭಾಗಗಳಲ್ಲಿ 10000 ಉದ್ಯೋಗಳು ಸೃಷ್ಠಿಯಾಗಲಿವೆ ಎಂದು ಅಬ್ಬೋಟ್ ಹೇಳಿದ್ದಾರೆ.   

ಆಸ್ಟ್ರೇಲಿಯಾದ ಕಾರ್ಮಿಕರು ಹಾಗೂ ಭಾರತದಂತೆ ವಿದ್ಯುತ್ ಕೊರತೆ ಎದುರಿಸುತ್ತಿರುವ ರಾಷ್ಟ್ರಗಳಿಗಾಗಿ ಅದಾನಿಯ ಕಲ್ಲಿದ್ದಲು ಗಣಿಗಾರಿಕೆ ಯೋಜನೆ ಮುಂದುವರೆಯಬೇಕಿದೆ ಎಂದು ಆಸ್ಟ್ರೇಲಿಯಾ ಪ್ರಧಾನಿ ಹೇಳಿದ್ದಾರೆ.  ಫೆಡರಲ್ ಕೋರ್ಟ್ ನ ಈ ಆದೇಶದಿಂದ ಹೂಡಿಕೆದಾರರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ಆಸ್ಟ್ರೇಲಿಯಾ ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ.

ಅದಾನಿ ಯೋಜನೆಗೆ ನೀದಲಾಗಿದ್ದ ಪರಿಸರ ಅನುಮೋದನೆಯನ್ನು ರದ್ದುಗೊಳಿಸಿರುವ ಫೆಡರಲ್ ಕೋರ್ಟ್ ನ ಆದೇಶವನ್ನು ಪ್ರಶ್ನಿಸಿರುವುದಕ್ಕೆ ಆಸ್ಟ್ರೇಲಿಯಾ ಪ್ರಧಾನಿ ವಿರುದ್ಧ ಪರಿಸರ ಸಂರಕ್ಷಣಾ ಸಮುದಾಯಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಆಸ್ಟ್ರೇಲಿಯಾ ಪ್ರತಿಪಕ್ಷದ ನಾಯಕ ಬಿಲ್ ಶಾರ್ಟನ್ ಅದಾನಿ ಯೋಜನೆಗೆ ವಿರೋಧ ವ್ಯಕ್ತಪಡಿಸಿಲ್ಲವಾದರೂ ಯೋಜನೆಯ ಜಾರಿಗೆ ತೋರುತ್ತಿರುವ ಅತುರವನ್ನು ಪ್ರಶ್ನಿಸಿದ್ದಾರೆ. ಸೆಂಟ್ರಲ್ ಕ್ವೀನ್ಸ್ ಲ್ಯಾಂಡ್ ನಲ್ಲಿ ನಡೆಸಲು ಉದ್ದೇಶಿಸಿರುವ ಕಲ್ಲಿದ್ದಲು ಗಣಿಗಾರಿಕೆ ಯೋಜನೆಗೆ ನಿರಂತರವಾಗಿ ಅಡ್ಡಿ ಎದುರಾಗುತ್ತಿದ್ದು, ಯೋಜನೆ ರದ್ದುಗೊಳ್ಳುವ ಭೀತಿ ಉಂಟಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com