
ಮಂಗಳ ಗ್ರಹದಲ್ಲಿ ಜೀವ ಸಂಕುಲವಿರುವ ಸಾಧ್ಯತೆ ನಾಸಾದ ಕ್ಯೂರಿಯಾಸಿಟಿ ರೋವರ್ ಗೆ ಗೋಚರಿಸಿದೆ.
ಕ್ಯೂರಿಯಾಸಿಟಿ ರೋವರ್ ಕ್ಲಿಕ್ಕಿಸಿರುವ ಫೋಟೋ ಒಂದರಲ್ಲಿ ಮಾನವ ಆಕೃತಿ ಕಂಡುಬಂದಿದ್ದು ಮಂಗಳನಲ್ಲಿ ಜೀವ ಸಂಕುಲವಿರುವ ಸಾಧ್ಯತೆ ಬಗ್ಗೆ ಮತ್ತಷ್ಟು ಕುತೂಹಲ ಮೂಡಿದೆ. ನಾಸಾ ಕ್ಲಿಕ್ಕಿಸಿರುವ ಕಲ್ಲಿನ ಬಂಡೆ ಮೇಲೆ ಮಹಿಳೆಯ ಆಕೃತಿ ಪತ್ತೆಯಾಗಿದೆ. ಈ ಚಿತ್ರ ಜರ್ನಿ ತು ಸರ್ಫೇಸ್ ಆಫ್ ಮಾರ್ಸ್ ನ ಫೇಸ್ ಬುಕ್ ಪೇಜ್ ನಲ್ಲಿ ಹಂಚಿಕೆಯಾಗಿದ್ದು ವೈರಲ್ ಆಗಿದೆ.
ಈ ಚಿತ್ರವನ್ನು ವೀಕ್ಷಿಸಿದ ಹಲವರು ಇದು ಜೇಡ ಅಥವಾ ಏಡಿ ಮಾದರಿಯ ಜೀವಿ ಎಂದು ಅಭಿಪ್ರಾಯಪಟ್ಟಿದ್ದಾರೆ. ಎಸ್ಇಟಿಐ ರಿಸರ್ಚ್ ಸೆಂಟರ್ ನ ಖಗೋಳಶಾಸ್ತ್ರಜ್ಞ ಸೇಥ್ ಶೊಸ್ಟಾಕ್, ನಾಸಾ ತೆಗೆದಿರುವ ಚಿತ್ರವನ್ನು ಪರಿಡೋಲಿಯಾ ಎಂಬ ಸ್ಥಿತಿಯಾಗಿದ್ದು ಇದರಲ್ಲಿ ಜನರಿಗೆ ಪರಿಚಿತ ಆಕಾರಗಳು ಮತ್ತು ಮಾದರಿಗಳನ್ನು ನೋಡಿದಂತಾಗುತ್ತದೆ, ಅದೇ ರೀತಿ ಕ್ಯೂರಿಯಾಸಿಟಿ ರೋವರ್ ತೆಗೆದಿರುವ ಚಿತ್ರಗಳಲ್ಲೂ ಮಾನವ ಆಕೃತಿ ಕಂಡಿರುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
Advertisement