ಚೀನಾ ಕರೆನ್ಸಿ ಅಪಮೌಲ್ಯ

ಚೀನಾದ ಕೇಂದ್ರೀಯ ಬ್ಯಾಂಕ್ ಮಂಗಳವಾರ ತನ್ನ ಕರೆನ್ಸಿ ರೆನ್‍ಮಿನ್ಬಿಯನ್ನು ಶೇ.2ರಷ್ಟು ಅಪಮೌಲ್ಯ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೀಜಿಂಗ್: ಚೀನಾದ ಕೇಂದ್ರೀಯ ಬ್ಯಾಂಕ್ ಮಂಗಳವಾರ ತನ್ನ ಕರೆನ್ಸಿ ರೆನ್‍ಮಿನ್ಬಿಯನ್ನು ಶೇ.2ರಷ್ಟು ಅಪಮೌಲ್ಯಗೊಳಿಸಿದೆ.

ದೇಶದ ಆರ್ಥಿಕ ಪ್ರಗತಿ ನಿಧಾನವಾಗುತ್ತಿರುವುದರಿಂದ ಮತ್ತು ಇತ್ತೀಚೆಗೆ ಷೇರು ಮಾರುಕಟ್ಟೆ ಭಾರಿ ಕುಸಿತ ಕಂಡಿದ್ದರಿಂದ ತನ್ನ ಕರೆನ್ಸಿಯನ್ನು ಸಮಮೌಲ್ಯಗೊಳಿಸಲು ಈ ಕ್ರಮಗೊಂಡಿದೆ. ಹೊಸ ಮೌಲ್ಯ ಮಂಗಳವಾರದಿಂದಲೇ ಕಾರ್ಯರೂಪಕ್ಕೆ ಬಂದಿದೆ.

ಪ್ರತಿನಿತ್ಯ ಮಾರುಕಟ್ಟೆ ವಹಿವಾಟು ಆರಂಭಕ್ಕೆ ಮೊದಲೇ ರೆನ್‍ಮಿನ್ಬಿ ವಿನಿಮಯ ಮೌಲ್ಯ ನಿಗದಿ ಕುರಿತು ಚೀನಾ ವಿದೇಶಿ ವಿನಿಮಯ, ವಾಣಿಜ್ಯ ವ್ಯವಸ್ಥೆಗೆ ಮಾಹಿತಿ ನೀಡಬೇಕು. ಈ ಅಪಮೌಲ್ಯದಿಂದ ಡಾಲರ್ ಗೆ ಎದುರಾಗಿ ರೆನ್‍ಮಿನ್ಬಿ ವಿನಿಮಯ ದರ 1,136 ಮೂಲ ಅಂಶಗಳಷ್ಟು ಅಂದರೆ ಶೇ.2ರಷ್ಟು ಇಳಿಮುಖ ಕಂಡಿದೆ ಎಂದು ಸರ್ಕಾರಿ ಸ್ವಾಮ್ಯದ ಕ್ಸಿನ್‍ಹುವಾ ನ್ಯೂಸ್ ಏಜೆನ್ಸಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com