
ತೈಂಜಿನ್: ಚೈನಾದ ಬಂದರು ನಗರ ತೈಂಜಿನ್ ನಲ್ಲಿನ ಒಂದು ಗೋದಾಮು ಸ್ಫೋಟಗೊಂಡು, ಬೆಂಕಿ ಬೆಂಕಿ ಚೆಂಡುಗಳನ್ನು ಆಕಾಶಕ್ಕೆ ಉಗುಳಿದ ಕಾರಣ ಕನಿಷ್ಠ ೧೭ ಜನ ಮೃತಪಟ್ಟು ನೂರಾರು ಜನ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ೩೨ ಜನರ ಸ್ಥಿತಿ ಗಂಭೀರ ಎನ್ನಲಾಗಿದೆ.
ಸ್ಫೋಟಕ ಸಾಮಗ್ರಿಗಳ ದಾಸ್ತಾನು ಗೋದಾಮಿನಲ್ಲಿ ಉಂಟಾದ ಸ್ಫೋಟದಿಂದ ಅಕ್ಕಪಕ್ಕದ ಕಟ್ಟಡಗಳ ಕಿಟಕಿ ಬಾಗಿಲುಗಳು ಮುರಿದು ನಾಶವಾಗಿವೆ ಎಂದು ತಿಳಿದುಬಂದಿದೆ.
"ನಾನು ಭೂಕಂಪ ಎಂದು ತಿಳಿದೆ. ಆದುದರಿಂದ ಶು ಕೂಡ ಧರಿಸದೆ ಮನೆಯ ಹೊರಗೆ ಬಂದು ಕೆಳಗೆ ಓಡಿ ಹೋದೆ ಎಂದು" ಸ್ಫೋಟಗೊಂಡ ಸ್ಥಳದಿಂದ ಕಿಲೋಮೀಟರ್ ದೂರದಲ್ಲಿರುವ ವಸತಿ ಸಮುಚ್ಚಯದ ಮನೆಯ ನಿವಾಸಿ ಜ್ಯಾಂಗ್ ಸಿಯು ಹೇಳಿದ್ದಾರೆ.
ಈ ಸ್ಫೋಟದ ಕಾರಣ ತಿಳಿದುಬಂದಿಲ್ಲ, ಹಾಗೆಯೇ ಗಾಳಿಗೆ ಸೇರಿರಬಹುದಾದ ಮಾರಣಾಂತಿಕ ರಾಸಾಯನಿಕಗಳ ಸುಳಿವೂ ಇನ್ನು ದೊರೆತಿಲ್ಲ. ಈ ಸ್ಫೋಟದಿಂದ ಗೋದಾಮಿಗೆ ಹತ್ತಿರವಿದ್ದ ಹಲವಾರು ಅಪಾರ್ಟ್ಮೆಂಟ್ ಗಳು, ಕಟ್ಟಡಗಳು ಕುಸಿದಿವೆ ಮತ್ತು ಅಲ್ಲಿ ನಿಲ್ಲಿಸಲಾಗಿದ್ದ ೧೦೦೦ ರೆನಾಲ್ಟ್ ಕಾರುಗಳು ಸುಟ್ಟು ಬೂಧಿಯಾಗಿವೆ ಎಂದು ತಿಳಿದುಬಂದಿದೆ.
ತೈಂಜಿನ್ ಜನಸಂಖ್ಯೆ ಸುಮಾರು ೧೫ ದಶಲಕ್ಷ ಇದ್ದು, ಬೀಜಿಂಗ್ ನಿಂದ ೧೨೦ ಕಿಮೀ ದೂರದಲ್ಲಿದೆ. ಇದು ಪ್ರಮುಖ ಬಂದರು ನಗರವಾಗಿದ್ದು, ಬಹಳ ಆಧುನಿಕ ನಗರವಾಗಿದೆ.
Advertisement