ವಿದೇಶ
ಹೀಗೂ ಪೀಡಿಸ್ತವೆ ಕೆಲವು ಶಾಲೆಗಳು!
ಶಾಲೆ ನಡೆಸುವವರು ದುಡ್ಡಿನ ಹಿಂದೆ ಬಿದ್ದು ಮಾನವೀಯತೆ, ಅಂತಃಕರಣ ಕಳೆದು ಕೊಂಡಿರುವ ಘಟನೆ...
ದುಬೈ: ಶಾಲೆ ನಡೆಸುವವರು ದುಡ್ಡಿನ ಹಿಂದೆ ಬಿದ್ದು ಮಾನವೀಯತೆ, ಅಂತಃಕರಣ ಕಳೆದು ಕೊಂಡಿರುವ ಘಟನೆಯಿದು.
ಬಹರೈನ್ ಮೂಲದ ಭಾರತೀಯ ಶಾಲೆಯೊಂದು ವಿದ್ಯಾರ್ಥಿನಿಯೊಬ್ಬಳ ಪೋಷಕರಿಗೆ ಆಕೆಯ ವಾರ್ಷಿಕ ಶುಲ್ಕ ಬಾಕಿಯನ್ನು ಕೂಡಲೇ ಪಾವತಿಸುವಂತೆ ಒತ್ತಡ ಹೇರಿದೆ. ದುರಂತವೆಂದರೆ ಆ ವಿದ್ಯಾರ್ಥಿನಿ ತೀರಿಕೊಂಡು ಆರು ತಿಂಗಳು ಕಳೆದಿವೆ!
ಹೌದು. ಅಭಿಯಾ ಶ್ರೇಯಾ ಎಂಬ ವಿದ್ಯಾರ್ಥಿನಿ ಚಿಕನ್‍ಪಾಕ್ಸ್‍ಗೆ ತುತ್ತಾಗಿ ಜನವರಿಯಲ್ಲಿ ಸಾವಿಗೀಡಾಗಿದ್ದಳು. ಶಾಲೆಗೆ ಪೋಷಕರು ಸುದ್ದಿ ತಿಳಿಸಿ, ಆಕೆಯ ಹೆಸರನ್ನು ಶಾಲಾ ಪಟ್ಟಿಯಿಂದ ಹೊರಗಿಡಲು ಕೋರಿದ್ದರು. ಆದರೆ ಶುಲ್ಕ ಭರಿಸಬೇಕೆಂದು ಶಾಲೆಯಿಂದ ಪದೇಪದೆ ಒತ್ತಡ ಕರೆಗಳು ಬರುತ್ತಲೇ ಇದ್ದವು.
ಮಗಳ ಸಾವಿಂದ ಜರ್ಜರಿತರಾಗಿದ್ದ ತಾಯಿ ಶೈನಿ ಇದರಿಂದ ಖಿನ್ನತೆಗೆ ಒಳಗಾಗಿದ್ದರೆಂದು ಪತಿ ಜೋಸೆಫ್ ಚೆರಿಯನ್ ಗಲ್ಫ್ ನ್ಯೂಸ್‍ನೆದುರು ಅಳಲು ಹೇಳಿಕೊಂಡಿದ್ದಾರೆ. ನಂತರ ಶಾಲಾ ವ್ಯವಸ್ಥಾಪಕ ಮಂಡಳಿ ಕ್ಷಮೆ ಕೋರಿದ್ದಾರೆ.