ಪಾಕಿಸ್ತಾನ- ಚೀನಾದಿಂದ 2 ಬಿಲಿಯನ್ ಡಾಲರ್ ಮೌಲ್ಯದ ಒಪ್ಪಂದಗಳಿಗೆ ಸಹಿ

ಪಾಕಿಸ್ತಾನ ಹಾಗೂ ಚೀನಾ 2 ಬಿಲಿಯನ್ ಡಾಲರ್ ಮೌಲ್ಯದ 20 ಒಪ್ಪಂದಗಳಿಗೆ ಸಹಿ ಹಾಕಿವೆ.
ಚೀನಾ-ಪಾಕಿಸ್ತಾನ
ಚೀನಾ-ಪಾಕಿಸ್ತಾನ

ಇಸ್ಲಾಮಾಬಾದ್: ಪಾಕಿಸ್ತಾನ ಹಾಗೂ ಚೀನಾ 2 ಬಿಲಿಯನ್ ಡಾಲರ್  ಮೌಲ್ಯದ 20 ಒಪ್ಪಂದಗಳಿಗೆ ಸಹಿ ಹಾಕಿವೆ. ಇಂಧನ, ಸಂವಹನ, ಸಾಮಾಜಿಕ ಸೇವೆ, ಕೃಷಿ, ಆರೋಗ್ಯ, ಶಿಕ್ಷಣ ಹಾಗೂ ಮೂಲಸೌಕರ್ಯ ಕ್ಷೇತ್ರಗಳಲ್ಲಿ ಒಪ್ಪಂದ ನಡೆದಿದೆ.

ಚೀನಾದಲ್ಲಿ ನಡೆದ ಎರಡು ದಿನಗಳ ಕಾಲ ನಡೆದ ಚೀನಾ-ಪಾಕಿಸ್ತಾನ ಎಕನಾಮಿಕ್ ಕಾರಿಡಾರ್ ಕಾರ್ಯಕ್ರಮದಲ್ಲಿ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಒಪ್ಪಂದದ ವೇಳೆ 35 ಚೀನಾ ಕಂಪನಿಗಳ ಒಕ್ಕೂಟವನ್ನು ರಚಿಸಲಾಗಿದ್ದು ಪಾಕಿಸ್ತಾನದಲ್ಲಿ  ಬಂಡವಾಳ ಹೂಡಿಕೆ ಮಾಡಲಿವೆ ಎಂದು ಪಾಕ್ ನ ಮಾಧ್ಯಮ ವರದಿ ಮಾಡಿದೆ.
ಚೀನಾ-ಪಾಕಿಸ್ತಾನ ಎಕನಾಮಿಕ್ ಕಾರಿಡಾರ್ ಒಕ್ಕೂಟದ ಮುಂದಿನ ಸಭೆ ಅಕ್ಟೋಬರ್ ನಲ್ಲಿ ನಡೆಯಲಿದೆ. ಚೀನಾ- ಪಾಕಿಸ್ತಾನ ನಡುವೆ ನಡೆದಿರುವ ಬಾಹ್ಯಾಕಾಶ ತಂತ್ರಜ್ಞಾನ ಸಹಕಾರ ಒಪ್ಪಂದ ಉಭಯ ರಾಷ್ಟ್ರಗಳ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ವೃದ್ಧಿಸುತ್ತದೆ ಎಂದು ಪಾಕಿಸ್ತಾನ ಅಭಿವೃದ್ಧಿ ಹಾಗೂ ಸುಧಾರಣೆ ಸಚಿವ ಆಶಾನ್ ಇಕ್ಬಾಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಎಕೆನಾಮಿಕ್ ಕಾರಿಡಾರ್ ನ್ನು ಶೀಘ್ರವೇ ಅನುಷ್ಠಾನಗೊಳಿಸುವುದಾಗಿ ಪಾಕ್ ಸಚಿವ ಭರವಸೆ ನೀಡಿದ್ದಾರೆ. ಪಾಕಿಸ್ತಾನದಲ್ಲಿ ಸಮಸ್ಯೆ ಉಂಟಾದರೆ ತಮ್ಮನ್ನು ನೇರವಾಗಿ ಸಂಪರ್ಕಿಸುವಂತೆ ಹೂಡಿಕೆದಾರರಿಗೆ ತಿಳಿಸಿರುವುದಾಗಿ ಇಕ್ಬಾಲ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com