ಕಿವಿ ನೆಟ್‍ಗಾಗಿಸೋ ಸುದ್ದಿ!

ಮೈಯ್ಯೆಲ್ಲಾ ಕಿವಿಯಾಗುವುದು ಎಂಬ ಪಡೆನುಡಿ ಕೇಳಿದ್ದೀರಲ್ಲ. ಹಾಗೆ ಆಸ್ಟ್ರೇಲಿಯದ ಕಲಾವಿದನೊಬ್ಬ ಕೈಯೆಲ್ಲಾ ಕಿವಿಯಾಗಿದ್ದಾನೆ! ನಂಬಿ...
ಆಸ್ಟ್ರೇಲಿಯದ ರಂಗಕಲಾವಿದ ಸ್ಟೆರ್ಲಾಕ್
ಆಸ್ಟ್ರೇಲಿಯದ ರಂಗಕಲಾವಿದ ಸ್ಟೆರ್ಲಾಕ್

ಲಂಡನ್: ಮೈಯ್ಯೆಲ್ಲಾ ಕಿವಿಯಾಗುವುದು ಎಂಬ ಪಡೆನುಡಿ ಕೇಳಿದ್ದೀರಲ್ಲ. ಹಾಗೆ ಆಸ್ಟ್ರೇಲಿಯದ ಕಲಾವಿದನೊಬ್ಬ ಕೈಯೆಲ್ಲಾ ಕಿವಿಯಾಗಿದ್ದಾನೆ! ನಂಬಿ. ಸ್ಟೆರ್ಲಾಕ್ ಎಂಬ ಆಸ್ಟ್ರೇಲಿಯದ ರಂಗಕಲಾವಿದ ತನ್ನ ಕೈಯಲ್ಲಿ  ಕಿವಿಯೊಂದನ್ನು ಬೆಳೆಸುವಲ್ಲಿ ಯಶಸ್ವಿಯಾಗಿದ್ದಾನೆ. ಅವನಿಗೀಗ ಮೂರು ಕಿವಿಗಳು. ಈ ಥರದೇಹದ ಮಾರ್ಪಾಡನ್ನೇ ಅಚ್ಚರಿ ಎಂದು ನೀವುಯೋಚಿಸುತ್ತಿದ್ದೀರಾ? ಈತ ಇನ್ನೊಂದು ಹೆಜ್ಜೆ ಮುಂದೆ ಹೋಗಿ  ಕೈಯ್ಯಲ್ಲಿರುವ ಆ ಕಿವಿಗೆ ಇಂಟರ್‍ನೆಟ್ ಸಂಪರ್ಕ ಜೋಡಿಸಲುಸಿದ್ಧನಾಗಿದ್ದಾನೆ! ಅದು ನಿಜವಾದ ಕಿವಿಯಲ್ಲ: 1996ರಲ್ಲಿ ವೈದ್ಯರ ತಂಡದೊಂದಿಗೆ ಮಾತನಾಡಿದ ಸ್ಟೆರ್ಲಾಕ್ ತನ್ನ ಹುಚ್ಚು ಐಡಿಯಾವನ್ನು ಅವರಲ್ಲಿ  ತಿಳಿಸಿದ. ತನ್ನ ಎಡಗೈ ತೋಳಿನಮೇಲೆ ಕೃತಕ ಕಿವಿಯೊಂದನ್ನು ಜೋಡಿಸಲು ಕೋರಿಕೊಂಡ.ಸಮಾಲೋಚನೆಯ ನಂತರ ವೈದ್ಯರ ಬಳಗ ಸರ್ಜರಿ ಮಾಡಿ
ಕೃತಕ ಕಿವಿ ಜೋಡಿಸಿತು. ಆರೇ ತಿಂಗಳಲ್ಲಿ ಅದರ ಮೇಲೆ ಮಾಂಸ, ಜೀವಕೋಶ, ರಕ್ತನಾಳ ಹಾಗೂ ಚರ್ಮಬೆಳೆದುಕೊಂಡು ಕೈಯೊಳಗೆ ಸೇರಿಕೊಂಡದ್ದೂ ಆಯ್ತು.ಮುಂದ..?: ವೃತ್ತಿಯಿಂದ ಪ್ರೊಫೆಸರ್ ಕೂಡ  ಆಗಿರುವ ಪರ್ತ್ ಮೂಲದ ಸ್ಟೆರ್ಲಾಕ್, ಕಿವಿ ಜೋಡಿಸುವ ಸಾಹಸದ ನಂತರ ಈಗ ಅದಕ್ಕೊಂದು ಚಿಕ್ಕ ಮೈಕ್ರೋಫೋ ನ್ ಅಳವಡಿಸಿ ಅದು ವೈಫೈ
ಇಂಟರ್‍ನೆಟ್ ಮೂಲಕ ಕಾರ್ಯನಿರ್ವಹಿಸುವಂತೆ ಮಾಡಲು ಹೊರಟಿದ್ದಾನೆ. ಇದರ ಮೂಲಕ ಜಿಪಿಎಸ್ ಕೂಡ ಬಳಸುವಂತೆ ಮಾಡುವ ಆಲೋಚನೆ ಆತನಿಗದಿದೆ. ವಿಶೇಷವೆಂದರೆ ಇದಕ್ಕೆ ಸ್ವಿಚ್ ಆಫ್ ಬಟನ್ ಇರುವುದಿಲ್ಲ. ವೈಫೈ ಇಲ್ಲದ ಜಾಗದಲ್ಲಿ ಇದು ನಿಷ್ಕ್ರಿಯವಾಗಿರುತ್ತದಷ್ಟೆ ಎಂದು ಸ್ಟೆರ್ಲಾಕ್ ಹೇಳುತ್ತಾನೆ.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com