
ಕೊಲೊಂಬೋ: ಶ್ರೀಲಂಕಾ ಸಂಸತ್ತು ಚುನಾವಣೆಯ ಈ ವಾರದ ಫಲಿತಾಂಶದಲ್ಲಿ ಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡಿರುವ ಶ್ರೀಲಂಕಾ ಸ್ವತಂತ್ರ ಪಕ್ಷಕ್ಕೆ(ಎಸ್ ಎಲ್ ಎಫ್ ಪಿ) ಸಮ್ಮಿಶ್ರ ಸರ್ಕಾರ ರಚಿಸಲು ಆಹ್ವಾನ ನೀಡಲಾಗಿದ್ದು, ಇದರಿಂದ ಅದರ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾಗೆ ಸ್ಥಗಿತಗೊಂಡಿರುವ ಸುಧಾರಣಾ ನೀತಿಗಳಿಗೆ ಮರುಚಾಲನೆ ನೀಡಲು ಅನುವು ಮಾಡಿಕೊಡಲಿದೆ.
ಶ್ರೀಲಂಕಾ ಸರ್ಕಾರ ಹೆಚ್ಚು ದಕ್ಷವಾಗಿ ಕಾರ್ಯನಿರ್ವಹಿಸಲು ಮತ್ತು ಚುನಾವಣಾ ನೀತಿಯನ್ನು ಸರಳಗೊಳಿಸಲು ತರಲಾಗಿದ್ದ ಕೆಲವು ಸುಧಾರಣಾ ನೀತಿಗಳಿಗೆ ಮಾಜಿ ಅಧ್ಯಕ್ಷ ಮಹೀಂದಾ ರಾಜಪಕ್ಸ ಅವರ ನಿಷ್ಠಾವಂತರು ಅಡ್ಡಗಾಲು ಹಾಕಿದ್ದರು. ಇದರಿಂದಾಗಿ ಅಧ್ಯಕ್ಷ ಸಿರಿಸೇನಾ ಅವರು ಅವಧಿಗೂ ಮುನ್ನ ಸಂಸತ್ತು ಚುನಾವಣೆ ಘೋಷಿಸಿದ್ದರು.
ಆದರೆ 2009ರಲ್ಲಿ 26 ವರ್ಷಗಳ ತಮಿಳರ ಬಂಡಾಯಕ್ಕೆ ಅಂತ್ಯ ಹಾಡಿರುವುದಕ್ಕೆ ರಾಜಪಕ್ಸ ಅವರನ್ನು ಹಲವು ಶ್ರೀಲಂಕನ್ನರು ಇಂದಿಗೂ ಪೂಜ್ಯ ಭಾವನೆಯಿಂದಲೇ ಕಾಣುತ್ತಿದ್ದಾರೆ. ಈ ವರ್ಷದ ಸಂಸತ್ತು ಚುನಾವಣೆಯಲ್ಲಿ ವಿರೋಧಪಕ್ಷವಾದ ಅವರ ನೇತೃತ್ವದ ಎಸ್ಎಲ್ ಎಫ್ ಪಿ ಸರ್ಕಾರ ರಚಿಸುವಷ್ಟು ಸ್ಥಾನಗಳನ್ನು ಪಡೆದಿಲ್ಲ.
ಪ್ರಧಾನಮಂತ್ರಿ ರಾನಿಲ್ ವಿಕ್ರಮಸಿಂಘೆ ಅವರ ನೇತೃತ್ವದ ಸಂಯುಕ್ತ ರಾಷ್ಟ್ರೀಯ ಪಕ್ಷ(ಯುಎನ್ ಪಿ) ಸಂಸತ್ತು ಚುನಾವಣೆಯಲ್ಲಿ ಅತೀ ಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡಿದ್ದು, ನಿಚ್ಛಳ ಬಹುಮತಕ್ಕೆ ಕೇವಲ ಏಳು ಸೀಟುಗಳು ಮಾತ್ರ ಕಡಿಮೆಯಾಗಿವೆ.ಹಾಗಾಗಿ ಸರ್ಕಾರ ರಚಿಸಲು ಶ್ರೀಲಂಕಾ ಸ್ವತಂತ್ರ ಪಕ್ಷವನ್ನು(ಎಸ್ ಎಲ್ ಎಫ್ ಪಿ) ಅವಲಂಬಿಸಬೇಕಾಗಿದೆ.
ಎಸ್ ಎಲ್ ಎಫ್ ಪಿಯ ತಾತ್ಕಾಲಿಕ ಕಾರ್ಯದರ್ಶಿ ದುಮಿಂದ ದಿಸ್ಸನಾಯಕೆ, ರಾನಿಲ್ ವಿಕ್ರಮಸಿಂಘೆ ಅವರ ಸಂಯುಕ್ತ ರಾಷ್ಟ್ರೀಯ ಪಕ್ಷದ ಜೊತೆ ಕನಿಷ್ಠ ಎರಡು ವರ್ಷಗಳ ಕಾಲ ಸರ್ಕಾರ ರಚಿಸಲು ನಿರ್ಧರಿಸಿದ್ದೇವೆ. ಯುಎನ್ ಪಿ ಸೇರಿ ರಾಷ್ಟ್ರೀಯ ಸಂಯುಕ್ತ ಸರ್ಕಾರವನ್ನು ರಚಿಸಲು ಐವರು ಸದಸ್ಯರ ಸಮಿತಿಯನ್ನು ನೇಮಿಸಲಾಗಿದೆ ಎಂದು ತಿಳಿಸಿದ್ದಾರೆ.
Advertisement