ಪಾಕಿಸ್ತಾನದಲ್ಲಿ ೧೦ ಬಿಲಿಯನ್ ಡಾಲರ್ ಖರ್ಚಿನಲ್ಲಿ ಅಣುಸ್ಥಾವರ ಸ್ಥಾಪಿಸಲಿರುವ ಚೈನಾ

ಚೈನಾ ಬೆಂಬಲಿತ ೧೦ ಬಿಲಿಯನ್ ಡಾಲರ್ ಅಣುಸ್ಥಾವರ ಕೇಂದ್ರರ್ಕ್ ಇಂದು ಪಾಕಿಸ್ತಾನ ಪ್ರಧಾನಿ ನವಾಜ್ ಶರೀಫ್ ಶಂಕು ಸ್ಥಾಪನೆ ಮಾಡಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕರಾಚಿ: ಚೈನಾ ಬೆಂಬಲಿತ ೧೦ ಬಿಲಿಯನ್ ಡಾಲರ್ ಅಣುಸ್ಥಾವರ ಕೇಂದ್ರರ್ಕ್ ಇಂದು ಪಾಕಿಸ್ತಾನ ಪ್ರಧಾನಿ ನವಾಜ್ ಶರೀಫ್ ಶಂಕು ಸ್ಥಾಪನೆ ಮಾಡಿದ್ದಾರೆ.

ಈ ಕರಾಚಿ ಅಣು ಸ್ಥಾವರ ಕೇಂದ್ರ -೨ (ಕನುಪ್ಪ್ ೨) ೧೧೦೦ ಮೆಗಾ ವ್ಯಾಟ್ ವಿದುಚ್ಚಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿರುತ್ತದೆ ಮತ್ತು ಇದರ ಸ್ಥಾಪನೆಗೆ ಚೈನಾ ಸಹಕಾರ ನೀಡಲಿದೆ ಎಂದು ತಿಳಿದುಬಂದಿದೆ. ಪಾಕಿಸ್ತಾನದಲ್ಲಿ ಇಂಧನ ಮತ್ತು ಮೂಲಸೌಕರ್ಯಗಳ ಅಭಿವೃದ್ಧಿಯಲ್ಲಿ ಚೈನಾ ಅತಿ ದೊಡ್ಡ ಹೂಡಿಕೆದಾರನಾಗಿ ಹೊರಹೊಮ್ಮಿದೆ.

"ಈ ಯೋಜನೆ ಪಾಕಿಸ್ತಾನ ಮತ್ತು ಚೈನಾದ ನಡುವಿನ ಆರೋಗ್ಯಕರ ಬಾಂಧವ್ಯಕ್ಕೆ ಉದಾಹರಣೆ. ಪಾಕಿಸ್ತಾನಕ್ಕೆ ಚೈನಾ ಸರ್ಕಾರದ ನೀಡುತ್ತಿರುವ ಮುಂದುವರೆದ ಬೆಂಬಲಕ್ಕೆ ನಾವು ಆಭಾರಿ" ಎಂದು ಶರೀಫ್ ಹೇಳಿದ್ದಾರೆ.

ಸರಿಯಾದ ಸಮಯಕ್ಕೆ ಕೆಲಸ ಪ್ರರಾಂಭವಾಗಲು ಸಹಕರಿಸಿರುವ ಪಾಕಿಸ್ತಾನ ಅಣು ಶಕ್ತಿ ಸಂಸ್ಥೆಗೂ ಶರೀಫ್ ಅಭಿನಂದನೆ ಸಲ್ಲಿಸಿದ್ದಾರೆ.

ಇದು ಪರಿಸರಕ್ಕೆ ಮಾರಕ ಹಾಗೂ ಕಾನೂನನ್ನು ಗಾಳಿಗೆ ತೂರಲಾಗಿದೆ ಎಂದು ಹಲವಾರು ನಾಗರಿಕ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು.

ಈಗ ಕನುಪ್ಪ್ ೨ ರ ಅಭಿವೃದ್ಧಿ ಕನುಪ್ಪ್ ೩ ರ ಸ್ಥಾಪನೆಗೂ ವೇದಿಕೆ ಒದಗಿಸಿಕೊಟ್ಟಿದೆ. ಆ ಸ್ಥಾವರ ಕೂಡ ೧೧೦೦ ಮೆಗಾ ವ್ಯಾಟ್ ವಿದ್ಯುಚ್ಚಕ್ತಿ ಉತ್ಪಾದಿಸುವ ಸೌಲಭ್ಯ ಹೊಂದಲಿದ್ದು, ಚೈನಾದ ಸಾಹಾಯದೊಂದಿಗೆ ತಲೆಯೆತ್ತಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com