ಚೀನಾ ಬಂದರು ಸ್ಫೋಟದಲ್ಲಿ ನಾಶವಾಗಿದ್ದು 5,800 ಜಾಗ್ವರ್ -ಲ್ಯಾಂಡ್ ರೋವರ್ ಕಾರುಗಳು!

ಚೀನಾದ ಬಂದರು ನಗರಿ ಟಿಯಾಂಜಿನ್‌ನಲ್ಲಿ ನಡೆದ ಸ್ಫೋಟದಲ್ಲಿ 5,800 ಜಾಗ್ವರ್ -ಲ್ಯಾಂಡ್ ರೋವರ್ ಕಾರುಗಳು ನಾಶವಾಗಿವೆ ಎಂದು...
ಸ್ಫೋಟದಲ್ಲಿ ನಾಶವಾಗಿರುವ ಕಾರುಗಳು
ಸ್ಫೋಟದಲ್ಲಿ ನಾಶವಾಗಿರುವ ಕಾರುಗಳು

ಬೀಜಿಂಗ್:  ಚೀನಾದ ಬಂದರು ನಗರಿ ಟಿಯಾಂಜಿನ್‌ನಲ್ಲಿ ನಡೆದ ಸ್ಫೋಟದಲ್ಲಿ 5,800 ಜಾಗ್ವರ್ -ಲ್ಯಾಂಡ್ ರೋವರ್ ಕಾರುಗಳು ನಾಶವಾಗಿವೆ ಎಂದು ಭಾರತದ ಕಾರು ನಿರ್ಮಾಣ ಕಂಪನಿ ಟಾಟಾ ಮೋಟಾರ್ಸ್ ಹೇಳಿದೆ.

ಲಿವರ್‌ಪೂಲ್‌ನ ಜಾಗ್ವರ್ -ಲ್ಯಾಂಡ್ ರೋವರ್ ನಿರ್ಮಾಣ ಕಾರ್ಖಾನೆಯಿಂದ ಸಮುದ್ರಮಾರ್ಗವಾಗಿ ಟಿಯಾಂಜಿನ್ ಗೆ ಬಂದಿಳಿದ ಕಾರುಗಳು ಸ್ಫೋಟದಲ್ಲಿ ನಾಶಗೊಂಡಿವೆ.   ಈ ಮೂಲಕ ಕಂಪನಿ 600 ಮಿಲಿಯನ್ ಡಾಲರ್ ನಷ್ಟ ಅನುಭವಿಸಿದೆ.

ಸ್ಫೋಟ ನಡೆಯುವ ಹೊತ್ತಲ್ಲಿ ಟಿಯಾಂಜಿನ್ ನ ವಿವಿಧ ಪ್ರದೇಶಗಳಲ್ಲಿ 5,800ರಷ್ಟು  ಜಾಗ್ವರ್ - ಲ್ಯಾಂಡ್ ರೋವರ್ ಕಾರುಗಳಿದ್ದವು. ಸ್ಫೋಟದ ಹಿನ್ನಲೆಯಲ್ಲಿ ಮುಂಬೈ ಷೇರು ಮಾರುಕಟ್ಟೆಯಲ್ಲಿ ನಿನ್ನೆ ಟಾಟಾ ಮೋಟಾರ್ಸ್‌ನ ಷೇರು ಶೇ. 4 ರಷ್ಟು ಇಳಿಕೆ ಕಂಡು ಬಂದಿತ್ತು.

2008ರಲ್ಲಿ ಬ್ರಿಟನ್‌ನ ಐಷಾರಾಮಿ ಕಾರು ನಿರ್ಮಾಣ ಕಂಪನಿಯಾದ ಜಾಗ್ವರ್ -ಲ್ಯಾಂಡ್ ರೋವರ್‌ನ್ನು ಟಾಟಾ ಮೋಟಾರ್ಸ್ ತನ್ನದಾಗಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com