ಎನ್ಎಸ್ಎ ಮಾತುಕತೆ ಅನಿಶ್ಚಿತತೆಗೆ ಭಾರತವೇ ಕಾರಣ: ಸರ್ತಾಜ್ ಅಜೀಜ್

ಪಾಕಿಸ್ತಾನ ಮಾತುಕತೆಯನ್ನು ಸಂಪೂರ್ಣವಾಗಿ ತಿರಸ್ಕರಿಸಿಲ್ಲ. ಸುಷ್ಮಾ ಸ್ವರಾಜ್, ಪತ್ರಿಕಾಗೋಷ್ಠಿ ಫಲಿತಾಂಶ ಏನಾಗಲಿದೆ ಎಂದು ಕಾಡು ನೋಡುತ್ತೇವೆ...
ಸರ್ತಾಜ್ ಅಜೀಜ್
ಸರ್ತಾಜ್ ಅಜೀಜ್

ಇಸ್ಲಾಮಾಬಾದ್:  ಭಾರತ- ಪಾಕಿಸ್ತಾನ ನಡುವೆ ನಡೆಯಬೇಕಿದ್ದ ಎನ್ಎಸ್ಎ ಮಟ್ಟದ ಸಭೆ ನಡೆಯುವ ಬಗ್ಗೆ ಅನಿಶ್ಚಿತತೆ ಮುಂದುವರೆದಿದೆ. ಇದಕ್ಕೆ ಭಾರತವೇ ಕಾರಣ ಎಂದು ಪಾಕಿಸ್ತಾನ ರಾಷ್ಟ್ರೀಯ ಭದ್ರತಾ ಸಲಹೆಗಾರ ಸರ್ತಾಜ್ ಅಜೀಜ್ ಆರೋಪಿಸಿದ್ದಾರೆ.

ಪಾಕ್-ಭಾರತ ನಡುವಿನ ಎನ್ಎಸ್ಎ ಸಭೆ ಬಗ್ಗೆ ಇಸ್ಲಾಮಾ ಬಾದ್ ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸರ್ತಾಜ್ ಅಜೀಜ್, ಪಾಕಿಸ್ತಾನ ಮಾತುಕತೆಯನ್ನು ಸಂಪೂರ್ಣವಾಗಿ ತಿರಸ್ಕರಿಸಿಲ್ಲ. ಸಂಜೆ ವೇಳೆಗೆ ಭಾರತದ ವಿದೇಶಾಂಗ ಇಲಾಖೆ ಸಚಿವೆ ಸುಷ್ಮಾ ಸ್ವರಾಜ್, ಪತ್ರಿಕಾಗೋಷ್ಠಿ ನಡೆಸಲಿದ್ದಾರೆ. ಅದರ ಫಲಿತಾಂಶ ಏನಾಗಲಿದೆ ಎಂದು ಕಾಡು ನೋಡುತ್ತೇವೆ ಎಂದು ಸರ್ತಾಜ್ ಅಜೀಜ್ ಹೇಳಿದ್ದಾರೆ.

ಕಾಶ್ಮೀರಿ ಪ್ರತ್ಯೇಕತಾವಾದಿಗಳೊಂದಿಗೆ ಮಾತುಕತೆ ನಡೆಸುವುದನ್ನು ಮಾತುಕತೆಯ ಕಾರ್ಯಸೂಚಿಯ ಭಾಗವಾಗಿ ಭಾರತ ನೋಡುವುದು ಆಶ್ಚರ್ಯ ಮೂಡಿಸುತ್ತಿದೆ. ಪ್ರತ್ಯೇಕವಾದಿಗಳೊಂದಿಗಿನ ಮಾತುಕತೆ ಗಣನೀಯವಲ್ಲ ಎಂದು ಸರ್ತಾಜ್ ಅಜೀಜ್ ಹೇಳಿದ್ದಾರೆ. ಅಲ್ಲದೇ ಪ್ರತ್ಯೇಕತಾವಾದಿಗಳಿಗೆ ಗೃಹ ಬಂಧನ ವಿಧಿಸಿರುವುದಕ್ಕೆ ಪಾಕಿಸ್ತಾನ ವಿಚಲಿತಗೊಂಡಿದೆ. ಗೃಹ ಬಂಧನವಿಧಿಸಿರುವುದು ಮೂಲಭೂತ ಹಕ್ಕುಗಳ ಹರಣ ಎಂದು ಸರ್ತಾಜ್ ಅಜೀಜ್ ಹೇಳಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿ, ಕಾಶ್ಮೀರ ವಿಷಯವನ್ನು ಬದಿಗಿಟ್ಟು ತಮ್ಮ ನಿಯಮಕ್ಕೆ ಅನುಸಾರವಾಗಿ ಮಾತನಾಡುತ್ತಾರೆ. ಷರತ್ತು ವಿಧಿಸಿ ಕಾಶ್ಮೀರ ವಿಷಯವನ್ನು ಬದಿಗಿರಿಸಿದರೆ ಭಾರತದೊಂದಿಗೆ ಗಂಭೀರ ಮಾತುಕತೆ ನಡೆಸಲು ಸಾಧ್ಯವಿಲ್ಲ ಎಂದು ಪಾಕ್ ಎನ್ಎಸ್ಎ ಸರ್ತಾಜ್ ಅಜೀಜ್ ಸ್ಪಷ್ಟಪಡಿಸಿದ್ದಾರೆ.

ಗಡಿ ಪ್ರದೇಶದಲ್ಲಿ ಭಾರತ ನಿರಂತರವಾಗಿ ಕದನ ವಿರಾಮ ಉಲ್ಲಂಘಿಸುತ್ತಿದೆ. ಇದರಿಂದಾಗಿ ಪಾಕಿಸ್ತಾನ ನಾಗರಿಕರಿಗೆ ತೊಂದರೆಯುಂಟಾಗುತ್ತಿದೆ. ಪಾಕಿಸ್ತಾನದಲ್ಲಿ ಭಾರತದ ರಾ ಮಧ್ಯಪ್ರವೆಶಿಸುತ್ತಿರುವುದಕ್ಕೆ ಸಂಬಂಧಿಸಿದ ಕಡತಗಳನ್ನು ತರುವುದಾಗಿ ಸರ್ತಾಜ್ ಅಜೀಜ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com