
ವಾಷಿಂಗ್ಟನ್: ಉತ್ತರಾ ಇರಾಕ್ ನಲ್ಲಿ ಅಮೆರಿಕಾ ನಡೆಸುತ್ತಿರುವ ವಾಯುದಾಳಿಯಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಕಮಾಂಡ್ ನಂತರ ಸ್ಥಾನದಲ್ಲಿರುವ ಉಗ್ರ ಫಾದೀಲ್ ಅಹಮದ್ ಅಲ್ ಹಯಾಲಿ ಬಲಿಯಾಗಿದ್ದಾನೆ ಎಂದು ಅಮೆರಿಕಾದ ವೈಟ್ ಹೌಸ್ ಹೇಳಿದೆ.
ಇದೇ ವೇಳೆ ಆಗಸ್ಟ್ 18 ರಂದು ಮಕ್ಸಲ್ ಬಳಿ ವಾಹನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಹಾಜಿ ಮಸ್ತಾನ್ ಹಾಗೂ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ದಿ ಲೇವಂಟ್(ಇಸಿಲ್) ಮಾಧ್ಯಮ ಆಪರೇಟರ್ ಅಬು ಅಬ್ಬುಲ್ಲಾ ಎಂಬಾತನು ಮೃತಪಟ್ಟಿದ್ದಾನೆ ಎಂದು ಶುಕ್ರವಾರ ವೈಟ್ ಹೌಸ್ ಹೇಳಿದೆ.
ಇಸಿಲ್ ಸಮಿತಿ ಸದಸ್ಯನಾಗಿರುವ ಅಲ್ ಹಯಾಲಿ ಇಸಿಲ್ ಮುಖಂಡ ಅಬು ಬಕರ್ ಅಲ್ ಬಾಗ್ದಾದಿಯ ಪ್ರಥಾಮಿಕ ಸಂಯೋಚಕನಾಗಿದ್ದ. ಅಲ್ ಹಯಾಲಿ ಶಸ್ತ್ರಾಸ್ತ್ರ ಖರೀದಿಗೆ ಹಣ ರವಾನೆ, ಸ್ಫೋಟಕಗಳು, ವಾಹನಗಳು ಮತ್ತು ಜನರನ್ನು ಇರಾಕ್ ಮತ್ತು ಸಿರಿಯಾಗೆ ರವಾನಿಸುವ ಕಾರ್ಯ ನಿರ್ವಹಿಸುತ್ತಿದ್ದ ಎಂದು ವೈಟ್ ಹೌಸ್ ನ ರಾಷ್ಟ್ರೀಯ ಭದ್ರತಾ ಮಂಡಳಿ ವಕ್ತಾರ ನೆಡ್ ಪ್ರೈಸ್ ತಿಳಿಸಿದ್ದಾರೆ.
Advertisement